Tuesday 3 December 2013

ಬಿಸಿಲು-ಮಳೆ-ಗಾಳಿ ಲೆಕ್ಕಿಸದೆ
ಬೆವರಿನ ಜೊತೆ ನೆತ್ತರನು ಹರಿಸಿ
ನಾಡಿನ ಜನತೆಯ ಹಸಿವನ್ನು ನೀಗಿಸುವ
ನೇಗಿಲ ಯೋಗಿಯ ಕಣ್ಣೀರ ಕಥೆಯಿದು...

ನಮ್ಮೆಲ್ಲರ ಉಸಿರಾಟಕೆ
ತನ್ನುಸಿರ ಕಡೆಗಣಿಸಿ
ಭೂತಾಯಿ ಮಡಿಲಲ್ಲಿ
ಹಸಿರೆಲ್ಲೆಡೆ ತಾ ಬೆಳೆಸಿ...

ಬಿತ್ತಿದ ಬೆಳೆಗಳಿಗೆ
ತಕ್ಕ ಫಲ ಪಡೆಯದೆ
ಮೋಸಗಾರರ ಜಾಲದಲಿ
ಬಲಿಪಶೂ ತಾನಾದ...

ಬಡತನದ ಬೇಗೆಯಲಿ
ಕೊನೆಗವಗೆ ಸಿಕ್ಕಿದ್ದು
ಕಣ್ಣೀರು-ನಿಟ್ಟುಸಿರು
ಮರಣದ ಉಡುಗೊರೆ...

ಕಣ್ಣಿದ್ದು ಕುರುಡರು ನಾವು
ಕಾಳಜಿಯು ನಮಗಿಲ್ಲ
ನೊಂದರೆ ಅನ್ನದಾತ
ತೊಂದರೆಯು ನಮಗೆಲ್ಲ...!!!

ರಾಜ್..!!
ಗೆಳತಿ ನೀನಂದು ಬಿತ್ತಿ ಹೋದ
ಸವಿಗನಸಿನ ಬೀಜ
ಕುಡಿಯೊಡೆದು ಚಿಗುರಿದೆ
ನನ್ನ ಕಣ್ಣೀರಿನಲ್ಲಿ…

ಒಮ್ಮೆ ಬಂದು ಚಿವುಟಿ ಹಾಕು
ಬಲಿತು ಹೆಮ್ಮರವಾಗುವ ಮುನ್ನ
ನೀನಿರದ ಕನಸೇತಕೆ
ಮರೆಯದ ನೆನಪುಗಳು ಸಾಕಲ್ಲವೇ…!!!

ರಾಜ್…!!
ನಿನ್ನ ಪ್ರತಿಯೊಂದು
ನಾಡಿ ಮಿಡಿತದಲ್ಲಿ
ನಾನಿರುವೆನೆಂದು
ಹೇಳಿದ್ದಳಾಕೆ...

ಇಂದು
ಹೃದಯ ಬಡಿತವೆ
ನಿಂತು ಹೋಗಿದೆ
ನನ್ನವಳ ಸುಳಿವಿಲ್ಲ…!!

ರಾಜ್…!!
ಮೇಲು - ಕೀಳೆಂದು
ಮಡಿ - ಮೈಲಿಗೆಯೆಂದು
ಇಲ್ಲದ ಸೋಗನ್ನು
ಹಾಕುವ ಜನಗಳು…

ಕುಡಿಯುವ ನೀರಿಗೆ
ಉಸಿರಾಡೊ ಗಾಳಿಗೆ
ಭೂತಾಯಿ ಮಡಿಲಿಗೆ
ಮಡಿ - ಮೈಲಿಗೆಯುಂಟೆ...

ಹಾರಾಡೊ ಹಕ್ಕಿಗೆ
ಈಜಾಡೊ ಮೀನಿಗೆ
ಬೇರೆಲ್ಲ ಪ್ರಾಣಿಗಳಿಗೆ
ಜಾತಿ - ಮತವುಂಟೆ...

ನಾಲ್ಕು ದಿನವಷ್ಟೇ
ಬದುಕುವ ಬದುಕಿನಲಿ
ಭೇದ ಭಾವದ ಗೊಡವೆ
ನಿನಗೇಕೊ ಮಾನವ …!!!

ರಾಜ್…!!
ದಾರಿಯ ತಪ್ಪಿರುವೆ
ಸರಿದಾರಿ ಮರೆತಿರುವೆ
ಗುರಿ ಮುಟ್ಟೊ ತವಕದಲಿ
ನಿನ್ನಯ ಹುಡುಕಾಟದಲಿ...

ನೀ ತೊರೆದ ಬದುಕಿನಲಿ
ಕನಸುಗಳ ಬೆಂಬತ್ತಿ
ನೆನಪುಗಳ ಜೊತೆಯಲ್ಲಿ
ಅಲೆಮಾರಿ ನಾನೀಗ...

ಅಲೆದಲೆದು ಬಳಲಿಹೆನು
ಬಹುದೂರಾ ಬಂದಿಹೆನು
ಗುರಿ ನೀನೆಯಾಗಿರಲು
ಪುಃನ ಸೇರೊ ಬಯಕೆಯಲಿ...

ಸರಿದಾರಿ ಸಿಗುವುದೆ
ಅಲೆಮಾರಿ ಕನಸಿಗೆ
ಸಂತಸವ ಮರಳುವುದೆ
ಹಳಿತಪ್ಪಿದ ಬದುಕಿಗೆ...!!!

ರಾಜ್..!!
ಒಂದೊಮ್ಮೆ ನಾ
ಹಿಂದಿರುಗಿ ಬಂದರೆ
ನನ್ನ ಅಪ್ಪಿ ಒಪ್ಪುವೆಯಾ
ಗೆಳೆಯಾ..!!

ಮೊದಲಿನಂತೆ ನನ್ನ
ಬಿಗಿದಪ್ಪಿ ಮುದ್ದಿಸುವೆಯಾ
ತಂಗಾಳಿ ಕೂಡಾ ನಡುವೆ
ನುಸುಳದಂತೆ..!!

ನಿನ್ನಿಂದ ದೂರಾಗಿ 
ಬಳಲಿರುವೆ ಬಹುವಾಗಿ
ಕ್ಷಮೆ ತೋರಿ ನನ್ನ
ಪ್ರೀತಿಯ ತೋರುವೆಯಾ..!!

ಕಣ್ಣಂಚಿನಲ್ಲಿ ಹುಸಿ ಕೋಪ ತೋರಿ
ತುಟಿಯೊಳಗೆ ಕಿರು ನಗೆಯ ತಂದು
ಮಾಡಿದ ಜಗಳವ ಮರೆತು ನೀನೊಮ್ಮೆ
ಪುಃನ ಬೈದು ನನ್ಸನ್ನು ಸಂತೈಸುವೆಯಾ..!!
ಎಲ್ಲಿ ಹೋಯಿತು
ಆ ನಿಷ್ಕಲ್ಮಶ ಪ್ರೀತಿ
ರಾಧಾ -ಕೃಷ್ಣರ
ಪ್ರೀತಿಯ ರೀತಿ…

ಮೀರೆಯು ಕಾದ 
ಮಾಧವನ ಪ್ರೀತಿ
ಒಲಿಯದೆ ಕಾಡಿದ
ಮಧುರ ಅನುಭೂತಿ…

ಎಲ್ಲೆಲ್ಲು ತುಂಬಿದೆ
ಮಿಥ್ಯದ ಕತ್ತಲು
ಸುಳ್ಳಿನ ಸುಳಿಯಲಿ
ಸತ್ಯವು ಬೆತ್ತಲು…

ಕಳೆದು ಹೋಗಿದೆ
ಮೋಹಕ ಪ್ರೀತಿ
ಈಗೆತ್ತ ನೋಡಿದರು
ಮೋಸದ ಕ್ರಾಂತಿ…!!

ರಾಜ್…!!