Wednesday 12 February 2014

ಹೊರಟಿಹಳು ಅವಳು
ಮನಸಿಂದ ಹೊರಗೆ
ನನ್ನನ್ನು ತೊರೆದು
ಬೇರೊಂದು ಮನೆಗೆ...

ಕಾಡುವ ಕನಸುಗಳಲ್ಲಿ
ಮಾಸದ ನೆನಪುಗಳಲ್ಲಿ
ಅಚ್ಚಳೀಯದೆ ನೀನಿರಲು
ಮುಚ್ಚಳಿಕೆ ನಿನಗೆ ಈ ಹೃದಯಾ...

ರಕ್ತದ ಕಣ-ಕಣದಲಿ
ಹೃದಯದ ಪ್ರತಿ ಬಡಿತದಲಿ
ನನ್ನಲ್ಲಿ ನೀನು ಅನುರಕ್ತವಾಗಿರಲು
ಬೇರೊಂದು ಮನದ ಕರಿನೆರಳು ಕಾಡುತಿದೆ...

ಸಂತಸದ ಹೃದಯದಲ್ಲಿಗ
ಅಲೆಗಳ ಅಪ್ಪಳಿಸುವಿಕೆ
ಅಗಲುವಿಕೆಯ ನೋವಿನಲಿ
ಸಾವಿರ ನೆನಪುಗಳ ದಾಳಿ...

ಗೆಳತಿ ನನ್ನ ನೀ ತೊರೆದು
ಸೇರಬಹುದು ಬೇರೊಂದು ಮನೆಯ
ಆದರೆ ನೀ ಸೇರಬಲ್ಲೆಯಾ
ಬೇರೊಂದು ಮನವ..?

ರಾಜ್..!!
ಕಡಲಿನ ದಡದೊಳಗೆ
ಮರಳಿನ ಮಡಿಲೊಳಗೆ
ಒಡನಾಡಿ ನೀ ನನ್ನ
ಒಬ್ಬಂಟಿ ಮಾಡಿದೆಯಾ…

ಆ ಸಂಜೆ ತಂಪಲ್ಲಿ
ಮರಳಿನರಮನೆ ಕಟ್ಟಿ
ಅಲೆಗಳ ಆಲಿಂಗನಕೆ
ಮೈಮರೆತ ನೆನಪಿನ್ನು ಹಸಿರು…

ಮರಳದಂಡೆಯ ಮೇಲೆ
ಹೆಜ್ಜೆ ಗುರುತುಗಳ ಚಿತ್ತಾರ
ಅಲೆಗಳಿಗೆಕೊ ಅವಸರ
ಅಳಿಸಿ ಹಾಕುವ ಕಾತರ…

ಬಾ ಗೆಳೆಯಾ ಮತ್ತೊಮ್ಮೆ
ಜೊತೆಯಾಗಿ ನಡೆವ
ಅಲೆಗಳ ಅಹಂಕಾರಕ್ಕೆ
ಪ್ರತ್ಯುತ್ತರ ಕೊಡುವ…

ಕಡಲು ಕರೆಯುತಿದೆ
ಹೃದಯ ಕೊರಗುತಿದೆ
ಬಾ ಬೇಗ ಗೆಳೆಯಾ
ನಿನಗಾಗಿ ಕಾಯುವೇನು…!!

ರಾಜ್…!
ಬೇಕಿಲ್ಲ ನನಗೆ
ಸಕಾ೯ರದ ವಸತಿ
ಯೊಜನೆ
ಆಶ್ರಯದ ಮನೆ…

ನಾನೀಗ
ಹಾಯಾಗಿದ್ದೆನೆ
ನನ್ನವಳ ಹೃದಯದಲ್ಲಿ
ಬೆಚ್ಚನೆ…!!

ರಾಜ್…!!
ಗೆಳತಿ
ಹೀಗೆ ಒಮ್ಮಿಂದೊಮ್ಮೆಲೆ
ನಿನ್ನ ಹೃದಯದಿಂದ
ಒಕ್ಕಲೆಬ್ಬಿಸುವ
ಮೊದಲೇ ಹೇಳಿದ್ದರೆ

ಬೇರೊಂದು
ಹೃದಯಕ್ಕೆ
ಪಕ್ಷಾಂತರ
ಮಾಡುತ್ತಿದ್ದೆ :-P:-P

ರಾಜ್…!!
ನೀಲಿ ಕಂಗಳ ಹುಡುಗಿ
ನಿನ್ನ ಮೇಲೆಕೊ ಮನಸು
ತುಸು ಒಲವ ತೊರಿ ನೀ
ಬೆಳಗೆನ್ನ ಈ ಬದುಕು…

ಕನಸು ಕಂಗಳ ಹುಡುಗ ನಾ
ಬರಿ ನಿನ್ನ ಕನಸುಗಳೆ
ಹೊಳೆವ ಆ ಕಂಗಳ ನೊಡಿ ನಶೆಯು ಅಮಲೆರುತಿದೆ…

ಎಲ್ಲ ಮರೆತ ಧ್ಯಾನಿ ನಾನೀಗ
ಏಕಾಂತ ಮೌನದಲೂ ನಿನ್ನ ಕನವರಿಕೆ
ಹೃದಯದ ತುಂಬೆಲ್ಲ
ಸಹಿಸದ ಚಡಪಡಿಕೆ…

ಪಡುವಣದಿ ಭಾಸ್ಕರನೆ
ಮನೆ ಸೇರೊ ನೀ ಬೇಗ
ಬೆಳದಿಂಗಳ ಬೆಳಕಿನಲಿ
ಅವಳಂದವ ನೊಡೊ ತವಕ…

ನೀಲಿ ಕಂಗಳ ಹುಡುಗಿ
ನಿನ್ನ ಮೇಲೆಕೊ ಮನಸು
ಒಲವು ತುಂಬಿದ ಹೃದಯ
ಕಣ್ಣ ತುಂಬಿವೆ ಕನಸು…!!

ರಾಜ್…!!

ಅಗೊ ಅದಾರೊ
ಅನತಿ ದೂರದಲ್ಲಿ
ಬರಿ ನೆರಳು ಕಾಣುತಿದೆ
ಕೈ ಬೀಸಿ ಕರೆಯುತಿದೆ…

ತಿಳಿ ಬೆಳದಿಂಗಳಿರುಳಲ್ಲಿ
ಚಳಿಗಾಲದ ಚಳಿಯಲ್ಲಿ
ಮೈಯೆಲ್ಲಾ ಬೆವರುತಿದೆ
ಕೈ -ಕಾಲು ನಡಗುತಿವೆ…

ಸುತ್ತಲು ಮುತ್ತಿದೆ
ಕಪ್ಪನೆ ಕತ್ತಲು
ಚಂದಿರ ಕೂಡಾ
ಮೋಡದಿ ಮುಚ್ಚಲು…

ಹತ್ತಿರ ಬರುತಿದೆ ನೆರಳದು ತೀರ
ಹೃದಯದ ಬಡಿತ ಬಲು ಜೊರ
ಓಡುವ ಭರದಲಿ ಜಾರಿ ಬಿದ್ದೆ
ನಿದ್ರೆಯಲ್ಲಿ ನನ್ನವಳ ಝಾಡಿಸಿ ಒದ್ದೆ… :-P:-P

ರಾಜ್…!!

ಗೆಳತಿ
ನಿನ್ನೊಡನೆ
ಹಗಲಿರುಳು
ಪ್ರತಿ ಸಮಯ
ಮಾತನಾಡುವ ಬಯಕೆ…

ಆದರೆ…

ನನ್ನ
ಮೊಬೈಲಿನ
ಹೊರಹೊಗುವ ಕರೆ
2.ರೂಪಾಯಿ
ಪ್ರತಿ ನಿಮಿಷಕ್ಕೆ…

ಒಳ ಬರುವ ಕರೆ
ಉಚಿತ
ನೀ ಮಾಡಿದರೆ ಫೊನು
ಮಾತನಾಡುವೆನು
ಖಚಿತ…!!

ರಾಜ್…!!
ಕಾಂಕ್ರೀಟು ಕಾಡಿನಲಿ
ಕಣ್ಮರೆಯು ಗುಬ್ಬಚ್ಚಿ
ನೆನಪಿನ ಪುಟತೆಗೆದು
ಇಣುಕಿದರು ನಾಪತ್ತೆ…

ಚಿಂವ್ ಚಿಂವ್ ಗುಟ್ಟುತ್ತ
ಕಣ್ಮನವ ಸೆಳೆಯುತ್ತ
ಸಂತಸದಿ ಹಾರಾಡುತ್ತಿದ್ದ
ಕಲರವವು ಈಗೀಲ್ಲ…

ಮನೆಯ ಮೂಲೆಯಲ್ಲಿ
ಗಿಡಮರಗಳ ತುದಿಯಲಿ
ಗೂಡುಗಳ ಕಟ್ಟುತ್ತಾ
ಗುಬ್ಬಚ್ಚಿಗಳ ದಂಡು…

ಮನುಷ್ಯನ ಅತೀ ಆಸೆಗೆ
ಮರಗಳ ಮಾರಣಹೋಮ
ಕಾಂಕ್ರೀಟಿನ ಕಾಡಿನಲಿ
ಗುಬ್ಬಚ್ಚಿಗಳ ನಿನಾ೯ಮ…

ಆಧುನಿಕತೆಯ ಆಡಂಬರಕೆ
ಎಲ್ಲವೂ ಯಾಂತ್ರಿಕತೆಯವಾದ
ಮುಂದಿನ ಸಂತತಿಗಳಿಗೆ
ಯಂತ್ರಗಳ ಗುಬ್ಬಚ್ಚಿಯ ಒಡನಾಟ…!!

ರಾಜ್…!!

ಅವಳು
ನನ್ನ ನೋಡಿ
ತಿರುತಿರುಗಿ ನಕ್ಕಾಗ

ನಾ
ನಗುವುದನ್ನೆ
ಮರೆತಾಗಿದೆ

ನಗುವೆ
ನನ್ನ ನೋಡಿ
ಅಣಕಿಸಿ ನಗುತಿದೆ…!!

ರಾಜ್…!!
ಮೊದಮೊದಲು
ನಿನ್ನ ಪ್ರೀತಿಯ
ಸ್ವಗ೯ದಲ್ಲಿ ತೇಲಾಡಿ…

ನೀ ದೂರಾದ
ಘಳಿಗೆ
ಈಲ್ಲೆ
ನರಕವನ್ನು ಕಂಡೆ…!!

ರಾಜ್…!!
ಗೆಳತಿ
ಮೊದಲ ಬಾರಿ
ನಿನ್ನ ನೋಡಿ
ಆದ ಆಘಾತಕ್ಕೆ

ವಿಮೆ
ಮಾಡಿಸಿ
ಈಗಲೂ ಕಂತು
ಕಟ್ಟುತ್ತಿದ್ದೆನೆ
ಚಾಚು ತಪ್ಪದೆ…!!

ರಾಜ್…!!
ಇನಿಯಾ
ಅಂದು
ನಿನ್ನೊಡನೆ
ಏಕಾಂತದಲ್ಲಿ
ಕೂಡಿಕೊಂಡು
ಕಂಡ
ಕನಸಿಗೀಗ
.
.
.
ಮೂರು
ತಿಂಗಳು…!!

ಮನಸ ಜೊತೆಯಲ್ಲೆ
ಕನಸ ಕದ್ದವಳೆ
ಪ್ರತಿರಾತ್ರಿ ನಿದಿರೆಯಲಿ
ಬಹುವಾಗಿ ಕಾಡಿದಳೆ…

ಬೆಚ್ಚನೆಯ ಹೃದಯದಲಿ
ಅಚ್ಚಳಿಯದೆ ಉಳಿದು
ಪ್ರತಿಯಾಗಿ ಸುಂಕವ
ಕೊಡದೆ ಉಳಿದವಳೆ …

ಮೆಲ್ಲನೆ ಬಳಿಬಂದು
ಮುತ್ತಿನ ಮಳೆಗರೆದು
ಹಗಲಿನಲಿ ಚಂದ್ರನ
ತೊರಿಸಿ ಹೊದವಳು…

ಬರಲಿಲ್ಲ ಗೆಳೆಯಾ
ಹಿಂತಿರುಗಿ ಅವಳು
ಕೈಗೆ ಸಿಗದ ತಂಗಾಳಿಯಂತೆ
ಬದುಕಲ್ಲಿ ಸಿಕ್ಕ ಮಾಯಾಮೃಗವು…!!

ರಾಜ್…!!
ಗೆಳೆಯ

ಕಾದ
ಕಬ್ಬಿಣದ
ಕಾವಿಗಿಂತ
.
.
ಹೆಚ್ಚು
.
.
ಬರಸೆಳೆದು
ನೀ ಕೊಡುವ
ನಿನ್ನಪ್ಪುಗೆಯ
ಬಿಸಿ…!!
ಮರೆವಿನಂಥ ಕಾಯಿಲೆ
ಬರದು ಯಾಕೋ ಈಗಲೆ
ನಿನ್ನ ಮರೆವ ಹಂಬಲ
ಸಿಗದು ಮನದ ಬೆಂಬಲ...

ನನ್ನ ಮರೆತ ನಿನ್ನಯ
ಒಮ್ಮೆ ನೋಡುವಾಸೆಯು
ಕನಸು ಕೊಲ್ಲೊ ಮುನ್ನವೆ
ಮಾತನಾಡುವಾಸೆಯು...

ಮನಸಿನಾಳದಲಿ ಮೊಳೆತ
ನಿನ್ನ ನೆನಪಿನ ಸಸಿಗಳ
ಚಿವುಟಿ ಹಾಕಲು ಏಕೊ
ನೆರಳಿಗೂ ಕೂಡಾ ಹಿಂಸೆ...

ನಿನ್ನ ಹೊರತು ಕಣ್ಣಿಗೆ
ಬೇರೆ ಕನಸು ಬಾರದು
ಎಲ್ಲ ಮರೆಯಲ್ಹೇಳಿದ
ಮನಸಿಗೆ ನನ್ನ ಮೇಲೆಯೆ ಮುನಿಸು...

ಓ ಮರೆವು ಎನ್ನೊ ಕಾಯಿಲೆ
ಬಂದು ಅಪ್ಪಿಕೊ ಒಮ್ಮೆಲೆ
ಮರೆಯದುದೆಲ್ಲವ ಮರೆಸಿಬಿಡು
ಅವಳ ನೆನಪದು ಅಳಿಸಿಬಿಡು...!!!

ರಾಜ್..!!
ಅತೀ
ಆಸೆ
ಎನಗಿಲ್ಲ
ಗೆಳತಿ…

ಇದ್ದಿದ್ದರೆ
ನಿನಗಿಂತ
ಚೆಲುವೆಯ
ನಾ
ಹುಡುಕುತ್ತಿದ್ದೆ…!!
ಅರೆಘಳಿಗೆ
ಮುದ
ನೀಡುವ
ನೆನಪಿನ
ಗುಳಿಗೆ…

ಅಮಲಿಳಿದ
ಮರುಫಳಿಗೆ
ಮತ್ತದೇ
ಖಾಲಿ ಖಾಲಿ
ಭಾವನೆಗಳ
ಸುಳಿಗೆ… !

ರಾಜ್…!!
ನೀನೊಮ್ಮೆ ತೆಗೆದುನೊಡು
ನೆನಪಿನ ಪುಟಗಳ
ಜೊತೆ ಸೇರಿ ಕಂಡಂತಹ
ರಂಗು ರಂಗಿನ ಕನಸುಗಳ…

ಅಲ್ಲಲ್ಲಿ ಕಂಡಾವು
ಮುನಿಸಿಕೊಂಡ ಹಾಳೆಗಳು
ಏಕಾಂತದಲಿ ಕಳೆದಂಥ
ಖಾಲಿ ಖಾಲಿ ಭಾವಗಳು…

ನಡುವಲ್ಲಿ ನಗುತಿರುವ
ಮೌನದ ಮಾತುಗಳು
ಮಸುಕು ಮಸುಕಾಗಿರುವ
ಕಣ್ಣೀರ ಸಾಲುಗಳು…

ನೀನೊಮ್ಮೆ ತೆಗೆದುನೊಡು
ನೆನಪಿನ ಪುಟಗಳ
ಸಿಹಿಗಿಂತ ಕಹಿ ಹೆಚ್ಚಿರೊ
ಬದುಕಿನ ಪುಟಗಳ…!!

ರಾಜ್…!
ತನ್ನೊಡೆಯನ
ಹೃದಯ ಕದ್ಗ
ಒಡತಿಗಾಗಿ
ಹುಡುಕುತ್ತಲಿತ್ತು
ಹೃದಯಾ…

ಅದಕ್ಕೇನು
ಗೊತ್ತು
ಒಡೆಯನ
ಹೃದಯ ಕದ್ದ
ಒಡತಿ
ಈಗ
ಬೇರೊಬ್ಬನ ಸತಿ…!!
ಮೈ - ಮನದೊಳಗೆ
ನರ - ನಾಡಿಯೊಳಗೆ
ನಿನ್ನದೇ
ನಶೆ
ತುಂಬಿರಲು…

ಅಗ್ಗದ
ಮದ್ಯವು
ಸರಿಸಾಟಿಯಾಗುವುದೆ…!!

ರಾಜ್…!!