Monday 17 March 2014

ಕನಸ ಕದಿಯುವ ಮುನ್ನ
ಕರೆಯೊಂದ ಮಾಡು
ಒಟ್ಟಾರೆ ಕನಸುಗಳ
ಕೂಡಿಡುವೆ ಕಣ್ಣಿನಲಿ…

ಕನಸು ಕದಡಿದೆ
ಮನಸು ಮಿಡಿದಿದೆ
ಕಾರಣವ ತಿಳಿಯದು
ನೆನಪೊಂದು ಕಾಡುತಿದೆ…

ಮನದ ಕೊಳದಲ್ಲಿಗ
ಸಹಿಸದ ಬಿರುಗಾಳಿ
ಜೊರಾಗಿ ಚಲಿಸುತಿವೆ
ನಿನ್ನ ನೆನಪಿನ ಅಲೆಗಳು…

ಮನಸು ಕದಿಯುವ ಮುನ್ನ
ಮರೆಯದೆ ಕರೆ ಮಾಡು
ಮನದ ಬಾಗಿಲನು ಸಿಂಗರಿಸಿ ಬಿಡುವೆ
ಓ ನನ್ನ ಮನದಾಳದ ಅತಿಥಿ…!!
ಬಾರದಿರು ಕನಸೆ
ಮತ್ತೊಮ್ಮೆ ನೆನಪಿನಲಿ
ಮಲಗಿರುವ ನೆನಪುಗಳು
ಎದ್ದಾವು ಕನಸಿನಲಿ…

ಬಿಕ್ಕಳಿಸಿ ಬಿಕ್ಕಳಿಸಿ
ರೋಧಿಸಿದೆ ಈ ಮನವು
ಕಾಡುತಿದೆ ಕರಿನೆರಳು
ಬೆಂಬಿಡದೆ ಹಗಲಿರುಳು…

ಮರೆತಂತೆ ನಟಿಸಿದರು
ಕನಸಿನಲಿ ಕಾಡುವವು
ಮರೆಯಲೆತ್ನಿಸಿದಷ್ಟು ನೆನಪುಗಳು
ಮರುಕಳಿಸಿ ಕೊಲ್ಲುವವು…

ಮನದ ಮೈದಾನದಲ್ಲಿಗ
ನೆನಪುಗಳ ಕದನ
ಹೃದಯದ ಆಕ್ರಂದನಕೆ
ಕನಸುಗಳು ಕಾರಣ…

ಬಾರದಿರು ಕನಸೆ
ಮತ್ತೊಮ್ಮೆ ನೆನಪಿನಲಿ
ಮಲಗಿರುವ ನೆನಪುಗಳು
ಎದ್ದಾವು ಕನಸಿನಲಿ…!!

ರಾಜ್…!!
ನನ್ನವಳ
ಕಾಂತಿಗೆ

ಸೂಯ೯ಕಾಂತಿಯು
ನಾಚಿ
ತಲೆ ಬಾಗಿಸಿತು…!!
............................................

ಅವಳು
ನಕ್ಕಾಗ
ಉದುರಿಬಿದ್ದ
ಮುತ್ತುಗಳು
ಸಾಗರದ
ತಳ ಸೇರಿ
ಕಪ್ಪೆ - ಚಿಪ್ಪುಗಳಾದವು…!!
....... ‌...............................

ಅವಳಂದಕೆ
ಮನಸೋತ
ಚಂದಿರ
ಇಂದಿಗೂ
ಅವಿವಾಹಿತ…!!
.………………………………………
ಹೆಪ್ಪುಗಟ್ಟಿದೆ ಮೌನ
ಸಹನೆಯು ಮಿತಿಮೀರಿ
ಮಾತನಾಡ ಬಯಸಿದೆ…

ಮುಗ್ದ ಮನಸಿಗೆ
ಮುನಿಸಿನಿಂದ ಶಿಕ್ಷೆ
ತರವೇ? ನೀ ಹೇಳೆ…

ಅಂಕದ ಪರದೆ
ಸರಿಯುವ ಮುನ್ನ
ಬಿಂಕವ ತೊರೆದು…

ಮೌನ ಮಾತಾಡುತಿದೆ
ಓ ಒಲವೆ ಕಿವಿಗೊಟ್ಟು
ಕೇಳು ನೀನೊಮ್ಮೆ…!!

ರಾಜ್…!!.
ಅಲೆಗಳ
ಹೊಡೆತಕ್ಕೆ
ಕಡಲ
ಕೊರೆತಕ್ಕೆ
ಕಲ್ಲು
ಕೂಡಾ
ಕರಗುವುದಂತೆ
ಆದರೆ
ನನ್ನವಳ
ಹೃದಯ
ತುಂಬಾ
ಗಟ್ಟಿ…!!
ಅಳಿವಿನಂಚಿಗೆ ಬಂದು ನಿಂತಿದೆ
ಅಗಲಿಕೆ ನೋವಿನಲಿ
ನರಳಿ ನೊಂದಿದೆ
ಈ ಹೃದಯ…

ಅಲ್ಪ -ಸ್ವಲ್ಪ ವೆ
ಉಸಿರಾಡುತಿದೆ
ಅನಪಭವಿಸುತಿದೆ
ನರಕಯಾತನೆ ಸಮಯ…

ಚಂದಿರನು ಮರುಗಿಹನು
ಸಂಸೈಸಿ ಸೋತಿಹನು
ಅವಗಿಲ್ಲದ ನೋವು
ನಿನಗೇತಕೆಂದು ಕೇಳಿಹನು…

ಮಸಣದ ಹಾದಿಯಲಿ
ಕನಸುಗಳ ಮಾರಣಹೊಮ
ನೆನಪುಗಳು ನಡೆದಿವೆ
ಶವಯಾತ್ರೆಯಲಿ ಜೊತೆಗೆ…

ಇನಿಯನು ತಾ ಬರುವನೆ
ಹೊಸ ಉಸಿರ ಜೊತೆಗೆ
ಇಲ್ಲವೆ ಸಂಸ್ಕಾರ ಮಾಡಲು
ಕೊನೆ ಫಳಿಗೆಯಲಿ ಚಿತೆಗೆ…!!

ರಾಜ್…!!

Friday 7 March 2014

ತಾಯಿಯ ರೂಪದಲಿ
ದೇವರ ಪ್ರತಿರೂಪ
ಸೋದರಿಯು ಜೊತೆಗಿರೆ
ವಾತ್ಸಲ್ಯದ ಆಲಾಪ...

ಮಗಳಾಗಿ ನೀನಿರಲು
ತಾಯಿಯ ತದ್ರೂಪ
ಗೆಳತಿಯಾಗಿ ಬದುಕಿನಲಿ
ಸಾಂತ್ವನದ ಸಂತಾಪ...

ಒಲವಿನ ಮಡದಿಯಾಗಿ
ಮನೆಬೆಳಗೊ ನಂದಾದೀಪ
ಭೂ ತಾಯಿ ಹೆಣ್ಣಾಗಿ
ನಮ್ಮ ಕಾಯುವ ದೈವ...

ಓ ಹೆಣ್ಣೆ ನೀನಿರುವಲ್ಲಿ
ದೇವತೆಗಳ ವಾಸ
ಬಗೆಬಗೆಯ ರೂಪದಲಿ
ನಿನ್ನ ಕಾಯಕವೆ ಕೈಲಾಸ...

ಪ್ರತಿಫಲ ಬಯಸದೆ
ಪರಿಶ್ರಮದ ದುಡಿಮೆ
ಮಹಿಳೆಯೆ ನಿನಗೊಲಿದ
ಬಹುದೊಡ್ಡ ಹಿರಿಮೆ...!!!

( ಮಾರ್ಚ-8 : " ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ" ಪ್ರಯುಕ್ತ ಸಣ್ಣದೊಂದು ಪ್ರಯತ್ನ )

[ ಮಹಿಳಾ ದಿನಾಚರಣೆಯ ಶುಭಾಶಯಗಳು ]

ರಾಜ್..!!

Thursday 6 March 2014

ನಿನ್ನ ಕಣ್ಣಂಚ ಸಂಚಲ್ಲಿ
ಹೊಸ ಮಿಂಚೊಂದು ಕಂಡೆ
ಆ ಮುಂಗುರುಳ ಗುಂಗಲ್ಲಿ
ಈ ಮನಸ ಕಳಕೊಂಡೆ…

ಒಮ್ಮೆ ತೆರೆದುಬಿಡು
ಹೃದಯದ ಬಾಗಿಲು
ಒಳಬರಲೆ ಒಲವೆ
ನೀ ಅನುಮತಿಯ ಕೊಡಲು…

ನೆನಪುಗಳ ಜೊತೆಗೂಡಿ
ಕನಸುಗಳು ಕಾಡಲು
ಕಣ್ಣ ರೆಪ್ಪೆಯಲ್ಲಿಟ್ಟು
ನಿನ್ನ ನಾ ಕಾಯುವೆ…

ಬೆಳದಿಂಗಳ ಬಾನಿನಲಿ
ಮೂಡಿದಂಥ ಪೂಣ೯ಚಂದ್ರ
ನಿನ್ನ ನೊಡಿ ಮೊಹಗೊಂಡು
ಹಗಲು ಕೂಡ ಇಣುಕುತಿಹನು…

ಕೊಟ್ಟು ಬಿಡು ಹೃದಯವ
ನಾ ಕದಿಯುವ ಮುನ್ನವೆ
ಒಲವ ಬಯಸಿ ಬಂದಿರುವೆ
ಇನ್ನು ಒಲಿಯಬಾರದೇತಕೆ…!!

ರಾಜ್…!!
ಸುಂದರಿಯ
ಅಂದಕ್ಕೆ
ಚೆಂದದ
ಗುಲಾಬಿ…

ನನ್ನವಳ
ಮುಡಿಯಲ್ಲಿ
ಇಮ್ಮುಡಿಯು
ಸೌಂದರ್ಯ…

ಓ ಗುಲಾಬಿಯೆ
ನೀನೆಷ್ಟು ಧನ್ಯ
ನೀನಿದ್ದರೆ ಜೊತೆಯಲ್ಲಿ
ಮನದನ್ನೆ ಇನ್ನೂ ಚೆನ್ನ…!!
ಹೇ ಹೃದಯಾ
ಒಮ್ಮೆ ಹೇಳಲಾರೆಯಾ
ನನ್ನ ಬಾಳ ಪುಟದಲಿ
ಕವಿತೆಯಾಗಲಾರೆಯಾ…

ಪಲ್ಲವಿ ಇಲ್ಲದ ಚರಣ
ನೀನಿಲ್ಲದ ಈ ಜೀವನ
ತಾಳವು ತಪ್ಪಿದ ಗಾಯನ
ಮನಸಿನ ಮೂಕರೊಧನ…

ಗುಲಾಬಿ ಕೆನ್ನೆಯ
ಕೋಮಲಾಂಗಿಯೆ
ಸುಮ್ಮನೆ ಇದ್ದ ಮನಸಿಗೆ
ಹೊಸ ಕನಸೊಂದ ತೋರಿದೆ…

ಮನದಂಗಳದಿ ಅರಳಿದ ಹೂವೆ
ಮುಳ್ಳಾಗದೆ ಬದುಕಿಗೆ
ಮುಡಿಯಲಿ ನಗುತ
ಪಡೆವ ಸಾಥ೯ಕ ಬದುಕ…!!
ನಿನ್ನ ಸನಿಹ
ಸೇರೊ ತವಕ
ಒಂದೆ ಬಯಕೆ
ನನ್ನಿ ಮನಕೆ…

ನಿನಿತ್ತ ಸುಳಿದಾಗ
ತಂಗಾಳಿ ಹಿತವಾಗಿ
ಬೆರೆಲ್ಲ ಮರೆತಾಗಿದೆ
ನಿನ್ನ ವಿನಹ ಬೇರೆ ಏನಿದೆ…

ಉಸಿರುಸಿರೆ ನಿನಗಾಗಿ
ನನ್ನುಸಿರೆ ನೀನಾಗಿ
ಮನಸಿಂದು ಮಗುವಾಗಿದೆ
ಮಧುರ ಪಿಸುಮಾತಿಗೆ…

ನೀ ಬಂದು ನಿಂತಂತೆ
ನಕ್ಕು ಬಳಿ ಕರೆದಂತೆ
ನಿನ್ನದೇ ಚಟುವಟಿಕೆ
ಕನಸಲ್ಲೂ ಕನವರಿಕೆ …

ನಿನ್ನ ಸನಿಹ
ಸೇರೊ ತವಕ
ಒಂದೇ ಬಯಕೆ
ನನ್ನಿ ಮನಕೆ…!!

ರಾಜ್…!!
ನಿನ್ನ ಸನಿಹ
ಸೇರೊ ತವಕ
ಒಂದೆ ಬಯಕೆ
ನನ್ನಿ ಮನಕೆ…

ನಿನಿತ್ತ ಸುಳಿದಾಗ 
ತಂಗಾಳಿ ಹಿತವಾಗಿ
ಬೆರೆಲ್ಲ ಮರೆತಾಗಿದೆ
ನಿನ್ನ ವಿನಹ ಬೇರೆ ಏನಿದೆ…

ಉಸಿರುಸಿರೆ ನಿನಗಾಗಿ
ನನ್ನುಸಿರೆ ನೀನಾಗಿ
ಮನಸಿಂದು ಮಗುವಾಗಿದೆ
ಮಧುರ ಪಿಸುಮಾತಿಗೆ…

ನೀ ಬಂದು ನಿಂತಂತೆ
ನಕ್ಕು ಬಳಿ ಕರೆದಂತೆ
ನಿನ್ನದೇ ಚಟುವಟಿಕೆ
ಕನಸಲ್ಲೂ ಕನವರಿಕೆ …

ನಿನ್ನ ಸನಿಹ
ಸೇರೊ ತವಕ
ಒಂದೇ ಬಯಕೆ
ನನ್ನಿ ಮನಕೆ…!!

ರಾಜ್…!!

ಗೆಳತಿ
ನನ್ನ
ನರ -
ನಾಡಿಗಳಲ್ಲಿ
ಉಕ್ಕಿ
ಹರೆಯುತ್ತಿದ್ದ
ನಿನ್ನೆಡೆಗಿನ
ಪ್ರೀತಿಯನ್ನು
ದಯೆ
ತೋರದೆ
ಕೊಂದ
ನಿನ್ನನ್ನು
ನರ ಹಂತಕಿ
ಎನ್ನಬಹುದೇ…?
ನನ್ನ
ಪ್ರತಿ
ಕವಿತೆಗಳಲ್ಲಿ
ಇಣುಕಿ
ನೆನಪುಗಳನ್ನು
ಕೆಣಕಿ
ಹೋಗುವ
ನೀನು
ಬದುಕ
ಬಂಡಿಗೆ
ನೊಗವಾಗಬಾರದೇ.?
ಆಸೆಗಳು ನೂರಾರು
ಮನದಲ್ಲಿ ಪುಟಿದಿರಲು
ಭಾವಗಳು ಒಂದೊಂದೇ
ಸಂಪನ್ನು ಹೂಡಿಹವು…

ಮೋಹವು ಮನದೊಳಗೆ
ಬಲವಾಗಿ ಬೇರೂರಿ
ಮೌಢ್ಯದ ಕತ್ತಲಲಿ
ತಪ್ಪನ್ನು ಮಾಡುತಿದೆ …

ಆಸೆಗೆ ಅಂಕುಶವುಂಟೆ
ಭಾವನೆಗೆ ಮೌಲ್ಯವು
ಮೋಹದ ಪರವಶಕೆ
ಸಿಲುಕದ ಮನಸುಂಟೆ…?

(ಸಂಪು - ಸತ್ಯಾಗ್ರಹ /ಮುಷ್ಕರ )

ರಾಜ್…!!
ನಿನ್ನ
ಹಂಸದಂಥ
ನಡಿಗೆ
ಕಂಡು
ಹಂಸವು
ನಾಚಿ
ನೀರಾಯಿತು…

ನಿನ್ನ
ಮಧುರ
ಧ್ವನಿಗೆ
ಕೋಗಿಲೆಯೆ
ಮೂಕಾಯಿತು…

ನನ್ನ
ಪಾಡೆನು
ಹೇಳಲಿ
ನಾನೊಬ್ಬ
ಸಂತ…!!
ಬಿಸಿಲೂರ ಬಯಲಿನಲಿ
ಹುಟ್ಟಿತೊಂದು ಪ್ರೇಮಕಾವ್ಯ
ಬಯಲುಸೀಮೆಯ ಹುಡುಗಿ
ಕನಸು ಕಂಗಳ ಹುಡುಗ…

ಅವಳಂದಕೆ ಮನಸೋತವ 
ಅವಳೆಂದರೆ ಜೀವ
ಸ್ನೇಹದ ಸೇತುವೆ ಮೇಲೆ
ಅರಳಿತೊಂದು ಪ್ರೀತಿಯ ಹೂವ

ಸ್ವಚ್ಛಂದದ ಬಾನಿನಲ್ಲಿ
ಬಾನಾಡಿಗಳು ತಾವಾಗಿ
ಪ್ರೀತಿಯ ಆಗಸದಲ್ಲಿ
ತೇಲಿತ್ತು ಜೋಡಿ ಹಕ್ಕಿ…

ಹಗಲಿರುಳು ಪ್ರತಿಸಮಯ
ಹಕ್ಕಿಗಳ ಕಲರವ
ಅತಿ ಮಧುರ ಅನುರಾಗದಿ
ಮಿತಿ ಮೀರಿದ ಮೋಹ…

ಯಾವ ದೈವ ಶಾಪ ನೀಡಿತೊ
ಯಾರ ಕಣ್ಣ ದೃಷ್ಟಿ ತಾಗಿತೊ
ಪ್ರೀತಿಯ ಸಾಗರದಲ್ಲಿ
ಸಂಶಯದ ಬಿರುಗಾಳಿ…

ಬಾಳ ನೌಕೆಯಲ್ಲಿಗ
ಒಬ್ಬಂಟಿ ಪಯಣಿಗರು
ಅವಳೊಂದು ತೀರ
ಅವನೊಂದು ತೀರ…!!

ರಾಜ್…!!
ಕಾಯುತ್ತಿದ್ದೆನೆ ಇನ್ನು
ನಿನ್ನ ಒಂದು ಒಪ್ಪಿಗೆಗಾಗಿ
ಸಾಯುತ್ತಿದ್ದೆನೆ ದಿನವು
ಪ್ರೀತಿಸಿದ ತಪ್ಪಿಗಾಗಿ…

ಮನಸಿಗಿಲ್ಲ ನೆಮ್ಮದಿ
ಸಿಗುವುದೇ ನಿನ್ನ ಸಮ್ಮತಿ
ಕನಸುಗಳ ಜನಿಸುವಿಕೆ
ನೆನಪುಗಳು ಕೊಲ್ಲುತಿವೆ…

ಬಸವಳಿದ ಹೃದಯಕ್ಕೆ
ಪ್ರೀತಿ ಮಳೆಯ ಸಾಂತ್ವನ
ಕಲ್ಲು ಹೃದಯ ಕರಗುವುದೆ
ಒಲವ ಮಳೆಯ ಸುರಿಸುವುದೆ…

ಕೊಲ್ಲು ಹೃದಯವೆ ಕನಸುಗಳ
ಒಲ್ಲದ ಹುಡುಗಿಯ ನೆನಪುಗಳ
ಬ್ರಹ್ಮ ಗಂಟಿಗೆ ಅಂಟುವ ಮೊದಲು
ಕಳಚಿಕೊ ಪ್ರೀತಿಯ ನಂಟನ್ನ…

ಕಾಯುತ್ತಿದ್ದೆನೆ ಪ್ರೀತಿಸಿ ನಿನ್ನನ್ನ
ಮಾಡಲಾರೆಯ ನಿನೊಮ್ಮೆ ತಪ್ಪನ್ನ...!!?

ರಾಜ್…!!
ನೆನಪಿನುಯ್ಯಾಲೆಯಲ್ಲಿ
ಜೀಕುವ ಬಾ ಗೆಳತಿ
ಒಲವಿನ ಫಳಿಗೆಗಳ
ಮೆಲುಕು ಹಾಕುವ ಬಾ

ಬೆಳದಿಂಗಳಿರುಳಿನಲಿ
ತಂಗಾಳಿ ತಂಪಿನಲಿ
ನೆನಪಿನ ಜೋಕಾಲಿ
ಜೊತೆ ಸೇರಿ ಜೀಕುತಲಿ

ಕೆಣಕಿದಾಗ ಮುನಿಸಿಕೊಂಡ
ಮುನಿಸಿದಾಗ ರಮಿಸಿದಂಥ
ಮನದಿ ಮಧುರ ನೆನಪುಗಳ
ಅಲೆಯೊಂದು ಸುಳಿದಾಡಿ…

ಕಣ್ಣ ರೆಪ್ಪೆ ಮಾತನಾಡಿ
ಮನಸು ಮನಸು ಸೇರಿಕೊಂಡು
ಕಂಡಂತ ಕನಸುಗಳ
ನೆನೆಯುವ ಸವಿಸಮಯ…

ಜೋರಾಗಿ ಜೀಕದಿರು
ನೆನಪಿನುಯ್ಯಾಲೆಯ
ಹಾರಿ ಬಿಟ್ಟಾವು ದೂರಕ್ಕೆ
ನೆನಪುಗಳು ಮನಸಿಂದ…!!

ರಾಜ್…!!

ಕಳೆದು ಹೋಗಿದ್ದೆನೆ
ನನ್ನೊಳಗೆ ನಾನು
ಕಾಣದ ಕಡಲೊಳಗೆ
ಸಿಲುಕಿರುವ ಮೀನು…

ಮೌನದಲಿ ಅತಿಮೌನಿ
ಮಂಕು ಕವಿದ ಮತೀ
ಭಾವನೆಗಳು ಬಸಿರಾಗಲು
ಬಲವಂತದ ಭ್ರೂಣ ಹತ್ಯೆ…

ಅಗೆದಷ್ಟು ಆಳದಲಿ
ಬತ್ತಿರುವ ಭಾವ
ಚಿಗುರೊಡೆಯುವುದೆ ಮತ್ತೆ
ಜೀವ ಸಂಜೀವಿನಿ…

ಕಳೆದು ಹೋಗಿದ್ದೆನೆ
ನನ್ನೊಳಗೆ ನಾನು
ಹುಡುಕಿ ಕೊಳ್ಳಲೆಬೇಕು
ಪೂತಿ೯ ಕಳೆಯುವ ಮುನ್ನ…!!

ರಾಜ್…!!!

ನಿನ್ನ ಮರೆಯಲು
ಕವಿತೆಗಳ ಮೊರೆಹೊದೆ
ಪ್ರತಿಯೊಂದು ಪದಗಳಲು
ನಿನ್ನ ನೆನಪಿನ ನೆರಳು…

ಅಕ್ಷರಗಳ ಕುಂಜದಲಿ
ಪದಗಳಿಗೇಕೊ ಬರ
ಮರೆಯಲೆನಗೆ ಕೆಲವು
ಅಕ್ಷರಗಳ ಸಾಲ ಕೊಡು…

ಮರೆಯಬೇಕು ನಾನು
ಬರೆಯಬೇಕು ಕವಿತೆ
ನಿನ್ನ ಋಣದಲಿ ಪದ್ಯ
ನಿನಗೆಂದೆ ಅಪ೯ಣೆಯು…!!

ರಾಜ್…!!

ಮನದ ಬೇಗುದಿಯಲ್ಲಿ
ಮೌನದಲಿ ಕಾಡಿದ
ನಿನ್ನ ನೆನಪುಗಳ
ಕತ್ತ್ಹಿಸುಕಿ ಕೊಂದಿರುವೆ…

ಉಸಿರಲ್ಲಿ ಬೆರೆತ ಉಸಿರನ್ನ
ಹೃದಯದಲ್ಲಿ ಬಲಿತ
ನನ್ನ ಪ್ರೀತಿಯನ್ನ
ಕಸಿ ಮಾಡಿ ತೆಗೆದಿರುವೆ…

ಮಸಣದ ಬೀದಿಯಲ್ಲಿ
ಹೊತ್ತು ಸಾಗುತ್ತಿದ್ದೆನೆ
ನಿನ್ನ ನೆನಪುಗಳ
ಕಳೆಬರಹ…

ಸುತ್ತ ಮುತ್ತಲು ಸುಳಿಯದಿರು
ಮತ್ತೆ ಜೀವ ಬಂದಾತು
ನಿನ್ನ ನೊಡಿದ ಕೂಡಲೆ
ಸತ್ತ ನೆನಪುಗಳಿಗೆ…!!

ರಾಜ್…!!
ಕಾಮದ ಸಂಚಿಗೆ
ಯಾರದೊ ತಪ್ಪಿಗೆ
ಬಸಿರಲ್ಲೆ ಉಸಿರ
ತ್ಯಾಗ…
.
.
ಕ್ಷಣಿಕ ಸುಖದ
ತೀರದ ದಾಹಕ್ಕೆ
ಹೊರಬಂದ
ಹಸುಗೂಸು
ನಾಯಿಗಳ
ಪಾಲು…!!
ಕರುಳ ಬಳ್ಳಿಯೊಂದು 
ಬಳ್ಳಿಯಿಂದ ದೂರವಾಗಿ
ಹೆತ್ತ ಕರುಳ ಕತ್ತರಿಸಿ
ಕಣ್ಣ ನೀರ ತರಿಸಿದೆ…

ಹೊತ್ತು -ಹೆತ್ತು ಸಲಹಿದವಳ
ಬೆಲೆಯನರಿಯೆ ದೂರತಳ್ಳಿ
ಕರುಣೆ ಮರೆದ ಕಂದನೀಗ
ಕತ್ತರಿಸಿದ ಕರುಳಬಳ್ಳಿ…

ಸತಿಯ ಮಾತು ಕೇಳಿ ತನ್ನ
ಹೆತ್ತ ಕರುಳ ಹೊರೆಯಂದು
ಹೊರಗಟ್ಟಿದ ಮಗರಾಯ
ಹಲಬುತಿತ್ತು ತಾಯಿ ಹೃದಯ…

ಇಂದು -ನಿನ್ನೆ ಬೆಸೆದ ಬಂಧ
ಸತಿ -ಸುತರ ಸಂಬಂಧ
ಎಷ್ಟೆ ಜನುಮ ಜನಿಸಿದರು
ಋಣತೀರದು ಅಮ್ಮ ನಿನ್ನ ಅನುಬಂಧ…

ಮೂಢ ಮನವೆ ಮರೆಯದಿರು
ಹೆತ್ತ ಕರುಳ ನೊಯಿಸದಿರು
ಜನುಮದಾತೆ ನಮಗೆ ಎಲ್ಲ
ತಾಯಿಗಿಂತ ದೇವರಿಲ್ಲ…!!

ರಾಜ್…!!
ನಿನ್ನ
ಪ್ರೀತಿಸಿದ
ತಪ್ಪಿಗೆ…

ನಾನೀಗ
ಭಾವನೆಗಳ
ಸಂಕೋಲೆಯಲ್ಲಿ
ಬಂಧಿ…

ವಿರಹದ
ಜೀವಾವಧಿ
ಗಿಂತ
ದಯಾಮರಣವೇ
ಲೇಸು…!!

ರಾಜ್…!!
ಗೆಳತಿ
ನಿನ್ನ
ಬರುವಿಕೆಗೆ
ಕಾದು - ಕಾದು
ಸುಸ್ತಾದ
ಹೃದಯವೀಗ
.
.

ಬೆಚ್ಚನೇ
ಮಲಗಿದೆ
ನೀ
ಬಿಟ್ಟು ಹೋದ
ನೆನಪುಗಳ
ಜೊತೆ…!!

ರಾಜ್…!!
ಪ್ರೇಮದ ಆರಂಭಕ್ಕೆ
ಇಲ್ಲದ ಕ್ಷಣ -ದಿನ
ಪ್ರೇಮ ನಿವೆದನೆಗೆಂದೆ
ಪ್ರೇಮಿಗಳ ದಿನ…

ಕಣ್ಣೊಟಗಳ ಕಾದಾಟಕ್ಕೆ
ಮನಸುಗಳ ಮಿಲನ
ಪ್ರೀತಿಯ ಮಾಯಾಜಾಲಕ್ಕೆ
ಹೃದಯಗಳ ಬಲಿದಾನ…

ಸಮಯದ ಅರಿವಿರದು
ತೃಷೆಗಳ ನೆನಪಿರದು
ಹುಚ್ಚು ಹೃದಯಕ್ಕೀಗ
ಹೊಸದೊಂದು ಖಯ್ಯಾಲಿ…

ಪ್ರೀತಿಯಲಿ ಪಾವಿತ್ರ್ಯತೆ
ಉಳಿಯಲಿ ಚಿರಕಾಲ
ಪ್ರೇಮದಲಿ ನಂಬಿಕೆಯು
ಬಹುಮುಖ್ಯ ಬಾಳೆಲ್ಲ…

ಹೃದಯವದು ನೊಂದರೆ
ವಿರಹವೆ ಅನುದಿನ
ಪ್ರೇಮ ನಿವೇದನೆಗೆ
ಬೇಕೆ ಪ್ರೇಮಿಗಳ ದಿನ…?

ರಾಜ್…!!