Tuesday 6 May 2014

ಆನೆಯಷ್ಟು
ದೊಡ್ಡ
ಆಣೆ
ಪ್ರಮಾಣಗಳನ್ನು
ಮಾಡಿ
ಕಾಣೆಯಾದಳು
ಹುಡುಗಿ
ತಂಗಾಳಿ
ಸೋಕದಂತೆ…!
ನೀ ಬಿಟ್ಟು ಹೊದ ದಾರಿಯಲ್ಲಿ
ಒಬ್ಬಂಟಿ ಕನಸು ಒಂದು
ನನಸಾಗದ ತನ್ನತನಕೆ
ಕಂಬನಿಯಗರೆಯುತಿದೆ…

ಕೂಡಿ ಕಳೆದ ಕ್ಷಣಗಳಲ್ಲಿ
ಇರದ ಭೀತಿ ನೆರಳೊಂದು
ಸುಳಿವು ಕೊಡದೆ ದಾಳಿ ಮಾಡಿ
ಮನಸ ಘಾಸಿಗೊಳಿಸಿದೆ…

ಗುಲಾಬಿಯಂತೆ ನಳನಳಿಸುತ್ತಿದ್ದ
ಹೂವು ನೀನು ದುಂಬಿ ನಾನು
ಮಾಲಿ ಯಾರೊ ಬಂದನವನು
ಬೆಲೆಯ ಕಟ್ಟಿ ಕೊಂಡುಹೊದ…

ಹೃದಯ ಕಿತ್ತು ಹೊದ ಭಾವ
ನೆನಪು ಹೊತ್ತ ಎದೆಯ ತುಂಬಾ
ವಿರಹದುರಿಯು ಭಾರ ಭಾರ
ಜೊತೆಗೆ ಆಸರೆ ಕಣ್ಣ ನೀರ…

ನೀ ಬಿಟ್ಟು ಹೊದ ದಾರಿಯಲ್ಲಿ
ಒಂಟಿಯಾದ ಕನಸು ಒಂದು
ತನ್ನತನಕೆ ಹಳಿಯುತಿದೆ
ಒಂದೆ ಸಮನೆ ಕೊರಗುತಿದೆ…!!

ರಾಜ್…!!

ಕನಸಿನ
ಅರಮನೆಯಲ್ಲಿ
ಜೊರಾದ
ಕಂಪನ
ಸಂತಸದಿ
ಹೊರಟಿದೆ
ಅವಳ
ಮದುವೆ
ದಿಬ್ಬಣ…
……!……!……!……!……!……!……
ಕಾಡುವ
ಕನಸಿಗೂ
ಕನಿಕರದ
ಕೊರತೆ
……!……!……!……!……!……!……
ಅವಳ
ನೆನೆಯಲು
ಪುಟಿದೇಳುವ
ನೋವಿನ
ಸೆಲೆ
ಅಳುವ
ಕಣ್ಣಿಗೆ
ಕಣ್ಣೀರು
ಬತ್ತುವ
ಆತಂಕ
……!……!……!……!……!……!……
ಮಡಿವಂತಿಕೆ ಸೋಗಿನಲಿ
ಮಯಾ೯ದಾ ಪುರುಷರು
ಹಗಲೊತ್ತಿನಲಿ ಮುಖವಾಡ
ಸಂಜೆ ಕತ್ತಲಿನಲಿ ಬೆತ್ತಲೆ ಸಹವಾಸ…

ಮದಿರೆಯ ನಶೆಯಲ್ಲಿ
ಕೆಂಪು ದೀಪದ ಓಣಿ
ಕಚ್ಚೆ ಹರುಕರ ದಂಡು
ಕೊಚ್ಚೆ ತುಂಬಿದ ದೋಣಿ…

ಹೆಣ್ಣನಿವರು ಪೂಜಿಸುವರು
ತಮ್ಮ ಮನೆಯ ಬಂಧಿಯೊಳಗೆ
ಅನ್ಯರೆಲ್ಲ ಅನಾಮಿಕರು
ಅನುಭವಕೆ ಇವರು ಮಿಕರು…

ಹೆಣ್ಣಿಗಷ್ಟೆ ಕಟ್ಟುಪಾಡು
ಕೇಳೊರಿಲ್ಲ ಹೊಟ್ಟೆಪಾಡು
ಸುತ್ತ ಮುತ್ತ ಗೋಡೆ ಕಟ್ಟಿ
ಕರೆಯಲೊಂದು ಸೂಳೆ ಪಟ್ಟ…

ಮಡಿವಂತಿಕೆ ಸೋಗಿನಲಿ
ಮಯಾ೯ದಾ ಪುರುಷರು
ಹಗಲೊತ್ತಿನಲಿ ಮುಖವಾಡ
ಸಂಜೆ ಕತ್ತಲಿನಲಿ ಬೆತ್ತಲೆ ಸಹವಾಸ…!!

ಗೆಳತಿ
ಕಣ್ಮುಚ್ಚಿ
ಮಲಗದಿರು
ಬೇಗ
ಕನಸುಗಳ
ಕೊಂದು
ಯಾವುದಾದರೂ
ಒಂದು
ಕನಸಿನಲಿ
ಜನ್ಮ
ತಳೆಯುವ
ಆಸೆ
ನನಗೆ…!!

“ನಮ್ನ ಚಿತ್ರ -ನಿಮ್ಮ ಕವನ… ಸರಣಿ -4ಕ್ಕೆ ನನ್ನ ಪ್ರಯತ್ನ ”

ಜಗದ ಚಿಂತೆಯಲಿ
ಮುಳುಗಿಹುದು ಶ್ವಾನ
ಮಾನವನ ಸ್ವಾಥ೯ಕ್ಕೆ
ಹಳಿದಿಹುದು ಒಳಗೊಳಗೇ…

ಕಾಗೆ -ಗೂಬೆಗಳಿಗಿಂತ
ಕೀಳಾಗಿ ಹೊಗಿಹನು
ನಾನು ನನ್ನದೇನ್ನುವ
ಮೋಹದ ಪರಿಧಿಯೊಳಗೆ …

ಹಂಚಿಕೊಂಡು ತಿನ್ನುವ
ಬದಲಾಗಿ ಕಸಿದು ತಿನ್ನುತ್ತ
ಬರಿ ಸುಲಿಗೆ ಮಾಡುತಿಹ
ಮೃಗಕ್ಕಿಂತ ಕಡೆಯಾಗಿ…

ನನಗಿರುವ ನಿಯತ್ತು
ನಿಮಗಿರದೆ ಹೊಯ್ತು
ಎಂದೆನುತ ಶ್ವಾನವು
ನಿದಿರೆಯ ಮೊರೆಹೊಯ್ತು…!!
ಕನಸೆಂದರೆ ಬರಿ
ಕನಸಲ್ಲ ಅದು
ಮನಸಿನ ಭಾವನೆಗೆ
ಹಿಡಿದ ಕನ್ನಡಿಯ ಬಿಂಬ…

ಕನಸೆಂದರೆ ಬರಿ
ತಂಪಾಗಿ ಬೀಸುವ
ತಂಗಾಳಿಯಲ್ಲ ಅದು
ಅಮವಾಸೆಯ ಕತ್ತಲೂ…

ಕನಸೆಂದರೆ ಬರಿ
ಬೆಳಗಿನ ಇಬ್ಬನಿಯ
ಪಸೆ ಅಲ್ಲ ಅದು
ಸುಡು ಬಿಸಿಲಿನ ಬೆವರ ಹನಿ…

ಕನಸೆಂದರೆ ಬರಿ
ಸಂತಸದ ಕ್ಷಣವಲ್ಲ
ಸಂತಸದ ಜೊತೆ ಬರುವ
ಚಿಂತೆಯ ಗೆರೆ ಕೂಡ…

ಕನಸೆಂದರೆ ಅದು ಕನಸು
ಏಳು ಬೀಳನು ಕಂಡ
ಸಿಹಿ -ಕಹಿಯ ಸವಿಯನ್ನುಂಡ
ಮನಸಿನ ಭಾವಸಂಗಮ…!!

ರಾಜ್…!!

ಕಾಡು ಬೆಳದಿಂಗಳ
ಸರಿ ರಾತ್ರಿ ಹೊತ್ತಲ್ಲಿ
ಚಂದ್ರನ ಬೆಳಕಿನ
ಆಸರೆ ಬಯಸುತಲಿ…

ಹೃದಯ ಹೊರಟಿದೆ
ದೂರ ತೀರಕೆ ಪಯಣ
ಹಿಂದೆಂದೋ ಕಂಡಂತ
ಕನಸಿನ ಜಾಡು ಹಿಡಿದು…

ವಾಸ್ತವವ ಮರೆಮಾಚಿ
ಕನಸನ್ನು ಹುಡುಕುತ್ತ
ಹಠ ಹಿಡಿದ ಹೃದಯ
ಗುಳೆ ಹೊರಟಿದೆ ಇಂದು…

ಹೊಗುವ ಭರದಲ್ಲಿ
ಮರೆತಿದೆ ತಾನಿಂದು
ಜೀವನದ ಹಾದಿಯಲಿ
ಕಲ್ಲು ಮುಳ್ಳುಗಳುಂಟೆಂದು…

ಬಯಸಿದ್ದೆಲ್ಲವು ಸಿಗದು
ಬಾಳಲ್ಲಿ ಎಂದೆಂದೂ
ಇದ ಮರೆತ ಹೃದಯ
ಅರಿಯುವುದು ಇನ್ನೆಂದು…!!
ಮನಸಿನ ಬಯಲೊಳಗೆ
ಭಾವನೆಗಳ ಬಯಲಾಟ
ಮನಸಿನ ಒಡೆಯನಿಗೆ
ಸಹಿಸದ ತೊಳಲಾಟ…

ಒಂದೊಂದು ಭಾವಕ್ಕೂ
ಒಂದೊಂದು ರೂಪ
ಆಡುವವು ಚೆಲ್ಲಾಟ
ಮನಸೊಳಗೆ ಸಂಕಟ…

ಭಾವಜೀವಿಯ ಮನಸು
ಜೊತೆಗೆ ನನಸಾಗದ ಕನಸು
ಬದುಕಿರುವ ತನಕವು
ಭ್ರಮೆಯೊಳಗೆ ಬದುಕು…

ಮನಸಿನ ಬಯಲೊಳಗೆ
ಭಾವನೆಗಳ ಬಯಲಾಟ
ಭಾವಗಳ ಬಂಧನದಿ
ನಿತ್ಯವು ನರಳಾಟ…!!

ರಾಜ್…!!
ನೀ
ಬಿಟ್ಟು
ಹೊದ
ಹೆಜ್ಜೆ
ಗುರುತುಗಳಲ್ಲಿ
ಗೆಜ್ಜೆ
ಸದ್ದಿನ
ಕಂಪನ
ಕೇಳುವ
ಹುಂಬ
ಬಯಕೆ

ಲಜ್ಜೆ
ಬಿಟ್ಟ
ಮನಸ್ಸಿಗೆ…!!