Tuesday 16 September 2014

ಮತ್ತೆ ಬರೆಯಬೇಕು ನಾನು
ಬಚ್ಚಿಟ್ಟ ಕನಸುಗಳು
ಗರಿ ಬಿಚ್ಚಿ ಹಾರುತಿವೆ
ಗುರಿ ಮುಟ್ಟುವ ತವಕ...

ಹಳೆ ನೆನಪುಗಳು
ಕುಕ್ಕುತಿವೆ ಹೃದಯದಲಿ
ಭಾವನೆಗಳ ಕುಗ್ಗಿಸುವಿಕೆ
ಹುನ್ನಾರದ ಸಂಚಿನಲಿ...

ಒಬ್ಬಂಟಿ ನೀನಲ್ಲ
ಕೇಳು ಹೃದಯವೆ
ನಿನ್ನಂತೆ ನೂರಾರು
ಹೃದಯಗಳಿವೆ ನೋವಿನಲಿ...

ಬದುಕು ಪ್ರೀತಿಸುವ ಕಲೆ
ಕರಗತವ ಮಾಡಿಕೊ
ಮೈಕೊಡವಿ ಎದ್ದೇಳು
ನೆನಪುಗಳ ಗುಹೆಯಿಂದ...

ಮತ್ತೆ ಬರೆಯುತ್ತೇನೆ
ನಿನ್ನ ಸಂತೈಸಲು
ಅಳಿದುಳಿದ ಬದುಕಿಗೆ
ಬಣ್ಣ ತುಂಬಿಸಲು..!!

ರಾಜ್..!!

2 comments:

  1. 'ನಿನ್ನಂತೆ ನೂರಾರು
    ಹೃದಯಗಳಿವೆ ನೋವಿನಲಿ'
    ಎಂಬ ತಮ್ಮ ಮಾತು ಹಲವು ಹೃದಯಗಳಿಗೆ ಸ್ಪೂರ್ತಿಯಾಗುವಂತಿದೆ.

    ನಮಗಾಗಿ ಬರೆಯುತ್ತಲೇ ಇರಿ.

    ReplyDelete
  2. ಖಂಡಿತವಾಗಿಯೂ ಸರ್...ಧನ್ಯವಾದಗಳು

    ReplyDelete