Saturday 20 September 2014

ನಿನ್ನ
ಬದಲಾದ
ಭಾವಕ್ಕೆ
ಮರುಗಿ
ಮನ
ಮರುಕ್ಷಣವೇ
ಹಾರಿದೆ
ದಾಸ್ಯ
ಸಂಕೋಲೆಯಿಂದ
ಬಿಡಿಸಿಕೊಂಡ
ಹಕ್ಕಿಯಂತೆ…!
___________________________________________________

ನನ್ನ
ಕನಸುಗಳಲ್ಲಿ
ನೀ
ಬಲವಂತವಾಗಿ
ನುಸುಳಿ
ಅತ್ಯಾಚಾರಗೈದ
ಭಾವನೆಗಳಿಗೆ
ಈಗ
ಮತ್ತೆ -ಮತ್ತೆ
ಬೇಕೆನ್ನುವ
ನೆನಪಿನ
ಹಂಬಲದ
ಜೊತೆಗೆ
ಮನಸ್ಸಿನ
ಬೆಂಬಲ…!!

ಮನಸಿಗೊಂದು ಸಾಂತ್ವನ

ತಿರುಗಾಡಿ ಬಾ ಮನವೇ
ತುಸು ದೂರ ಸುಮ್ಮನೆ
ಅಲ್ಲೆಲ್ಲೂ ಅವಳಿಲ್ಲ
ನೆರಳಾದರು ಸಿಗಬಹುದೇ…

ಅವಳಿಲ್ಲದ ಚಿಂತೆಯಲಿ
ನೀ ಸೊರಗಿ ಹೋಗಿರುವೆ
ಅವಳಿಗಾಗಿ ಕಾಯುತ್ತಾ
ಸುಮ್ಮನೆ ಕೊರಗಿರುವೆ…

ಅವಳಿರುವಿಕೆಯ ಭಾಸ
ನಿನ್ನ ಮೈ -ಮನದ ತುಂಬೆಲ್ಲ
ನೆನಪುಗಳಲಿ ಇಣುಕಿಣುಕಿ
ನಿನ್ನನವಳು ಕಾಡಿರಲು…

ತಿರುಗಾಡಿ ಬಾ ಮನವೇ
ತುಸು ದೂರ ಸುಮ್ಮನೆ
ನೆರಳಾದರು ಹಿಡಿದು ತಾ
ಸಿಗಬಹುದೇ ನೆಮ್ಮದಿ…!!

ರಾಜ್…!!

Wednesday 17 September 2014

" ಎಲ್ಲ ಇಲ್ಲಗಳ ನಡುವೆ"

" ಎಲ್ಲ ಇಲ್ಲಗಳ ನಡುವೆ" 

ಎಲ್ಲ ಇಲ್ಲಗಳ ನಡುವೆ
ಕಳೆದು ಹೋಗಿದ್ದೆನೆ ನಾನು
ಎತ್ತ ನೋಡಿದರು ಬರಿಯ
ಪ್ರಶ್ನೇಗಳದೆ ಕಾರು-ಬಾರು...

ಉತ್ತರವು ಇಲ್ಲಿ ತನ್ನ
ಅಸ್ತಿತ್ವವ ಹುಡುಕುತಿದೆ
ಸಮಯಕ್ಕು-ಸಮಾಧಾನಕ್ಕು
ಸಾಮರಸ್ಯದ ಕೊರತೆ...

ದಿನವೂ ಓಡುತಿದೆ
ತನ್ನದೇ ಧಾವಂತದಲಿ
ಹಿಂದೆ ಬೀಳುವೆನೆನ್ನುವ ಚಿಂತೆ
ಈ ಬದುಕಿಗು ಕಾಡುತಿದೆ...

ಸುತ್ತಮುತ್ತಲೂ ಸುತ್ತುತಿವೆ
ಬಿಕನಾಸಿ ಪ್ರಶ್ನೆಗಳು
ಬಲು ದೈನ್ಯೇಸಿ ಸ್ಥಿತಿಯಲ್ಲಿ
ಕಳೆದು ಹೋಗಿದ್ದೆನೆ ನಾನು...

ಮೈಕೊಡವಿ ಎದ್ದು ಬರುವೆ
ಇಂದಲ್ಲ ನಾಳೆ
ಎಲ್ಲ ಇಲ್ಲಗಳ ನಡುವೆ
ಉತ್ತರದ ಜೊತೆಗೆ...!!!

ರಾಜ್..!!

Tuesday 16 September 2014

ಮತ್ತೆ ಬರೆಯಬೇಕು ನಾನು
ಬಚ್ಚಿಟ್ಟ ಕನಸುಗಳು
ಗರಿ ಬಿಚ್ಚಿ ಹಾರುತಿವೆ
ಗುರಿ ಮುಟ್ಟುವ ತವಕ...

ಹಳೆ ನೆನಪುಗಳು
ಕುಕ್ಕುತಿವೆ ಹೃದಯದಲಿ
ಭಾವನೆಗಳ ಕುಗ್ಗಿಸುವಿಕೆ
ಹುನ್ನಾರದ ಸಂಚಿನಲಿ...

ಒಬ್ಬಂಟಿ ನೀನಲ್ಲ
ಕೇಳು ಹೃದಯವೆ
ನಿನ್ನಂತೆ ನೂರಾರು
ಹೃದಯಗಳಿವೆ ನೋವಿನಲಿ...

ಬದುಕು ಪ್ರೀತಿಸುವ ಕಲೆ
ಕರಗತವ ಮಾಡಿಕೊ
ಮೈಕೊಡವಿ ಎದ್ದೇಳು
ನೆನಪುಗಳ ಗುಹೆಯಿಂದ...

ಮತ್ತೆ ಬರೆಯುತ್ತೇನೆ
ನಿನ್ನ ಸಂತೈಸಲು
ಅಳಿದುಳಿದ ಬದುಕಿಗೆ
ಬಣ್ಣ ತುಂಬಿಸಲು..!!

ರಾಜ್..!!
ನನ್ನ ನಲ್ಮೆಯ ಚುಕ್ಕಿ
ಬಂಧಿಯಾಗಿದೆ ಅಲ್ಲಿ
ಚಂದಿರನ ಅಂಗಳದಿ
ಒಬ್ಬಂಟಿ ಕೂಸು…
ಚಂದಿರ ತಾ ಅಲ್ಲಿ
ಮೋಸದಿ ಮೋಹಿಸಿದ
ನನ್ನಾ ಚುಕ್ಕಿಗೆ ನಾನೀಗ
ಅಪರಿಚಿತ ಕನಸಂತೆ…
ಚಂದಿರನ ಮೋಹದಲಿ
ಸುಂದರಿಯು ಸೆರೆಯೀಗ
ನನ್ನ ಹೃದಯದ ಕೂಗು
ಅನವರತ ಅಭಿಶಾಪ…
ಚುಕ್ಕಿ ನೀನಿಲ್ಲದೆ
ಚಿತ್ತ ಚಂಚಲತೆ
ಚಿತ್ತಾರದ ಬೆಳಕೇ ಮಾಯ
ಅಮವಾಸ್ಯೆಯ ಕತ್ತಲಲಿ…!!
ರಾಜ್…!!

Wednesday 10 September 2014

ಗೆಳತಿ
ನಿನಗಿಂತ
ನಿನ್ನ
ನೆನಪುಗಳೆ
ಚೆನ್ನ
ಪ್ರತಿ
ಬಾರಿ
ಜಗಳವಾದಾಗಲು
ದೂರ
ಹೋಗದೆ
ಹಿಂತಿರುಗಿ
ಬರುತ್ತವೆ
ಮತ್ತೆ -ಮತ್ತೆ
ಕಾಡಲು…!!
@--------@@--------@@--------@@--------@@--------@@--------@
ಅವಳೆಂದರೆ
ಮುಗಿಯದ
ಕನಸು
ಕಾಡುವ
ನೆನಪು
ಮರೆಯಂದರೆ
ಮನಸಿಗೆ
ನನ್ನ
ಮೇಲೆಯೇ
ಮುನಿಸು…!!
@--------@@--------@@--------@@--------@@--------@@--------@
ಕಡಲ
ದಡದಲ್ಲಿ
ಕುಳಿತಿದ್ದೆ
ನಿನ್ನ
ನೆನಪಲ್ಲಿ
ಕಣ್ಣ ನೀರು
ಕೂಡಾ
ಕಳೆದು ಹೊಯಿತು
ಅಲೆಗಳೊಂದಿಗೆ
ನಿನ್ನ ನೆನಪಿಸಿದ
ತಪ್ಪಿಗೆ
ನನ್ನ
ಮೇಲಿನ
ಮುನಿಸಿಗೆ…!!
ನಾ
ಬರೆಯುವ
ಕವಿತೆಗಳಲ್ಲಿ
ಅವಳಿದ್ದರೆನು
ಇರದಿದ್ದರೆನು
ಬರಹ
ನನ್ನೊಳಗೆ
ನಾ
ಬರಹದೊಳಗೆ
ಬಿಡಿಸಲಾಗದ
ಬಂಧ…!!

____________________________________________________

ಮನದ
ಗಭ೯ದಲ್ಲೆಲ್ಲೊ
ಅಡಗಿ
ಕುಳಿತಿದ್ದ
ನೆನಪು
ಇಂದು
ಮತ್ತೆ
ನಿನ್ನ
ಕಂಡೊಡನೆ
ಮೆರೆಯುತ್ತಿದೆ
ಮನಸನ್ನೆ
ಗುಲಾಮನನ್ನಾಗಿಸಿ…!!
ನನ್ನದೆನ್ನುವುದು
ಏನಿಲ್ಲ
ಇಲ್ಲಿ
ನಾನೆಂಬುವುದು
ಬರಿಯ
ನೆಪ
ಮಾತ್ರ
ಮರೆತ
ನೆನಪುಗಳು
ಮುರಿದ
ಕನಸುಗಳೆರಡು
ನಿನ್ನದಲ್ಲವೆ…!!
ನೀನು
ನೀನೆಂಬ
ಅಹಮ್ಮಿನಲಿ
ನಾವು
ಎನ್ನುವುದ
ಮರೆತು
ನನ್ನನ್ನು
ನಾನಾಗಿಸಿ
ನೀ
ನಡೆದು
ಹೋದ
ದಾರಿಯ
ತುಂಬೆಲ್ಲ
ನಮ್ಮ
ನೆನಪುಗಳೇ…!!
ಅಪರಿಚಿತ ಅಲೆಮಾರಿ
ನಿನ್ನಂತೆಯೆ ನಾನು
ನಿನ್ನ ಕನಸಿಗು ಮನಸಿಗು
ಅಪರಿಚಿತ ಅಲೆಮಾರಿ...

ನೆನಪುಗಳ ಕವಲುದಾರಿ
ಕಾಲೆಳೆದು ತಂದಿದೆ
ಮರೆತಂಥ ನೆನಪುಗಳ
ಕಥೆಯನೊಂದ ಹೇಳಿದೆ...

ಕಳೆದಂಥ ಕ್ಷಣಗಳನ್ನ
ಕಾಲಚಕ್ರ ನುಂಗಿದೆ
ಕಾದು ಕುಳಿತು ಕರೆದರೂನು
ಮುನಿಸು ಕರಗಿ ಬಿಡುವುದೆ...

ಅಪರಿಮಿತ ಆಸೆಗಳು
ಪರಿಚಿತ ಭಾವಗಳಲಿ
ಸಾಂಗತ್ಯದ ಸಾಮೀಪ್ಯವು
ಗಗನ ಕುಸುಮವೇ ಸರಿ...

ಮರೆವು ಮೀರಿ ಬಂದರು
ನೆಪಕೆ ದೂರ ನಿಂತರು
ನಿನ್ನಂತೆಯೆ ಅಲೆಮಾರಿ
ಮನಸಿಗಿನ್ನು ಅಲೆದಾಟ...!!!

ರಾಜ್..!!
ಪಾವ೯ತಿಯ ಮೈಯ
ಮಣ್ಣಿನಿಂದ ಹುಟ್ಟಿಬಂದ
ಜಗದ ಒಡೆಯ ಈಶನಿಗೆ
ಸ್ವಂತಕ್ಕಾದ ಸುತನು ಈತ…

ಮಾತೃ ವಾಕ್ಯ ಪಾಲನೆಗೆ
ತಂದೆಯೊಡನೆ ಯುದ್ಧ ಮಾಡಿ
ಆನೆ ಪ್ರಾಣ ಬಲಿಯ ಕೊಟ್ಟು
ಸಾವ ಗೆದ್ದ ಧೀರ ಸುತನು…

ಇಲಿಯನೇರಿ ಜಾರಿ ಬಿದ್ದು
ನೋಡಿ ನಕ್ಕ ಚಂದಿರಂಗೆ
ಶಾಪ ಕೊಟ್ಟು ಹಿರಿಮೆ ಮೆರೆದ
ಲೋಕಮಾತೆ ಮುದ್ದು ಕಂದ…

ವಿಘ್ನಗಳ ಕೊಡದೆ ಕಾಡೊ
ಏಕದಂತದೊಡೆಯ ಸ್ವಾಮಿ
ಸವ೯ ಜನಕೆ ಶಾಂತಿ ನೀಡಿ
ಕರುಣೆಯಿಂದ ಕಾಯೋ ದೇವ…!!

(ಗಣೇಶ ಚತುರ್ಥಿ ಶುಭಾಶಯಗಳು )
ಮತ್ತದೇ ಏಕಾಂತ
ನೇಸರನಿಗೆ ಧಾವಂತ
ಇಳಿಸಂಜೆ ಇಳಿದು
ಅದೇ ಬಾನು ಅದೇ ಚಂದ್ರ...

ಕಡಲ ದಡದಲ್ಲಿ
ಭಾವಗಳ ಅಲೆ ಉಕ್ಕಿ
ಕಾವ್ಯದ ಜನನ
ಕಳೆದ ಕ್ಷಣಗಳ ನೆನೆದು...

ಮನದೊಳಗಣ ತಲ್ಲಣ
ಕಣ್ನಲ್ಲಿ ಮಳೆಯಾಗಿ
ಹರಿದೊಡೆ ಹೊರಗೆ
ಹಗುರ ಹತ್ತಿಯು ಹೃದಯ...

ಬದುಕು ಬಿತ್ತಿದ ಕನಸು
ಬಳಲಿ ಬೆಂಡಾಗಿ ಒಣಗಿ
ಮತ್ತದೇ ಏಕಾಂತ
ಮತ್ತೆ ಕಾಡುವ ನೆನಪು...!!!

ರಾಜ್..!!
ಮತ್ತೇ
ಜೀವ
ಬರುವುದೆಂದೊ
ನಾ
ಕಂಡ
ಕನಸುಗಳಿಗೆ
ಉಸಿರಾಟದ
ಕೊರತೆಯಿದೆ
ಆದರೂ
ಮನದಲ್ಲಿ
ಬತ್ತದ
ಒಲವಿನ
ಒರತೆಯಿದೆ…!!
ನನ್ನ
ಕನಸೊಂದು
ಕಣ್ಣರಳಿಸಿ
ಕಾಯುತಿದೆ
ತನ್ನ 
ಕಾಣುವ
ಮನಸಿಗಾಗಿ
ನೀ
ಮನಸು
ಮಾಡಬೇಕಷ್ಟೆ..!!
@-@-@-@-@-@-@-@-@-@-@-@-@-@-@-@-@-@-@-@-@-@
ಮನಸಿಲ್ಲದ
ಕನಸಿನಲ್ಲಿ
ಅರಸನಾಗುವ
ಬದಲು
ಮನಮೆಚ್ಚಿದ
ಮನಸಿಗೆ
ಆಳಾಗಿರುವುದೆ
ಲೇಸು..!!
@-@-@-@-@-@-@-@-@-@-@-@-@-@-@-@-@-@-@-@-@-@
ಭ್ರಮೆಯಲ್ಲಿ
ಬದುಕುವ
ಕನಸಿಗಿಂತ
ನಿನ್ನ
ನೆನಪೊಂದಿಗಿನ
ಸೆಣಸಾಡಿ
ಸಿಗುವ
ಸೋಲೆ
ಆತ್ಮ ತೃಪ್ತಿ...!!
@-@-@-@-@-@-@-@-@-@-@-@-@-@-@-@-@-@-@-@-@-@

ಹೊಂದಿಕೊ ಮನಸೆ
ಹಿಂದಿನ ನೆನಪಿಗು
ಇಂದಿನ ಕನಸಿಗೂ
ನೊಂದುಕೊಳ್ಳದಿರು ಎಂದೆಂದಿಗೂ…

ಭೂತದ ಬವಣೆಗಳು
ವಾಸ್ತವದ ಕಟುಸತ್ಯ
ಎಲ್ಲವೂ ಅತ್ಯಗತ್ಯ
ನೋಡಿರದ ನಾಳೆಯ ಮುನ್ನುಡಿಗೆ…

ಕಹಿ ನೆನಪಿಗೆ ಕುಗ್ಗದೆ
ಸಿಹಿ ಕನಸಿಗೆ ಹಿಗ್ಗದೆ
ಸಿಹಿಕಹಿಯ ಸಮ್ಮಿಲನ
ಬದುಕಾಗಲಿ -ಬೆಳಕಾಗಲಿ…

ಹೊಂದಿಕೊ ಮನಸೆ
ನೊಂದುಕೊಳ್ಳದೆ
ನೋವಿಗೂ -ನಲಿವಿಗೂ
ಹೊಂದಿಕೊಳ್ಳು ನೀ…!!
ಬೆತ್ತವೆ ಬೆದರುತಿದೆ
ಗುರಿ ಮರೆತ ಮಕ್ಕಳು
ಗುರುವೇ ಇಲ್ಲಿ ಗುಲಾಮನಯ್ಯ
ಕಾಲಚಕ್ರದ ಮಹಿಮೆ…


ದುಡ್ಡು ಕೊಟ್ಟರೆ ಪದವಿ
ವಿದ್ಯೆಯಂಬುದು ಸರಕು
ಜಾಣ ವಿಧ್ಯಾರ್ಥಿ ಕೋಣನಾಗಿ
ಕೊನೆಯ ಬೆಂಚಲೆ ಆಳುವ ಅರಸರು…

ಬೆತ್ತವೆ ಬೆದರುತಿದೆ
ಶಿಕ್ಷಕರಿಗೆ ಶಿಕ್ಷೆಯು
ಗುರು ಭಕ್ತಿ ಮರೆತಿಹರು
ಕಲಿಯುಗದ ಗುರುಕುಲವಿದು…!!
ಗುಳಿಬಿದ್ದ ಕೆನ್ನೆಗೆ
ಗುರಿಯಿರದ ನಿನ್ನೆಗೆ
ಓಲೈಸುವ ಧಾವಂತದಿ
ಮನಸೆಲ್ಲ ಮರೆಯಿತು…

ಕೆನ್ನೆಯು ಕೈ -ಕೊಟ್ಟಿತು
ನಿನ್ನೆಯು ಈ ಬದುಕೆ ಸುಟ್ಟಿತು
ಓಲೈಸುವರಾರೀಗ
ಮರಗಟ್ಟಿದ ಮನಸಿಗೆ…

ಮಾತೇ ಬೇಡ -ಮೂಕ ಭಾಷೆ
ಸಂಜ್ಞೆಯಲ್ಲೆ ನೆಮ್ಮದಿಯು
ಮನದಿ ಮನಸು ಮರೆತರೆನೆ
ನೆನಪಿಗಾಗ ಮರಣಯಾತ್ರೆ…

ಕನಸ ಕಾಡಿ ಬಂದರೂನು
ಮನದಿ ಮತ್ತೆ ನಿಂತರೂನು
ಗೆಳತಿ ನಿನ್ನ ನೆನಪೆನಗೆ
ಬದುಕು ಕೊಲ್ಲೊ ಸಂಜೀವಿನಿ…!!