Friday 19 December 2014

ಇಡಿಯಾಗಿ ಬದುಕಿನಲಿ
ಹಿಡಿಯಷ್ಟು ಪ್ರೀತಿಯನು
ಕೊಡದೆ ಕಾಡಿದಳು
ಕೊನೆವರೆಗೂ ಕೋಮಲೆಯು...

ತನ್ನ ಕನಸುಗಳೆಲ್ಲ
ಹೃದಯದಲಿ ಬಚ್ಚಿಟ್ಟು
ತನಗವಳೆ ಸರ್ವಸ್ವ
ಎಂಬ ಭ್ರಮೆಯೊಳಗೆ ಬದುಕಿದನು...

ಎದೆಯೊಳಗೆ ನೋವಿಟ್ಟು
ಹುಸಿನಗೆಯ ಲೇಪನದಿ
ಕೊನೆವರೆಗೂ ಅವಳ
ಖುಷಿಗಾಗಿ ಮಿಡಿದಿಹನು...

ಸಿಗದು ಮುರಳಿ ಪ್ರೀತಿಯೆಂದು
ಅರಿತ ರಾಧೆ ಕೂಡ ಒಮ್ಮೆ
ದೂರಲಿಲ್ಲ ಕೃಷ್ಣನನ್ನು
ದೂರದಿಂದ ಸುಖವ ಬಯಸಿ...

ನನ್ನ ರಾಧೆಗೇಕೊ ಕಾಣೆ
ಕರುಣೆ ಮಾತ್ರ ಬಾರಲಿಲ್ಲ
ನೆನಪು ಕೊಂದು ಬಿಟ್ಟರೂನು
ಮನಸು ಮಾತ್ರ ಮರೆಯುತಿಲ್ಲ...

ಇಡಿಯಾಗಿ ಬದುಕಿನಲಿ
ಹಿಡಿಯಷ್ಟು ಪ್ರೀತಿಯನು
ಕೊಡದೆ ಕಾಡಿದಳು
ಕೊನೆವರೆಗೂ ಕೋಮಲೆಯು...!!!

ರಾಜ್..!!

Monday 15 December 2014


ಕಾಣದ ದೇವರು ಕರುಣೆಯ ತೋರದೆ
ಕಾಣುವ ದೇವರ ತಾ ಕರೆದೊಯ್ದ
ಲೋಕದ ಕಾಯಕ ಮುಗಿಸಿದ ತಾಯಿ
ತಬ್ಬಲಿ ಮಾಡಿ ಹೋದಳು ದೂರ…

ಏನಂತ ಬರೆಯಲಿ ನಾನು
ಪದಗಳು ಮರಣಿಸಿವೆ
ಹೃದಯದ ತುಂಬೆಲ್ಲ ಅಮ್ಮನ ನೆನಪುಗಳೆ
ಈ ಬದುಕು ಮಾತ್ರ ಖಾಲಿ -ಖಾಲಿ…

ಹೆತ್ತಬ್ಬೆಯ ಮರಣ
ದಿಕ್ಕು ತಪ್ಪಿದೆ ಪಯಣ
ದುಃಖದ ಕರಿಮೋಡ
ಆ ವಿಧಿಯ ಅಟ್ಟಹಾಸ…

ನನ್ನುಸಿರು ಇರೊವರೆಗು
ನಿನ್ನಾಸೆಗಳ ಪೊರೈಸುವೆ
ಹರಸು ನೀ ನಮ್ಮನ್ನು
ನಿನ್ನಾತ್ಮಕೆ ಶಾಂತಿಯ ಕೋರುವೆ…!!

(ಅಗಲಿದ ಅಮ್ಮನಿಗೆ ಅಕ್ಷರಗಳ ಅಪ೯ಣೆ)
ಕಾಲನ
ಹೊಡೆತಕ್ಕೆ
ಸಿಲುಕಿ
ಅವಳ
ಕಲ್ಲು
ಬಂಡೆಯಂತಹ
ಹೃದಯ
ಕರಗುತ್ತಿದೆ
ಅದರೆ
ಪ್ರತಿಕ್ರಿಯಿಸಲು
ಸತ್ತ
ನನ್ನ
ಹೃದಯದ
ಭಾವನೆಗಳ
ಕಳೆಬರಹ
ಎಲ್ಲಿಂದ
ಹುಡುಕಿ
ತರಲಿ…!
ನಿನ್ನ ಮನದೊಳಗೆ
ಮುಸುಕಿನ ಗುದ್ದಾಟ ಸ್ನೇಹದ ಸಲುಗೆಯೊ ಪ್ರೀತಿಯ ಸೆಳೆತವೊ
ಅರಿಯದೆ ನಾ ಸೋತೆ…

ಕಣ್ಣ ಭಾಷೆಯು ಕಥೆಯನು ಹೇಳಿದೆ
ತುಟಿಯ ಅಂಚಲಿ ಮೌನದ ವಾಸ
ಮನದೊಳು ಮೊಳಗಿದೆ ಯುದ್ಧದ
ಘೋಷಣೆ ಸ್ನೇಹ -ಪ್ರೀತಿಯ ಭಾವಗಳ…

ಅರಿತುಕೊ ಹೆಣ್ಣೆ ಕಳೆಯುವ ಮುನ್ನ
ಪ್ರೀತಿಯ ಬಂಧಕೆ ಸ್ನೇಹವೇ ಸೇತುವೆ
ಕಾದ ಪ್ರೀತಿಗೆ ಕೊಲ್ಲುವುದು ತರವೇ…

ನನ್ನ ಹೃದಯದ ಬಡಿತವ
ಕಿವಿಗೊಟ್ಟು ಕೇಳು ಮನಸಾರೆ ಒಮ್ಮೆ
ಪ್ರತಿ ಉಸಿರುಸಿರಲು ನಿನ್ನ ಹೆಸರೇನೆ
ನಿನೊಪ್ಪದೆ ತೋರಿದ ಜಾಣ್ಮೆಯ ಮರೆವು…

ನಿನ್ನ ಮನದೊಳಗೆ
ಅವಿತಿರುವ ಭಾವನೆಗಳ
ಅರಿಯದ ಧ್ಯಾನಿ ನಾನು
ಅರಿತಿರುವ ಮೌನಿ ನೀನು…!!

rAಜ್…!!

ನಿನ್ನ ಕೆನ್ನೆ ಗುಳಿಯಲ್ಲೊಂದು
ನನ್ನದೊಂದು ಕನಸಿದೆ
ಕಣ್ಣ ನೋಟ ಕೂಡ ಮಿಂಚಿ
ಕಳ್ಳ ಸಂಚು ಮಾಡಿದೆ…

ಹೃದಯಕ್ಕೀಗ ಅಂಟುರೋಗ
ಬೆಸೆದ ನಿನ್ನ ನಂಟಿನೊಂದಿಗೆ
ಜಂಟಿಯಾಗು ಬೇಗ ನೀನು
ಒಂದು ತಂಟೆ ಮಾಡದೆ…

ತುಂಟತನಕೆ ತಾಯಿ ನೀನು
ನೆನಪಿನೊಳಗೆ ನುಸುಳಿ ಬಂದು
ಕನಸಿನಲ್ಲೂ ಹಾಜರಾಗುವ
ನನ್ನ ಪ್ರೀತಿಯ ದಾಸವಾಳ…

ಮನದಿ ಒಲವ ರಂಗವಲ್ಲಿ
ಬಿಡಿಸಿದಂಥ ಕೋಮಲಾಂಗಿ
ನಿನ್ನ ಕೆನ್ನೆ ಗುಳಿಯಲೊಂದು
ನನ್ನದೊಂದು ಕನಸಿದೆ…!!

ರಾಜ್…!!
ಅರಿಯದ ಬಂಧವು
ಜೊತೆಯಾದೊಡನೆ
ಸಲುಗೆಯ ಸ್ನೇಹದಿ
ಪ್ರೀತಿಯ ನೆರಳೇ…

ನಂಬಿಕೆ ತಳಹದಿ
ಬೆಳೆಯುವ ಪ್ರೀತಿಗೆ
ಮನಸಿನ ಹಂಬಲ
ಕನಸಿನ ಬೆಂಬಲ…

ಮುನಿಸಿನ ಗಾಳಿ
ಸುಳಿದರೆ ನಡುವೆ
ಕನಸಿಗೂ -ಮನಸಿಗು
ನೋವಿನ ನರಳು…

ವಿರಹದ ಉರಿಯಲಿ
ಹೃದಯದ ಯಾತನೆ
ಮನಗಳ ನಡುವಲಿ
ಅಗಲಿಕೆ ವೇದನೆ…

ಕನಸದು ಕನವರಿಸಿದೆ
ಮನಸಿನ ಜೊತೆ ಸೇರಿ
ಹುಡುಕುತ ದಣಿದು ಕೇಳಿವೆ ಎರಡು
ಎಲ್ಲಿದೆ ಪ್ರೀತಿಯ ನೆರಳು…?

ರಾಜ್…!!