Thursday 10 April 2014

ನಿನಗಾಗಿ ಕೂಡಿಟ್ಟ
ಹತ್ತಾರು ಕನಸುಗಳು
ನಿನಗದರ ಅರಿವಿಲ್ಲ
ನೀ ಬರುವ ಸುಳಿವಿಲ್ಲ...

ಇಂದುಗಳು ಕಳೆದು
ನಿನ್ನೆಗಳಾದ ದಿನಗಳೆಷ್ಟೊ
ಬರುತಿರುವ ನಾಳೆಗಳು
ಉಳಿದಿರುವ ಸಮಯವೆಷ್ಟೊ...

ಕಾಮನ ಬಿಲ್ಲದು ಕರಗುವಾಗ
ಕಲ್ಲಾದ ಹೃದಯ ನೀ ಕರಗದಾದೆ
ಕಣ್ಣಂಚಿನಲ್ಲಿ ಕಣ್ಣೀರ ಕೋಡಿ
ಮನದ ಮೂಲೆಯಲ್ಲಿತ್ತು ಭರವಸೆಯ ಸಿಂಚನ...

ನೀ ತೊರೆದ ಆ ಘಳಿಗೆ
ಹಿಡಿದಿದೆ ನೆನಪುಗಳಿಗೆ ಗ್ರಹಣ
ನನ್ನುಸಿರ ಕಣ-ಕಣವು
ಬಿಡುತಿದೆ ನಿನ್ಹೆಸರಿಗೆ ತರ್ಪಣ...

ನಿನಗಾಗಿ ಕೂಡಿಟ್ಟ
ಹತ್ತಾರು ಕನಸುಗಳು
ಈಗ ಮನಸಿನಂಗಳದಲಿ
ಗೋರಿಯೊಳಗಿನ ಶವಗಳು...!!

ರಾಜ್...!!
ಮಗನ
ಒಳಿತಿಗಾಗಿ
ತನ್ನೆಲ್ಲ
ಕನಸುಗಳ
ಬಲಿ ಕೊಟ್ಟ
ಹೆತ್ತಬ್ಬೆ…

ತನ್ನ
ಕನಸುಗಳಿಗಾಗಿ
ಹೆತ್ತಬ್ಬೆಯ
ಕಡೆಗಣಿಸಿದ
ಮಗರಾಯ…

ತಾಯಿಯ
ತ್ಯಾಗಕ್ಕೆ
ಸ್ವಾಥ೯ದ
ಪ್ರತಿಫಲ…

ಮಗನಿಗೊ
ಪ್ರೀತಿ -ವಾತ್ಸಲ್ಯವು
ಗೌಣ
ಹಣ ಗಳಿಸುವ
ಹಂಬಲ…!!
ಗೆಳತಿ…!!

ಅರಿಯದ ಬಾಲ್ಯದಲ್ಲಿ
ಜೊತೆಯಾದ ಒಡನಾಡಿ
ಸ್ನೇಹಕ್ಕೆ ಬೆಸೆದ
ಹೊಸತೊಂದು ಕೊಂಡಿ…

ಹರೆಯದ ಹೊಸ್ತಿಲಲಿ
ಸರಿ ತಪ್ಪುಗಳ ತಿದ್ದಿ ತಿಡಿ
ಕಷ್ಟದಲಿ ಸಹಕರಿಸಿ
ಗೆಲುವಿನಲಿ ಸಂಭ್ರಮಿಸಿ…

ಸುಖ -ದುಃಖಗಳಲ್ಲಿ
ಸಮನಾಗಿ ಸಹಭಾಗಿ
ಭಾವನೆಗಳ ಭಾಷೆ ಅರಿತ
ಅವಳೊಂದು ಭಾವ ಜೀವಿ…

ವ್ಯಕ್ತಿಗತ ಬದುಕಿನಲಿ
ಸಮಯ ಸಾಧಕರೊಳಗೆ
ಗೆಳೆತನಕೆ ಸ್ಪಂದಿಸುವ
ಹೃದಯ ವೈಶಾಲ್ಯತೆ…

ಜೀವನದ ದಾರಿಯಲಿ
ಜೊತೆಗಿರುವ ನೆರಳಂತೆ
ಸ್ನೇಹದ ಬಾಂಧವ್ಯಕೆ
ಬೆಲೆ ಕಟ್ಟದ ಅಪರಂಜಿ…!!

ರಾಜ್~! —
ಮನದೊಳಗಿನ
ಮೌನಕ್ಕೆ
ಮಾತು ಬರುತಿದೆ...

ಮೌನ ಮನದ
ನೋವನಿಂದು
ಹಂಚ ಬಯಸಿದೆ...

ಮನದ ನೋವ
ತಿಳಿಯಲೊಂದು
ಮನಸು ಬೇಕಿದೆ...

ನೋವ
ಹಂಚಿಕೊಂಡು
ಹಗುರವಾಗ ಬಯಸಿದೆ...

ನಾನು
ನನ್ನದೆನ್ನುವ
ಒತ್ತಡದೊಳಗೆ...

ಮನದ ನೋವ
ಅರಿಯಲೊಂದು
ಮನಸು ಸಿಗುವುದೆ..?

ರಾಜ್...!!
ಕಾರಣವಿಲ್ಲದೆ
ಕಾಡಿದೆ ನೀನು
ನಿನ್ನಯ ಮುನಿಸಿಗೆ
ಕಾರಣವೇನು..

ಹೇಳದೆ ಉಳಿದ
ಮಾತುಗಳೆಷ್ಟೊ
ಉತ್ತರ ಸಿಗದ
ಪ್ರಶ್ನೆಗಳೆಷ್ಟೊ...

ಮೌನವು ತಾಳಿದೆ
ಮನವಿಂದೆಕೊ
ಮಾತಿನ ಮೇಲೆ
ಬೇಸರವೇಕೊ...

ಮಾಡದ ತಪ್ಪಿಗೆ
ಶಿಕ್ಷೆಯು ತರವೆ
ಕರುಣೆಯ ಭಾವ
ನಿನಗಿಲ್ಲವೆ..?

ಕಾರಣವಿಲ್ಲದೆ
ಕಾಡುವೆ ಏನು
ಗೆಳೆಯನೆ ಹೇಳು
ನಿನ್ನಯ ಮುನಿಸಿಗೆ
ಕಾರಣವೇನು..!!
ಉರುಳುತಿದೆ ಜೀವನಚಕ್ರ
ಕಾಲಚಕ್ರದ ಜೊತೆ ಸೇರಿ
ಬದುಕಿನ ಬಂಡಿಯಲಿ
ನೀನಿರದೆ ಜೊತೆಯಲ್ಲಿ...

ಪಾಳು ಬಿದ್ದ ಕೊಂಪೆ
ಈಗ ಕನಸಿನಾರಮನೆ
ನೀ ತೊರೆದ ಘಳಿಗೆಯಲಿ
ಬಾಳ ಪಯಣದಲಿ...

ಮುಸ್ಸಂಜೆ ವೇಳೆಲಿ
ಒಬ್ಬಂಟಿ ಭಾವ
ಕೆಣಕುವವು ನೆನಪುಗಳು
ಮನದಿ ಮರೆಯದ ತಲ್ಲಣ...

ಉರುಳುವುದು ಜೀವನ ಚಕ್ರ
ನೀನಿದ್ದರು ಇರದಿದ್ದರೂ
ಕಾಲಚಕ್ರದ ಜೊತೆ ಸೇರಿ
ಕಾಲನ ಕರೆ ಬರುವವರೆಗೆ..!!