Wednesday 10 September 2014

ಅಪರಿಚಿತ ಅಲೆಮಾರಿ
ನಿನ್ನಂತೆಯೆ ನಾನು
ನಿನ್ನ ಕನಸಿಗು ಮನಸಿಗು
ಅಪರಿಚಿತ ಅಲೆಮಾರಿ...

ನೆನಪುಗಳ ಕವಲುದಾರಿ
ಕಾಲೆಳೆದು ತಂದಿದೆ
ಮರೆತಂಥ ನೆನಪುಗಳ
ಕಥೆಯನೊಂದ ಹೇಳಿದೆ...

ಕಳೆದಂಥ ಕ್ಷಣಗಳನ್ನ
ಕಾಲಚಕ್ರ ನುಂಗಿದೆ
ಕಾದು ಕುಳಿತು ಕರೆದರೂನು
ಮುನಿಸು ಕರಗಿ ಬಿಡುವುದೆ...

ಅಪರಿಮಿತ ಆಸೆಗಳು
ಪರಿಚಿತ ಭಾವಗಳಲಿ
ಸಾಂಗತ್ಯದ ಸಾಮೀಪ್ಯವು
ಗಗನ ಕುಸುಮವೇ ಸರಿ...

ಮರೆವು ಮೀರಿ ಬಂದರು
ನೆಪಕೆ ದೂರ ನಿಂತರು
ನಿನ್ನಂತೆಯೆ ಅಲೆಮಾರಿ
ಮನಸಿಗಿನ್ನು ಅಲೆದಾಟ...!!!

ರಾಜ್..!!

1 comment:

  1. ಅಂತಹ ಅಲೆಮಾರಿಯನ್ನೂ ನೆನಪುಗಳಲ್ಲಿ ಹಿಡಿದಿಡುತ್ತಾನೆ ಇಲ್ಲಿ ಕವಿ!

    ReplyDelete