Thursday 6 March 2014

ಕರುಳ ಬಳ್ಳಿಯೊಂದು 
ಬಳ್ಳಿಯಿಂದ ದೂರವಾಗಿ
ಹೆತ್ತ ಕರುಳ ಕತ್ತರಿಸಿ
ಕಣ್ಣ ನೀರ ತರಿಸಿದೆ…

ಹೊತ್ತು -ಹೆತ್ತು ಸಲಹಿದವಳ
ಬೆಲೆಯನರಿಯೆ ದೂರತಳ್ಳಿ
ಕರುಣೆ ಮರೆದ ಕಂದನೀಗ
ಕತ್ತರಿಸಿದ ಕರುಳಬಳ್ಳಿ…

ಸತಿಯ ಮಾತು ಕೇಳಿ ತನ್ನ
ಹೆತ್ತ ಕರುಳ ಹೊರೆಯಂದು
ಹೊರಗಟ್ಟಿದ ಮಗರಾಯ
ಹಲಬುತಿತ್ತು ತಾಯಿ ಹೃದಯ…

ಇಂದು -ನಿನ್ನೆ ಬೆಸೆದ ಬಂಧ
ಸತಿ -ಸುತರ ಸಂಬಂಧ
ಎಷ್ಟೆ ಜನುಮ ಜನಿಸಿದರು
ಋಣತೀರದು ಅಮ್ಮ ನಿನ್ನ ಅನುಬಂಧ…

ಮೂಢ ಮನವೆ ಮರೆಯದಿರು
ಹೆತ್ತ ಕರುಳ ನೊಯಿಸದಿರು
ಜನುಮದಾತೆ ನಮಗೆ ಎಲ್ಲ
ತಾಯಿಗಿಂತ ದೇವರಿಲ್ಲ…!!

ರಾಜ್…!!

No comments:

Post a Comment