Tuesday 16 September 2014

ನನ್ನ ನಲ್ಮೆಯ ಚುಕ್ಕಿ
ಬಂಧಿಯಾಗಿದೆ ಅಲ್ಲಿ
ಚಂದಿರನ ಅಂಗಳದಿ
ಒಬ್ಬಂಟಿ ಕೂಸು…
ಚಂದಿರ ತಾ ಅಲ್ಲಿ
ಮೋಸದಿ ಮೋಹಿಸಿದ
ನನ್ನಾ ಚುಕ್ಕಿಗೆ ನಾನೀಗ
ಅಪರಿಚಿತ ಕನಸಂತೆ…
ಚಂದಿರನ ಮೋಹದಲಿ
ಸುಂದರಿಯು ಸೆರೆಯೀಗ
ನನ್ನ ಹೃದಯದ ಕೂಗು
ಅನವರತ ಅಭಿಶಾಪ…
ಚುಕ್ಕಿ ನೀನಿಲ್ಲದೆ
ಚಿತ್ತ ಚಂಚಲತೆ
ಚಿತ್ತಾರದ ಬೆಳಕೇ ಮಾಯ
ಅಮವಾಸ್ಯೆಯ ಕತ್ತಲಲಿ…!!
ರಾಜ್…!!

2 comments:

  1. ಒಬ್ಬ ಸರಿಯಾದ ಸುಗಮ ಸಂಗೀತ ಸಂಯೋಜಕರ ಕೈಗೆ ಸಿಕ್ಕರೆ, ಒಳ್ಳೆಯ ಭಾವಗೀತೆ ಆಗುವ ಕವನವಿಡು.

    ReplyDelete
  2. ಮನತುಂಬಿ ಬಂತು ಸರ್ ನಿಮ್ಮ ಮಾತಿನಿಂದ....ಸಾರ್ಥಕತೆ ಭಾವ...

    ReplyDelete