Monday 4 January 2016

ಮತ್ತದೇ ಏಕಾಂತತೆ
ಗೊಂದಲದ ಗೂಡಾಗಿದೆ
ಮನದಾಳದಿ ನೀರವತೆ
ಖಾಲಿ ಖಾಲಿಯಾದ ಭಾವನೆಗಳು ...


ಬದುಕೆಂಬ ಬಡಪೆಟ್ಟಿಗೆಯಲ್ಲಿ
ಬರಿ ದುಖದ ಸರಕುಗಳೆ
ರೋಸಿಹೊಗಿದೆ ಮನ
ಸಂಬಂಧಗಳ ಕಪಟತೆಗೆ ...

ಅನುದಿನವೂ ರಾಜಿಸೂತ್ರ
ಆತಂಕದ ಆಡಂಬರಕ್ಕೆ
ಕುಬ್ಜವಾಗಿದೆ ಸಹನೆ
ಆಸೆಗಳು ಅಣಕಿಸುತಿವೆ ...

ತೊರೆದು ಹೋಗಲೆ ನಾನು
ಎಲ್ಲ ಭವ ಬಂಧಗಳ ಕಳಚಿ
ಅನಂತದ ಆಚೆಗಿನ ಬದುಕಿಗೆ
ಅನಿಶ್ಚಿತತೆಯ ಬದುಕ ಬದಿಗೊತ್ತಿ ...

ತೊರೆದು ಹೋಗಲೆ ಈಗಲೇ
ಕಾಣದ ಆ ಕಡಲಿಗೆ
ನನ್ನಮ್ಮನ ಮಡಿಲಿಗೆ
ಕಳೆದು ಹೋಗುವ ಮುನ್ನ... !!!


ನಗುವ ನಿನ್ನ ಮೊಗವ ಕಂಡು
ಮನ ತೇಲಾಡಿದೆ ಹಾಗೆ ಓಲಾಡಿದೆ
ಹೇಳದ ಆಸೆಯು ಮೂಡಿದೆ ಮನದಲಿ
ಚಿನ್ನ ಏನೆಂದು ನಾ ಹೊಗಳಲಿ....


ಕಣ್ಣ ನೋಟ ಸಂಚು ಮಾಡಿ
ತುಟಿಯ ಬಣ್ಣ ಕೂಡ ಮೋಡಿ
ನನ್ನ ಚಿತ್ತವೆಲ್ಲ ನಿನ್ನ ಹಿಂದೆ
ಚಿಟ್ಟೆಯಂತೆ ಹಾರಿದೆ...

ಖುಷಿಯು ಇಂದು ಮನದ ತುಂಬ
ನಿನ್ನ ಖುಷಿಯೆ ನನಗೆ ಚೆಂದ
ನಗುತಿರಲಿ ನನ್ನ ಕನಸು
ಮನಕೆ ಏನೊ ಆನಂದ...

ನಗುವ ನಿನ್ನ ಮೊಗವ ಕಂಡು
ಮನ ತೇಲಾಡಿದೆ ಹಾಗೆ ಓಲಾಡಿದೆ
ಮತ್ತೆ ಮತ್ತೆ ಕಾಣೋವಾಸೆ
ಅತೀಯಾಗಿದೆ ಇಂದು ಅತೀಯಾಗಿದೆ..!!!

Tuesday 8 September 2015

ನನ್ನ ಒಲವಿಗಿಂದು 
ಕಂಕಣಬಲ ಬಂತು
 ಅವಳ ನೆನಪುಗಳಿಗಿನ್ನು 
ಮರಣಶಕೆ ಆರಂಭ... 

ಉಸಿರಾಟವೇ ಮರತಂತಿದೆ
 ಹೃದಯದೊಳಗೆ ಕಂಪನ 
ಬದುಕುವುದೇ ಮನಸು 
ಅವಳಿಲ್ಲದೆ ನೆನಪಿಲ್ಲದೆ ... 

ಬಾರದ ಮರುಹುಟ್ಟಿಗೆ
 ಬದುಕುವ ಕಲೆಗೊತ್ತು
 ನೀನೊಲಿದು ಬಂದಿದ್ದರೆ 
ಪ್ರೀತಿಗೆ ಬೆಲೆಯಿತ್ತು ... 

ನೀನಿಲ್ಲದೆಯೂ ಬದುಕಿನಲಿ 
ಬದುಕುವೆ ನಾ ನನಗಾಗಿ
 ನೀನೊಪ್ಪದೆ ಹೋದ
 ಪ್ರೀತಿಯ ನೆನಪಾಗಿ ...!!!

Wednesday 29 April 2015


ನಿನ್ನ ನಗುವೊಂದು
ಕನಸ ಕದ್ದಿಹುದು
ಅಲೆಮಾರಿ ಹೃದಯಕ್ಕೆ
ಅಪಫಾತವಾಗಿದೆ ...

ನಿನಗೂ ಕನಸುಂಟೆ
ಕನಸಲಿ ನಾನುಂಟೆ
ಕಾಣದ ಕಡಲಿಗಾಗಿ
ಹಂಬಲಿಸುವ ಹುಂಬತನ ...

ಮನದ ಆಸೆಯು
ಕಣ್ಣಲಿ ಹೇಳಿದೆ
ಮೂಡಿದ ಬಯಕೆಗೆ
ತಡೆಯನು ನೀಡಿದೆ ...

ಅರಿವಿನ ಮೂಟೆಯ
ಪಕ್ಕಕೆ ಇಟ್ಟು
ಮನಸಿಗೆ ರೆಕ್ಕೆ ಪುಕ್ಕವ ಕಟ್ಟಿ
ತಪ್ಪೊಂದ ಮಾಡುವ...

ನಿನ್ನ ನಗುವೊಂದು
ಕನಸ ಕದ್ದಿಹುದು
ಕಳೆದ ಕನಸಿನಲಿ
ನನ್ನ ಮನಸಿಹುದು ..!!
ಸಮಯವೇ ಸಹಕರಿಸು
ಓಡದಿರು ಸರಸರನೇ
ವಿಶ್ರಮಿಸು ಕೆಲಹೊತ್ತು
ಧಾವಂತದ ನಡೆ ಬೇಡ ...

ಬದುಕಿನ ಜಂಜಾಟದಲಿ
ನಗಲು ಪುರುಸೊತ್ತಿಲ್ಲ
ಉಭಯಕುಶಲೋಪರಿಯು
ವ್ಯವಹಾರದ ಸರಕಾಗಿದೆ ...

ಸಂಬಂಧಗಳ ನಡುವಲ್ಲಿ
ಸಮನ್ವಯದ ಕೊರತೆ
ಮನೆ - ಮನಗಳಲ್ಲಿ
ಏಕಾಂತವು ಆವರಿಸಿದೆ ...

ಕನಸಿಗೂ - ಮನಸಿಗು
ಸಮಯವೇ ವೈರಿಯು
ಅರಿತುಕೊಳ್ಳುವ ಮುನ್ನ
ಅಗಲಿಕೆಯ ಶಿಕ್ಷೆಯೆ ...

ಸಮಯವೇ ಸಹಕರಿಸು
ಓಡದಿರು ಸರಸರನೇ
ನನಗೆಂದೆ ತುಸು ಸಮಯ
ಕೊಡಬಾರದೆ ನೀ...!!

Thursday 23 April 2015

ಮನಸು
ಕಾಯುತ್ತಿದೆಯೆಕೋ
ನನಸಾಗದ
ಕನಸಿಗೆ
ಒಂದು
ಬಾರಿ
ಒಲಿಸಿಕೊಳ್ಳುವ
ಛಲ
ಕನಸು
ಜೊತೆ
ನೀಡಿ
ನನಸಾಗುವುದೇ
ಇಲ್ಲ
ನೆನಪಾಗುವುದೇ
ಕಾಡುತ್ತಿರುವ
ಯಕ್ಷಪ್ರಶ್ನೆ...?
ಕನಸೊಂದ ಹೆಣೆದಿರುವೆ
ನಿನಗೆಂದೆ ಹೊಸತೊಂದು
ಏಕಾಂಗಿ ಹೃದಯದಲಿ
ಅರಳಿದೆ ಹೂವೊಂದು ...

ಅನುದಿನವೂ ಕನಸಲ್ಲಿ
ಅಗಲಿಕೆಯ ನೋವುಂಟು
ಚಡಪಡಿಸೊ ಮನದಲ್ಲಿ
ನೆನಪುಗಳು ನೂರೆಂಟು ...

ನಿನ್ನ ಮನದೊಳಗೆ ಕಾಲಿಡಲು
ಅನುಮತಿಯೂ ಬೇಕಾಗಿದೆ
ಮುನಿಸದಿರು - ಮನದಲ್ಲದಿರೆ
ಕನಸೊಳಗೆ ಜಾಗಕೊಡು ...

ಮನದ ಬಯಕೆಯೊಂದೆ
ನನಸಾಗಲಿ ಕನಸು
ಏಕಾಂತದಿ ಸಂಧಿಸಲು
ಹಾತೊರೆದಿದೆ ಮನಸು