Saturday 28 September 2013

ನಾನು ನಾನಾಗಿಲ್ಲ
ಮನಸು ನನ್ನಲಿಲ್ಲ
ಏನೋ ಮೋಡಿ ಮಾಡಿದಳಲ್ಲ
ಮೆಲ್ಲನೆ ಹೃದಯ ಕದ್ದಳಲ್ಲ..!!

ಹೆಸರನು ಹೇಳದೆ
ಪರಿಚಯ ನೀಡದೆ
ಮಾತನು ಆಡದೆ
ಮೆಲ್ಲನೆ ಹೃದಯ ಕದ್ದಳಲ್ಲ..!!

ಕರುಣೆಯ ತೋರದೆ
ಅರಿವಿಗೂ ಬಾರದೆ
ಹೃದಯವ ನೀಡದೆ
ಮೆಲ್ಲನೆ ಹೃದಯವ ಕದ್ದಳಲ್ಲ..!!

ಅವಳೆ ಅವಳೆ
ಇವಳು ಅವಳೆ
ಅವಳು ಇವಳೆ
ಇವಳೆ ಇವಳೆ..!!

ಬಯಲುಸೀಮೆಯ
ಮೌನದ ಗೌರಿ
ನನ್ನ ಮನದ
ರಾಜ ಕುಮಾರಿ..!!

$~ರಾಜ್ ಪಾಟೀಲ್~$
ಚಂದಿರ ಲೋಕಕೆ ಹೋಗುವ ಬಾರೆ
ಚುಕ್ಕಿಗಳ ಜೋತೆ ಆಡುವ ಬಾರೆ
ಅಂದದ ಹುಡುಗಿ ಜೋತೆ ನೀನಿರಲು
ಚಂದಿರನಿಂದ ಕರೆ ಬಂದಿರಲು

ಸುಂದರ ಬಾನಲಿ ಹುಣ್ಣಿಮೆ ಬೆಳಕಲಿ
ಸವಿ ಮಾತುಗಳನ್ನಾಡುವ ಬಾರೆ
ಬೆಳಗಿನ ರವಿ ತಾ ಮೂಡುವವರೆಗೂ
ಚಂದ್ರನ ಮಡಿಲಲಿ ಮಲಗುವ ಬಾರೆ

ನೇಸರನರಮನೆಗೆ ಹೋಗುವ ಬಾರೆ
ಕಾಮನ ಬಿಲ್ಲನು ನೋಡುವ ಬಾರೆ
ಕಾಮನ ಬಿಲ್ಲಿನ ಬಣ್ಣಗಳ ಜೋತೆ
ಓಕುಳಿಯಾಟವ ಆಡುವ ಬಾರೆ

ಆಗಸಕೇಣಿ ಹಾಕುವೆ ನಾನು
ನಿನ್ನಯ ದಾರಿ ಕಾಯುವೆನು
ಚಂದಿರ ಲೋಕಕೆ ಹೋಗುವ ಬಾರೆ
ಚಂದದ ಹುಡುಗಿ ನೀ ಜೋತೆ ಬಾರೆ…!!!

"ಚುನಾವಣೆ-ಚಲಾವಣೆ"


ಏಳೀರಿ ಜನಗಳೆ ಎಚ್ಚೆತ್ತುಕೊಳ್ಳಿ
ವೋಟಿನ ಹಕ್ಕನು ನಿವ್ ತಿಳಿದುಕೊಳ್ಳಿ
ಬಂತದೊ ಚುನಾವಣೆ ಬರುತಿದೆ ಚುನಾವಣೆ
ಮತ್ತೈದು ವರುಷದ ರಾಜ್ಯದ ಚಲಾವಣೆ

ಕೈಯನು ಮುಗಿದು ಕಾಲನು ಹಿಡಿದು
ಚುನಾವಣೆ ಸಮಯದಿ ಪ್ರಜೆಗಳೆ ಪ್ರಭುಗಳು
ಎನ್ನುತ ಹಾಡುತ ಹೊಗಳುತ ಬರುತಿದೆ
ರಾಜಕಾರಣಿಗಳ ಮೆರವಣಿಗೆ

ತಮ್ಮಯ ಲಾಭಕೆ ಜನಗಳ ನಡುವೆ
ಜಾತಿಮತಗಳ ವಿಷ ಬೀಜ ಬಿತ್ತಿ
ಶಾಂತ ನಾಡಲಿ ಅಶಾಂತಿ ಮೂಡಿಸಿ
ಮುಗ್ದ ಜನಗಳ ನಿದ್ರೆಯ ಕೆಡಿಸಿ

ನೋಟನು ನೀಡುತ ವೋಟನು ಕೇಳುತ
ಲೂಟಿಯ ಮಾಡಲು ಸಂಚನು ಮಾಡುತ
ಶ್ವೇತ ವಸ್ತ್ರದಿ ಕೊಳಕು ಮನಸಿನ
ಕಳ್ಳ ಖದೀಮ ನಾಯಕರು

ಏಳಿರಿ ಜನಗಳೆ ಎಚ್ಚೆತ್ತುಕೊಳ್ಳಿ
ವೋಟಿನ ಹಕ್ಕನು ನಿವ್ ತಿಳಿದುಕೊಳ್ಳಿ
ಒಳ್ಳೆಯ ಜನರ ಆರಿಸಿ ಕಳಿಸಿ
ಕಳ್ಳರ ಕೈಯಿಂದ ನಾಡನು ಉಳಿಸಿ….!!
 
$~ರಾಜ್ ಪಾಟೀಲ್~$
ಬಾನ ಚಂದಿರನು
ಅವನೊಬ್ಬ ಸುಂದರನು
ನನ್ನಾ ಸುಂದರಿ ಕನಸಲ್ಲಿ
ದಿನನಿತ್ಯ ಬರುತಿಹನು.......

ಬೆಳ್ಳಿ ರಥವನು ಏರಿ
ಸಪ್ತ ಸಾಗರ ದಾಟಿ
ಕಾಮನಬಿಲ್ಲನ್ನೇ
ಉಡುಗೊರೆಯ ತಂದಿಹನು....

ಏಳು ಮಲ್ಲಿಗೆ ತೂಕದ
ರಾಜಕುಮಾರಿ ನನ್ನವಳು
ಬಾನ ಚಂದಿರನೆ
ಮೋಹಗೊಂಡಿಹನು....

ಬಾನಲ್ಲಿ ನೀನಿರಲು
ಅಪ್ಸರೆಯರು ತುಂಬಿರಲು
ಬೇಡುವೆನು ಚಂದಿರನೆ
ಕಾಡದಿರು ಸುಂದರಿಯ.....

ಕಠಿಣ ಪರಿಶ್ರಮದಿ
ಒಲಿಸಿಕೊಂಡಿಹೆನವಳ
ಮಾಡದಿರು ನೀ ದೂರ
ನಮ್ಮಿಬ್ಬರ ಪ್ರೀತಿಯ....!!!

"ಡ್ರೀಮ್ ಗರ್ಲ -ಸ್ವೀಟ್ ಡ್ರೀಮ್ಸ್ ..!!


ಡ್ರೀಮ್ ಗರ್ಲ ಬಂದಿದ್ಲು
ಸ್ವೀಟ್ ಡ್ರೀಮ್ಸ್ ಲಿ
ಸ್ವೀಟಾಗಿ ಕಾಣ್ತಿದ್ಲು
ನನ್ನ ಡ್ರೀಮ್ಸ್ ಲಿ

ಸ್ವೀಟ್ ಗರ್ಲ ಬಂದ್ ಮೇಲೆ
ನನ್ ಡ್ರೀಮ್ ಸ್ವೀಟಾಯ್ತು
ಸ್ವೀಟ್ ಡ್ರೀಮ್ಸ್ ಬಿದ್ ಮೇಲೆ
ನನ್ ಗರ್ಲ ಸ್ವೀಟಾದ್ಲು

ಸೊಳ್ಳೆ ಕಚ್ಚಿ ಎಚ್ಚರವಾಗಿ
ಸ್ವೀಟ್ ಡ್ರೀಮ್ಸ್ ಹಾಳಾಯ್ತು
ಡ್ರೀಮ್ ಗರ್ಲ ಮಾಯ್ ವಾಗಿ
ಮತ್ತೆ ನಿದ್ದೆ ಶುರುವಾಯ್ತು ....!!!
 
$~ರಾಜ್ ಪಾಟೀಲ್ ~$

"ಚೆಲುವಿ"



ಬಾನಿಂದ ಜಾರಿಬಿದ್ದ
ಚಂದಿರನ ತುಂಡು
ನಾನಿಂದು ಬೆರಗಾದೆ
ನಿನ್ನಂದವ ಕಂಡು

ಸಂಪಿಗೆಯ ಮೊಗವು
ಕಮಲದ ಕಣ್ಣುಗಳು
ಗುಲಾಬಿ ಕೆನ್ನೆ
ತುಟಿಮೇಲೆ ನಗು

ನಗುವಿಗೆ ಮರುಳಾದೆ
ಮನಸೋತು ಸೆರೆಯಾದೆ
ನೋಡಿದ ಮೇಲೆ ನಿನ್ನ
ಪ್ರೀತಿಯಲಿ ನಾ ಬಿದ್ದೆ

ಸುಳಿವನು ನೀಡದೆ
ಹೃದಯವ ಕದ್ದೆ
ನಿದಿರೆಯ ಕದ್ದು
ಕನಸಲಿ ಬಂದೆ

ಒಲವಿನ ಗೆಳತಿಗೆ
ಹೃದಯವೆ ಉಡುಗೊರೆ
ಹೃದಯವ ನೀಡು
ಬದುಕಿಗೆ ಆಸರೆ

$~ರಾಜ್ ಪಾಟೀಲ್ ~$

"ಸ್ಹೇಹದ ಮಡಿಲು..ಪ್ರೀತಿಯ ಒಡಲು"



ಎಂದೋ ಬಿತ್ತಿದ ಸ್ಹೇಹದ ಬೀಜ
ಮೊಳಕೆಯೊಡೆದು ಹೆಮ್ಮರವಾಗಿದೆ
ನಂಬಿಕೆಯನ್ನೊ ಬೇರುಗಳಿಂದ
ಬಾನೇತ್ತರಕೆ ಬೆಳೆದು ನಿಂತಿದೆ

ಮಮತೆಯನ್ನೊ ಜಲಧಾರೆ ಹರಿಸಿ
ಪ್ರೀತಿಯನ್ನುವ ಗೊಬ್ಬರ ಹಾಕಿ
ಸಂಶಯವೆನ್ನೊ ಕೀಟದ ಬಾಧೆ
ಸುತ್ತಲು ಸುಳಿಯದಂತೆ ಮಾಡಿದೆ

ಸವಿಮಾತಿನ ಸುಮಧುರ ಫಲಗಳ
ಸಂತಸವೆನ್ನೊ ಹಸಿರೆಲೆಗಳ ನಡುವೆ
ಸ್ಹೇಹದ ಆಶ್ರಯ ಬಯಸಿ ಬಂದವರ
ನಗುಮೊಗದಿಂದ ಸ್ವಾಗತ ನೀಡಿದೆ

ಮಳೆಯೆ ಇರಲಿ ಬಿಸಿಲೆ ಬರಲಿ
ಕಾಲಚಕ್ರದ ಜೊತೆ ಸಾಗುತಲಿ
ನಮ್ಮಿ ಸ್ಹೇಹದ ಆಲದ ಮರವು
ಶಾಶ್ವತವಾಗಿ ಹಸಿರಾಗಿರಲಿ

$~ರಾಜ್ ಪಾಟೀಲ್~$

" ಪ್ರೀತಿಯ ಸೌಧ "


ನಿನ್ನ ಹೃದಯದ ಅಂಗಳದಿ
ಗುಡಿಸಲೊಂದ ಕಟ್ಟಲೇ ಗೆಳತಿ
ನನ್ಮ ಪ್ರೀತಿಯ ಅರಮನೆ ಕಟ್ಟಲು
ಬೇಕು ನಿನ್ನ ಅನುಮತಿ...

ಪ್ರೀತಿ ಪ್ರೇಮದ ಇಟ್ಟಿಗೆ ಇಟ್ಟು
ಸುತ್ತಲು ಗೊಡೆ ಕಟ್ಟುವೆನು
ಸುಖ-ದುಖವ ಜೊತೆಯಲಿ ಬೆರಸಿ
ಮೇಲೆ ಛಪ್ಪರ ಹಾಕುವೆನು...

ಶಾಂತಿ ಸಹನೆಯ ಗಾಳಿ ಬೆಳಕು
ಸುತ್ತಲು ಹರಡುವಂತೆ ಮಾಡುವೆನು
ನನ್ನಯ ಉಸಿರನೆ ದ್ವಾರವ ಮಾಡಿ
ಕಾವಲು ನಾನು ಕಾಯುವೆನು...

ನಿನ್ನ ಹೃದಯದ ಅಂಗಳದಿ
ಗುಡಿಸಲೊಂದ ಕಟ್ಟಲೆ ಗೆಳತಿ
ಗುಡಿಸಲು ಕಟ್ಟಿ ಒಟ್ಟಿಗೆ ಬದುಕಲು
ನೀಡುವೆಯಾ ನಿನ್ನ ಸಹಮತಿ...!!

@ ರಾಜ್ ಪಾಟಿಲ್ @

" ಪ್ರೀತಿಯ ಕೊರಗು "



ಮನವಿಂದು ಕೊರಗುತಿದೆ
ಅವಳನ್ನೆ ಬಯಸುತಿದೆ
ನೀನಾದರು ಹೇಳು ಗೆಳತಿ
ಒಪ್ಪಿಕೊ ಎಂದು ನನ್ನಯ ಪ್ರೀತಿ

ಮರೆಯಲು ಆಗದೆ
ಮೌನದಿ ಅಳುತಿದೆ
ಹೃದಯದಿ ನೋವಿದು
ಹೆಚ್ಚುತ ಸಾಗಿದೆ

ಮರೆಯದೆ ಕಾಡಿದೆ
ಮನಸಿದು ಮಿಡಿದಿದೆ
ಅವಳದೆ ನೆನಪಲಿ
ಬದುಕಿದು ಕಳೆದಿದೆ

ಪ್ರೀತಿಯೆ ತಿಳಿಯದ
ಮುಗ್ದ ಮನಸದು
ಲೋಕವೆ ಅರಿಯದ
ಮುದ್ದು ಮುಖವದು

ಮಗುವಂತೆ ಮುದ್ದಿಸುವೆ
ಮನಸಾರೆ ಪ್ರೇಮಿಸುವೆ
ಬೆಚ್ಚನೆ ಹೃದಯದಲಿ
ನಾ ಬಚ್ಚಿಟ್ಟುಕೊಳ್ಳುವೆ

ಒಳ್ಳೆಯ ಗೆಳತಿ ನೀ ಜೊತೆಗಿರಲು
ಅವಳದೆ ಚಿಂತೆ ಕಾಡುತಲಿರಲು
ನೀನಾದರು ಹೇಳು ಗೆಳತಿ
ಒಪ್ಪಿಕೊ ಎಂದು ನನ್ನಯ ಪ್ರೀತಿ

$~ ರಾಜ್ ಪಾಟೀಲ್~$

"ಮಾಯಗಾತಿಯ ಮಾಯೆ"



ಯಾವ ಊರಿನಾ ಮಾಯಗಾತಿಯೊ
ಎಂಥ ಮೋಡಿಯ ಮಾಡಿಬಿಟ್ಟೆಯೊ
ಪರವಶನಾದೆನು ನಾ ಕಳದೆಹೋದೆನು
ನನ್ನ ಹೃದಯವ ಕಳೆದುಕೊಂಡೆನು

ಮುಂಗಾರಿನ ಮಿಂಚಂತೆ
ಮಿಂಚಿ ಮರೆಯಾದೆ
ಆ ಮಿಂಚಲಿ ಕಣ್ಸಂಚಲಿ
ಸೋತು ಸೆರೆಯಾದೆ

ಊಟವ ಸೇರದೆ ನಿದಿರೆಯು ಬಾರದೆ
ಕನಸದೆ ಬರುತಿದೆ
ಕನಸಲಿ ನಿನ್ನಯ
ಮಾಯೆಯೆ ತುಂಬಿದೆ

ತಣ್ಣನೆ ಗಾಳಿ ಮೈಯನು ಸೋಕಿದೆ
ಮನವಿದು ಮೆಲ್ಲನೆ ಚಿಂತೆಗೆ ನೂಕಿದೆ
ನನ್ನಿ ನಯನಕೆ ಕುತೂಹಲ ಹೆಚ್ಚಿದೆ
ಮಾಯಗಾತಿಯ ಹುಡುಕುತ ಹೊರಟಿದೆ

ಯಾವ ಊರಿನಾ ಮಾಯಗಾತಿಯೊ
ಎಂಥ ಮೋಡಿಯ ಮಾಡಿಬಿಟ್ಟೆಯೊ
ಪರವಶನಾದೆನು ನಾ ಕಳೆದು ಹೋದೆನು
ನನ್ನನೆ ನಾ ಮರೆತು ಬಿಟ್ಟೆನು..!!

$~ರಾಜ್ ಪಾಟೀಲ್~$

"ಕನಸು ನೆನಪು"



ಕಣ್ಣಲ್ಲಿ ನೂರಾರು ಕನಸು
ಮನದಲ್ಲಿ ಬರಿ ನಿನ್ನ ನೆನಪು
ಕನಸು ಹಿತವಾಗಿದೆ
ನೆನಪು ಕನಸಾಗಿದೆ

ನಿನ್ನ ಮುಗುಳುನಗೆ
ಹಾರುವ ಮುಂಗುರುಳು
ಕಾಡುತಿದೆ ನನ್ನ
ಬೆಂಬಿಡದೆ ಹಗಲಿರುಳು

ಕಣ್ಣುಗಳ ಆ ಸಲುಗೆ
ಹೃದಯಗಳ ಬೆಸುಗೆ
ಪ್ರೀತಿಯ ಖುಷಿ ಪ್ರೇಮದ ಗುಂಗಲ್ಲಿ
ಮನದ ಮೌನದಿ ಮೆರವಣಿಗೆ

ಆದರೂ ಕೊನೆಗೆ ತೀರದ ಬಯಕೆ
ಮೌನವ ಸಹಿಸದೆ ಮನಸಿನ ಬೇಡಿಕೆ
ಸವಿ ನುಡಿ ಕೇಳಳು ನೀಡಿದೆ ಕೋರಿಕೆ
ಮಾತಲ್ಲೆ ನೀಡು ಪ್ರೇಮದ ಕಾಣಿಕೆ

ಬರಿ ನಿನ್ನ ನೆನಪು
ಬರಿ ನಿನ್ನ ಕನಸು
ನೆನಪಿಗೆ ಕನಸು ಆಧಾರ
ಕನಸಿನ ನೆನಪು ಸುಮಧುರ....!!!!!

$~ರಾಜ್ ಪಾಟೀಲ್~$

ಮೌನ ಹೃದಯ

ಕಂಡಂತ ಕನಸೊಂದು
ಮಂಜಂತೆ ಕರಗ್ಹೊಯ್ತು
ನನಸಾಗದ ಕನಸೆಂದು
ಈ ಮನಸು ಮರೆತ್ಹೊಯ್ತು

ಮುಗ್ದ ಮನಸು ಪ್ರೀತಿಗಾಗಿ
ಕರುಣೆ ಇರದ ಹುಡುಗಿಗಾಗಿ
ಸಿಗದ ಪ್ರೀತಿ ಪ್ರೇಮಕ್ಕಾಗಿ
ಬಾಳಪೂತಿ೵ ಕಾದಿದೆ

ಪ್ರೀತಿಯಲ್ಲಿ ಸುಖಕ್ಕಿಂತ
ಬರಿ ನೋವು ತುಂಬಿದೆ
ಪ್ರೀತಿ ಅಮರ ತ್ಯಾಗ ಮಧುರ
ಹೃದಯ ನಂಬಿ ನೊಂದಿದೆ

ಕನಸೊಂದು ಕರಗ್ಹೊಯ್ತು
ಅವಳಿಂದ ದೂರಾಯ್ತು
ಸಿಗದ ಪ್ರೀತಿ ನೆನೆದು ನೆನೆದು
ಮೌನಕ್ಕೆ ಶರಣಾಯ್ತು...!!!

"ಕನಸೆಂಬ ಮಾಯೆ"


ಕನಸುಗಳು ಕನಸುಗಳು
ಚಿತ್ರ ವಿಚಿತ್ರ ಕನಸುಗಳು

ಮೊಗ್ಗಿನ ಮನಸುಗಳ
ಮುದ್ದಿನ ಕನಸುಗಳು

ಯೌವನದ ಯುವತಿಯ
ಮದುವೆಯ ಕನಸುಗಳು

ಹರೆಯದ ಹುಡುಗನ
ಹಸಿ ಬಿಸಿ ಕನಸುಗಳು

ಮಿಡಿವ ಹೃದಯಗಳ
ಬಣ್ಣದ ಕನಸುಗಳು

ನೊಂದ ಹೃದಯಗಳ
ಮರೆಯದ ನೆನಪುಗಳು

ಕನಸುಗಳು ಕನಸುಗಳು
ಹುಚ್ಚುಚ್ಚು ಕನಸುಗಳು

ನನ್ನೆಲ್ಲ ಕನಸುಗಳು
ಬರಿ ಅವಳ ಕಲ್ಪನೆಗಳು..!!

$~ರಾಜ್ ಪಾಟೀಲ್~$

ಓ ಪ್ರೀತಿ

ಓ ಪ್ರೀತಿ ಓ ಪ್ರೀತಿ
ಹಿಂಗ್ಯಾಕೇ ಕಾಡುತಿ
ಅಥ೯ವಾಗದ ರೀತಿ
ಪ್ರಾಣವ ಹಿಂಡುತಿ....

ಮಿಲನವಾದರೆ ಪ್ರೀತಿ
ಮಧುರ ಅನುಭೂತಿ
ಮರೆಯಲಾಗದ ಪ್ರೀತಿ
ಬರಿ ನೋವು ಜಾಸ್ತಿ....

ಹುಚ್ಚು ಮನಸಿದು
ಹೆಚ್ಚೆನು ಅರಿಯದು
ಪ್ರೀತಿಯ ಕಾಯುತ್ತ
ಜನುಮವೆ ಕಳೆಯುವುದು....

ನಂಬದಿರು ಪ್ರೀತಿಯ
ಓ ನನ್ನ ಗೆಳೆಯ
ಕೊರಗುವುದು ಪ್ರತಿ ಸಮಯ
ವಿರಹದಿ ಹೃದಯ....

ಓ ಪ್ರೀತಿ ಓ ಪ್ರೀತಿ
ಹಿಂಗ್ಯಾಕೇ ಕಾಡುತಿ
ಅಥ೯ವಾಗದ ರೀತಿ
ಪ್ರಾಣವ ಹಿಂಡುತಿ....

$~ ರಾಜ್ ಪಾಟೀಲ್~$
ಅಥ೯ವಿಲ್ಲದ ಪ್ರಶ್ನೆಗೆ
ಉತ್ತರವ ಹುಡುಕುತ್ತ
ಜೀವನವೆ ಒಂದು
ಪ್ರಶ್ನೆಯಾಗಿ ಕಾಡಿದೆ.....

ಹುಡುಗಿಯ ಮನಸಲ್ಲಿ
ಪ್ರೀತಿಯನು ಹುಡುಕುತ್ತ
ನೊಂದಂಥ ಜೀವವಿಂದು
ಒಂಟಿತನವ ಬಯಸಿದೆ...

ಪ್ರಿತಿ ಪ್ರೇಮ ಮೋಹದ
ಬಲೆಯೊಳಗೆ ತಾ ಸಿಲುಕಿ
ಹೊರ ಬರುವ ದಾರಿ ಇಂದು
ಯಾಕೊ ಮರೆತು ಹೋಗಿದೆ...

ಅವಳ ಪ್ರೀತಿ ಬಯಸಿ ಇನ್ನು
ಪ್ರೀತಿ ಅರಿತು ಬರುವಳೆಂದು
ಜೀವವೊಂದು ಕಾದಿದೆ
ಉಸಿರು ಹಿಡಿದು ನಿಂತಿದೆ....!!!

"ಲೈಫ್ ಲೈನ್..."



ಬ್ರಹ್ಮ ಬರೆದ ಹಣೆಯ ಬರಹ
ನನ್ನ ಬಾಳಲಿ ನೂರು ತರಹ
ಕರುಣೆಯ ಪುಟಗಳ ಖಾಲಿ ಇಟ್ಟ
ಸಂಕಷ್ಟಗಳ ಉಡುಗೊರೆ ಕೊಟ್ಟ

ಪ್ರೀತಿಯ ಬಳ್ಳಿ ಚಿಗುರಲೆ ಇಲ್ಲ
ಐಶ್ವಯೃ ಲಕ್ಷ್ಮಿ ಒಲಿಯಲು ಇಲ್ಲ
ವಿದ್ಯೆಗೆ ತಕ್ಕ ಉದ್ಯೋಗ ಸಿಗದೆ
ಹೊಂದಾಣಿಕೆಯೆ ಜೀವನವಾಗಿದೆ

ಹೊಸ ಹೊಸ ಕನಸು ಕಾಣಲು ಭಯವು
ವಿಫಲತೆ ನೋವು ಸಹಿಸದಿ ಮನವು
ಯಾಕೋ ಬ್ರಹ್ಮ ಮೋಸವ ಮಾಡಿದೆ
ಕರುಣೆಯ ತೋರದೆ ಸುಮ್ಮನೆ ಕಾಡಿದೆ

ಬ್ರಹ್ಮ ಬರೆದ ಹಣೆಯ ಬರಹ
ನನ್ನ ಬಾಳಲಿ ನೂರು ತರಹ
ನೀಡುವುದಾದರೆ ಒಂದು ವರವ
ಅಳಿಸುವೆ ಬ್ರಹ್ಮ ನಿನ್ನಯ ಬರಹ...!!!

$~ ರಾಜ್ ಪಾಟೀಲ್~$ —

ಗಾಂಧಿತಾತ

ಮತ್ತೆ ಹುಟ್ಟಿ ಬಾ ಓ ಗಾಂಧಿತಾತ
ನೀ ಬಿಟ್ಟು ಹೊದ ಈ ದೇಶ ನೊಡು
ಕಂಡಿದ್ದಿ ರಾಮರಾಜ್ಯದ ಕನಸು
ಬರಿ ರಾವಣರೆ ತುಂಬಿಹರು ಸುತ್ತೆಲ್ಲ...

ನೀ ತೊರಿದ ಅಹಿಂಸೆಯ ಹಾದಿಯಲ್ಲಿ
ಬರಿ ಹಿಂಸೆಗಳನೆ ಮಾಡುತಿಹರು
ಶಾಂತಿ ಮಂತ್ರವ ಮರೆತುಬಿಟ್ಟು
ಅಶಾಂತತೆಯ ಹುಟ್ಟು ಹಾಕಿ...

ಸ್ವಾಥ೯ ಸಾಧನೆಗೆ ದೇಶವನೆ ಬಲಿಕೊಟ್ಟು
ಮುಗ್ದ ಜನಗಳ ನಡುವೆ
ಜಾತಿ ಮತಗಳ ವಿಷ ಬೀಜ ಬಿತ್ತಿ
ನೆಮ್ಮದಿಯ ಜೀವನಕೆ ಕೊಳ್ಳಿಯನು ಇಟ್ಟಿಹರು...

ಹೆಣ್ಣು ಹೊನ್ನು ಮಣ್ಣಿಗಿಲ್ಲಿ
ಭದ್ರತೆಯು ಕನಸಂತೆ
ರಕ್ಷಕರೆ ಭಕ್ಷಕರಾಗಿ
ರಕ್ಷಣೆಯ ಮರೆತಿಹರು...

ಕೆಟ್ಟದನ್ನು ಕೇಳದಂತೆ,ನೋಡದಂತೆ
ಕೆಟ್ಟ ಮಾತು ಆಡದಂತೆ
ಹೇಳಿಹೊದೆ ಅಂದು ನೀನು
ಆದರಿಲ್ಲಿ ಕೆಟ್ಟತನವೆ ಸವ೯ವ್ಯಾಪಿ...

ಮತ್ತೆ ಹುಟ್ಟಿ ಬಾ ಗಾಂಧಿ ತಾತ
ನೀ ಬಿಟ್ಟು ಹೊದ ಈ ದೇಶದಲ್ಲಿ
ಕಾಣದಿರು ಮತ್ತೊಮ್ನೆ ರಾಮರಾಜ್ಯದ ಕನಸು
ಕೆಟ್ಟ ಮನಸುಗಳ ನಡುವೆ ನನಸಾಗದು ಕನಸು.!

@ ರಾಜ್ ಪಾಟೀಲ್ @
ಹೇಗೆ ಮರೆಯಲಿ ನಿನ್ಮ ನೆನಪು
ಮೊದಲ ಬಾರಿ ನಿನ್ಮ ನೊಡಿದ ನೆನಪು
ಆಡಿದ ಸವಿ ಮಾತಿನ ನೆನಪು
ಏಕಾಂತದಿ ಮೂಡಿದ ಮೌನದ ನೆನಪು...

ಹಾರುವ ಮುಂಗುರುಳ ಮೋಹಕ ನೆನಪು
ಸೆಳೆವ ಮುಗುಳು ನಗೆಯ ಮಾದಕ ನೆನಪು
ಕನಸಲು ಕೂಡಾ ಕಾಡುವ ನೆನಪು
ನನಸಾಗದೆ ಹೋದ ಕನಸಿನ ನೆನಪು...

ತಿರುಗಾಡಿದ ಹೆಜ್ಜೆ ಗುರುತಿನ ನೆನಪು
ಕಾಡುವ ಕಾಲ್ಗೆಜ್ಜೆಯ ಸದ್ದಿನ ನೆನಪು
ನೀ ಕೇಳಿದ ಉಡುಗೊರೆಯ ನೆನಪು
ನಿನಗಾಗಿ ಕೊಟ್ಟ ಗುಲಾಬಿ ನೆನಪು...

ಜೊತೆ ಕಳೆದ ಕ್ಷಣಗಳ ಸಿಹಿ ಸಿಹಿ ನೆನಪು
ಮುನಿಸಿಕೊಂಡ ಆ ದಿನಗಳ ನೆನಪು
ಸ್ನೇಹದಿ ಮೂಡಿದ ಪ್ರೀತಿಯ ನೆನಪು
ನಿನೊಪ್ಪದೆ ನೀಡಿದ ನೋವಿನ ನೆನಪು...

ಹೇಳದೆ ಹೊದ ಆ ಕಹಿ ನೆನಪು
ಹೃದಯಕೆ ಮಾಡಿದ ಗಾಯದ ನೆನಪು
ಮರೆತಾಗ ನಾ ಉಸಿರಾಡುವುದನ್ನು
ಆಗ ಮರೆಯುವೆ ನಿನ್ನಯ ನೆನಪನ್ನು..!!

@ ರಾಜ್ ಪಾಟೀಲ್ @

ಮೋಹ

ಯಾವ ಮಾಯೆಯು ಬೀಸಿದ ಬಲೆಯೊ
ಬಿಡದೆ ಕಾಡುವ ಮೋಹದ ಸೆಲೆಯೊ
ಸಿಲುಕದೆ ಉಳಿದ ಮನಸಾವುದಿದೆ
ನರಳದೆ ಉಳಿದ ದಿನ ಯಾವುದಿದೆ..

ಹೆಣ್ಣಿಗೆ ಕಾಡುವ ಚಿನ್ನದ ಮೋಹ
ಗಂಡಿಗೆ ಹೆಣ್ಣು ಹೊನ್ನಿನ ಮೋಹ
ಮಣ್ಣಿನ ಮೇಲೂ ಹೆಚ್ಚಿದ ಮೋಹ
ಉಸಿರಿರೊವರೆಗೂ ಬಡಿದಾಡುವ ಜೀವ..

ಮೋಹದ ಪರಿಧಿಯ ಮಾಂತ್ರಿಕ ಪಾಶ
ಮೋಹದ ಸೆಳೆತಕೆ ಮನಸದೊ ಪರವಶ
ವಿಧಿಯಾಟದಲಿ ವಿಧ ವಿಧ ವೇಶ
ಸಿಲುಕಿದ ಮನಸಿನ ನೆಮ್ಮದಿ ನಾಶ..

ಬಿಟ್ಟೆನೆಂದರು ಬಿಡದಿ ಮೋಹ
ಬಿಟ್ಟು ಬಿಡದೆ ಕಾಡುವ ಮೋಹ
ಚಿಂತೆಯೊಳಗಡೆ ಸುಡುವ ದೇಹ
ಕೊನೆಯವರೆಗೂ ತೀರದ ದಾಹ..!!

~ * ರಾಜ್ ಪಾಟೀಲ್ ~ *
ಮೊಗ್ಗೊಂದು ಕುಡಿಯೊಡೆದು
ಹೂವಾಗಿ ಅರಳಿದೆ
ಪರಿಮಳವ ಬೀರುತ್ತ
ದುಂಬಿಗಳ ಸೆಳೆದಿದೆ...


ಪ್ರೀತಿಯ ನಿವೇದನೆಗೆ
ಪ್ರೇಮ ಪೂವ೯ಕವಾಗಿ
ಅಂತಿಮ ನಮನಕೆ
ಶಾಂತಿ ಸೂಚಕವಾಗಿ...

ಸಂಭ್ರಮದ ಘಳಿಗೆಗಳ
ಶುಭ ಸೂಚಕವಾಗಿ
ಸ್ನೇಹದ ಆರಂಭಕೆ
ನಂಬಿಕೆಯ ಗುರುತಾಗಿ...

ಪ್ರೀತಿ ಸೂಚಕ ಕೆಂಪು ಗುಲಾಬಿ
ಶಾಂತಿ ಸೂಚಕ ಬಿಳಿ ಗುಲಾಬಿ
ಸ್ನೇಹದ ಪ್ರತಿಕ ಹಳದಿ ಗುಲಾಬಿ
ವಿಧ ವಿಧ ವಣ೯ದಿ ವಿವಿಧ ಗುಲಾಬಿ...

ಓ ಗುಲಾಬಿಯೆ ನಿನೇಷ್ಟು ಚೆನ್ನ
ಓ ಗುಲಾಬಿಯೆ ನಿನೇಷ್ಟು ಧನ್ಯ...!!!


$~ರಾಜ್ ಪಾಟೀಲ್ ~`$
ಕಾದಿರುವೆ ನಿನಗಾಗಿ
ಪ್ರೀತಿಯ ಕರೆಗಾಗಿ
ಕಾಡದಿರು ನೀನಿನ್ನು
ಪ್ರೀತಿಸುವ ಮನಸನ್ನು...


ಬಾ ಬೇಗ ಓ ಇನಿಯಾ
ಕಾದಿದೆ ಈ ಹೃದಯಾ
ನೀಡು ನೀ ಗೆಳೆಯಾ
ಮಧುರ ಅಪ್ಪುಗೆಯ...

ಕೂಗುತಿದೆ ಕೊರಗುತಿದೆ
ದಾರಿಯ ಕಾಯುತಿದೆ
ಬಾ ಬೇಗ ಓ ಗೆಳೆಯಾ
ಕೇಳದೆ ಪ್ರೀತಿಯ ಕರೆಯಾ...!!!
ಭಾವನೆಗಳೆ ಹೀಗೆ
ಅಥ೯ವಾಗದ ಹಾಗೆ
ಕನಸುಗಳೆ ಹೀಗೆ
ಮರಯಾಗದ ನೆನಪಿನ ಹಾಗೆ...

ಬಣ್ಣದ ಲೋಕದಲಿ
ಭಾವನೆಗಳ ಜೊತೆಯಲಿ
ಕನಸುಗಳ ನಡುವೆ
ಬದುಕುವ ಭಾವ ಜೀವಿ ನಾವಿಲ್ಲಿ...

ಮರೆಯಲೆತ್ನಿಸಿದಷ್ಟು ಕಹಿ ನೆನಪುಗಳು
ಮರುಕಳಿಸಿ ಕೊಲ್ಲುವವು
ನೊಂದಿರುವ ಮನಸುಗಳು
ನೋವಲ್ಲಿ ಕೊರಗುವವು...

ಬದುಕಿನ ಕಹಿ ಸತ್ಯ
ಪ್ರೀತಿ ಪ್ರೇಮವು ಮಿಥ್ಯ
ಅರಿಯದ ಈ ಹೃದಯ
ಸಿಲುಕುವುದು ಮೋಹದ ಬಲೆಯ...

ಭಾವನೆಗಳೆ ಹೀಗೆ
ಅಥ೯ವಾಗದ ಹಾಗೆ
ಜೀವನವೆ ಹೀಗೆ
ಭಾವನೆಗಳ ಹಾಗೆ...

$~ ರಾಜ್ ಪಾಟೀಲ್ ~$

" ಈ ಸಾವು ನ್ಯಾಯವೆ?"


ಅಮ್ಮ ಏಕೆ ಜನ್ಮ ನೀಡದೆ
ನನ್ನ ನೀನು ದೂರ ಮಾಡಿದೆ
ಅಪ್ಪ ನೀನು ಕರುಣೆ ತೋರದೆ
ಕರುಳ ಬಳ್ಳಿ ಕಡಿದು ಹಾಕಿದೆ...

ಆರುತಿಗೊಬ್ಬಳು ಕಿರ್ತಿಗೊಬ್ಬ
ಅನ್ನೊ ಮಾತು ಸುಳ್ಳು ಮಾಡಿ
ಕಿರ್ತಿ ತರಲು ಮಗನ ಹೆತ್ತು
ಹಿಸುಕಿದಿರಿ ನನ್ನ ಕತ್ತು...

ಅಮ್ಮನ ಅಸಹಾಯಕತೆಗೆ
ಅಪ್ಪನ ಬಲವಂತಕೆ
ಕೌರ್ಯಕ್ಕೆ ಬಲಿಯಾದೆ
ನಾನಿಂದು ಮರೆಯಾದೆ...

ತಾಯಿಯಾಗಿ ಹೆಣ್ಣು ಬೇಕು
ಪತ್ನಿಯಾಗಿ ಹೆಣ್ನು ಬೇಕು
ಅಕ್ಕ-ತಂಗಿಯರು ಹೆಣ್ನು
ಹೆಣ್ಣು ಮಗಳು ಮಾತ್ರ ಬೇಡ.?

ಹೆಣ್ಣು-ಗಂಡು ಎಂಬ ಭೇದ
ಏಕೆ ಎಂದು ಪುಟ್ಟ ಕಂದ
ಪ್ರಶ್ನೆಯೊಂದ ಕೇಳಿದೆ
ಉತ್ತರಕ್ಕೆ ಕಾದಿದೆ...!!

$~ರಾಜ್ ಪಾಟೀಲ್`$

" ಶಾಲೆಯ ದಿನಗಳು"


ಸುಂದರ ಕನಸುಗಳು
ಸುಮಧುರ ನೆನಪುಗಳು
ಮರೆಯಲಾಗದ ಕ್ಷಣಗಳು
ಶಾಲೆಯ ಆ ದಿನಗಳು

ಯೂನಿಫಾರ್ಮ ಹಾಕ್ಕೊಂಡು
ಲಂಚ್ ಬಾಕ್ಸು ಹಿಡ್ಕೊಂಡು
ಸ್ನೇಹಿತರ ಜೊತೆಗೂಡಿ
ಶಾಲೆಗೆ ಹೋಗಲು ರೆಡಿ

ಸಾಲಲ್ಲಿ ನಿಂತು ಪ್ರಾರ್ಥನೆ ಮಾಡಿ
ಸಾಲನ್ನು ತಪ್ಪಿಸಿ ಕ್ಲಾಸೊಳಗೆ ಓಡಿ
ಬಂದಾಗ ಗುರುಗಳು ವಂದನೆ ಮಾಡಿ
ಕೇಳುವ ಪ್ರಶ್ನೆಗಳಿಗೆ ಉತ್ತರವ ನೀಡಿ

ಆಟದ ಸಮಯದಿ ಆಟವ ಆಡಿ
ಆಟದ ಜೋತೆಗೆ ತುಸು ಜಗಳವಾಡಿ
ಎಲ್ಲರನು ಕ್ಷಮಿಸುತ್ತ ಜೊತೆ ಸೇರಿ ಎಲ್ಲರು
ಮನೆ ಕಡೆಗೆ ಸಾಗುತ್ತ ನಕ್ಕು ನಲಿಯುತ್ತ

ಮರೆಯಲು ಆಗದ
ಮರಳಿಯೂ ಬಾರದ
ಸುಮಧುರ ನೆನಪುಗಳು
ಶಾಲೆಯ ಆ ದಿನಗಳು...!!!

ನಿನ್ನ ನೋಡುವ ಹಂಬಲ
ಈ ಹುಂಬ ಮನಸ್ಸಿಗೆ
ಜೊತೆ ಮಾತನಾಡುವ ಬಯಕೆ
ನನ್ನಿ ಮೌನ ಹೃದಯಕೆ....

ಮೊದಲ ಭೇಟಿಯ ಕುಡಿನೋಟದಲಿ
ನಯನಗಳ ಮೌನ ಸಂಭಾಷಣೆ
ಮನಸುಗಳ ಸವಿ ಮಿಲನದಲಿ
ಹೃದಯಗಳ ಸಂಭ್ರಮಾಚರಣೆ...

ನಿನ್ನ ನಗುವಿಗೆ ಮನ ಸೋತಿರುವೆ
ಮನಸಲಿ ನಿನೇ ನೆಲೆಸಿರುವೆ
ಬದುಕಲಿ ನಿನ್ನನೆ ಬಯಸಿರುವೆ
ಭರವಸೆಯಲ್ಲೆ ಬದುಕಿರುವೆ...

ನಿತ್ಯವು ಪ್ರೀತಿಯ ಕನವರಿಕೆ
ಹೃದಯದಿ ಏನೊ ಚಡಪಡಿಕೆ
ಒಪ್ಪಿಕೊ ಗೆಳೆಯನೆ ಕೋರಿಕೆ
ಕಾದಿಹೆ ನಿನ್ನಯ ಉತ್ತರಕೆ...!!!

$~ ರಾಜ್ ಪಾಟೀಲ್ ~$

ಜಾರದಿರು ಕಂಬನಿಯೆ
ಕೊಮಲೆಯ ಕೆನ್ನೆಯಿಂದ
ಬಾಡದಿರಿ ಕನಸುಗಳೆ
ನಲ್ಲೆಯ ಕಂಗಳಿಂದ.....

ಮಾಸದಿರಿ ನೆನಪುಗಳೆ
ನನ್ನವಳ ಹೃದಯದಿಂದ
ದೂರವಿರು ಓ ನೊವೆ
ನೀ ಅವಳ ನೆರಳಿನಿಂದ...

ಕಷ್ಟಗಳೆ ಸುಳಿಯದಿರಿ
ಸುಖವಾಗಿ ಅವಳಿರಲು
ಬೀಳದಿರಿ ದುಸ್ವಪ್ನಗಳೆ
ಸವಿನಿದ್ದೆ ಮಾಡಿರಲು...

ಚಿಂತೆಗಳೆ ಬಾರದಿರಿ
ಚೆಲುವೆಯ ಕಾಡದಿರಿ
ನಗುವೆ ನೀ ಜೊತೆಗಿರು
ಸಂಗಡವ ತೊರೆಯದಿರು...

ಜಾರದಿರು ಕಂಬನಿಯೆ
ದೂರದಿರು ನನ್ನನ್ನು
ಕೊರಗದಿರು ಓ ಮನವೆ
ಮರೆತುಬಿಡು ಎಲ್ಲವನು...!!!

" ನನಗಾಗದ ಕನಸುಗಳ ಮಾರಾಟ"

ಕನಸು ಮಾರುವುದಿದೆ ಕನಸು
ಬಂಜೆ ಕಂಡಂತ ಕಂದನ ಕನಸು
ಹುಚ್ಚು ಪ್ರೇಮಿಯ ಪ್ರೀತಿಯ ಕನಸು
ಮುದಿ ಮರವು ತಾ ಕಂಡ ಚಿಗುರೊಡೆವ ಕನಸು...

ಕನಸು ಮಾರುವುದಿದೆ ಕನಸು
ಬಡವನು ಕಂಡ ಅರಮನೆಯ ಕನಸು
ರೋಗಿಯು ಬಯಸಿದ ಬದುಕುವ ಕನಸು
ಮಧ್ಯಮ ವರ್ಗಿಯ ವಿಲಾಸಿ ಕನಸು...

ಕನಸು ಮಾರುವುದಿದೆ ಕನಸು
ಅಂಧ ವ್ಯಕ್ತಿಯ ಜಗನೋಡುವ ಕನಸು
ಬಡಮಕ್ಕಳ ವಿದ್ಯೆಯ ಕನಸು
ಸಾವಿರದ ಸಂಬಳದಿ ಕೋಟಿಯ ಕನಸು...

ಆಸೆಗಳೆ ಕನಸುಗಳಾಗಿ
ನನಸಾಗದೆ ನೆನಪುಗಳಾಗಿ
ಮರೆಯಾಗದೆ ಕುರುಹುಗಳಾಗಿ
ಕೊನೆವರೆಗೂ ಕಾಡುವವು....

ಕನಸು ಮಾರುವುದಿದೆ ಕನಸು
ಮನಸು ಮರೆಯದ ಕನಸು
ನನಸಾಗದ ಕನಸುಗಳ ಮಾರಾಟ
ಮತ್ತೆ ಹೊಸ ಕನಸುಗಳ ಜೊತೆ ಹೋರಾಟ...!!!

$~ ರಾಜ್ ಪಾಟೀಲ್ ~$

" ಯುಗಾದಿ ಹಬ್ಬದ ಶುಭಾಶಯಗಳು"

ಮೂಢಣದಿ ಹೊಸ ರವಿಯು
ತಾ ಜನಿಸಿ ಬಂದ
ಮತ್ತೊಮ್ಮೆ ಯುಗಾದಿ ಸಂಭ್ರಮವ
ನಮಗಾಗಿ ತಂದ...

ಹೊಸ ಸಂವತ್ಸರದ ಜನನ
ನವ ವಸಂತದ ಆಗಮನ
ಎಲ್ಲೆಲ್ಲೂ ಹಸಿರಿನ ತೋರಣ
ಮನೆ-ಮನೆಯಲ್ಲು ಬೇವು ಬೆಲ್ಲದ ಮಿಶ್ರಣ...

ಕಹಿ ನೆನಪು ಮರೆಯಾಗಿ
ಹೊಸ ಕನಸು ಮೂಡಲಿ
ಕಷ್ಟಗಳು ತಾವ್ ಕರಗಿ
ಸುಖದ ಹೊಳೆ ಹರಿಯಲಿ...

ಯಾಂತ್ರಿಕತೆಯ ಬದುಕಲ್ಲಿ
ಬೆಲೆ ಏರಿಕೆ ಭರದಲ್ಲಿ
ಕುಗ್ಗದಿರಲಿ ಸಂಭ್ರಮ
ಕರಗದಿರಲಿ ಸಂತಸ...

ಈ ಭೂಮಿ ಬಾನು ಕೊನೆಯಾಗೊವರೆಗೂ
ಆ ಸೂರ್ಯ ಚಂದ್ರ ಮರೆಯಾಗೊವರೆಗೂ
ಸುಖ ಶಾಂತಿ ನೆಮ್ಮದಿ ಸದಾ ನಿಮಗಿರಲಿ
ಯುಗಾಗಿದ ಸಂಭ್ರಮ ನಿರಂತರವಿರಲಿ...!!!


$~ ರಾಜ್ ಪಾಟೀಲ್ ~$
ನನ್ನ ಮನಸಿನ ರಥ ಬೀದಿಯಲಿ
ನಿನ್ನದೆ ನೆನಪಿನ ಮೆರವಣಿಗೆ
ಸುಮಧುರ ಸ್ನೇಹದ ಅನುಭೂತಿಯಲಿ
ಪ್ರೀತಿಯ ಬಂಧದ ಬೆಳವಣಿಗೆ...

ಹುಣ್ಣಿಮೆ ರಾತ್ರಿಯ ಬೆಳಕಿನಲಿ
ಮಿನುಗುವ ತಾರಾ ಲೋಕದಲಿ
ಬಾನ ಚಂದ್ರನ ಪ್ರತಿ ಬಿಂಬದಲೂ
ಸುಂದರಿ ನಿನ್ನದೆ ಕನವರಿಕೆ...

ಕಪ್ಪು ಬಿಳುಪಿನ ನಯನದಲಿ
ಬಣ್ಣ ಬಣ್ಣದ ಕನಸುಗಳು
ಭಾವುಕತೆ ತುಂಬಿದ ಹೃದಯದಲಿ
ನಿನ್ನ ಪ್ರೀತಿಯ ಕುರುಹುಗಳು...

ಬದುಕಿನ ಹಾವು-ಏಣಿ ಆಟದಲಿ
ಏಳು ಬೀಳಿನ ಪರಿಪಾಠದಲಿ
ಗೆಳತಿಯೆ ಗೆಲುವು ನಿನಗಿರಲಿ
ಕನಸಲೂ ನೋವು ಬರದಿರಲಿ...

ನನ್ನಯ ಮನಸಿನ ರಥ ಬೀದಿಯಲಿ
ನಿನ್ನದೆ ನೆನಪಿನ ಮೆರವಣಿಗೆ
ದೇವರ ಅಧ್ಭುತ ಸೃಷ್ಠಿಯು ನೀ
ನಿನ್ನಯ ನೆನಪಲೆ ಈ ಬರವಣಿಗೆ...!!!

$~ರಾಜ್ ಪಾಟೀಲ್~$
ಕೊಟ್ಟು ಬಿಡು ಮರಳಿ
ನಾ ಕೊಟ್ಟ ಹೃದಯ
ನಿನಗಾಗಿ ಕಳೆದ
ಆ ಅಮೂಲ್ಯ ಸಮಯ...

ನಿನ್ನೊಂದಿಗೆ ನಾನಿದ್ದೆ
ಹಗಲಿರುಳು ಕಾದಿದ್ದೆ
ಪ್ರತಿಕ್ಷಣವು ಜೊತೆಗಿರುವ
ಕನಸೊಂದ ಕಂಡಿದ್ದೆ...

ಪ್ರೀತಿಯ ಬಂಧನದಿ
ಸೆರೆಯಾಗಿ ಹೋಗಿದ್ದೆ
ಹೊಸದೊಂದು ಬಂಧಕ್ಕೆ
ಮುನ್ನುಡಿಯ ಬರೆದಿದ್ದೆ...

ಕೊನೆವರೆಗೂ ನನ್ನ
ಅರಿಯದೆ ಹೋದೆ
ಕಾರಣವ ತಿಳಿಸದೆ
ನೀ ತೊರೆದು ಹೋದೆ...

ಕೊಟ್ಟು ಬಿಡು ಗೆಳತಿ
ನಾ ಕೊಟ್ಟ ಹೃದಯ
ತೋರು ನೀ ಕರುಣೆ
ಕೊಟ್ಟು ಬಿಡು ಹೃದಯ..>3

"ತಾಯಿ ದೇವರು"


ಏನೆಂದು ಬರೆಯಲಿ ತಾಯೆ
ಏನಂತ ಹೊಗಳಲಿ ಹೇಳು
ಅಕ್ಷರಗಳ ಅಂಗಳದಿ ಪದಪುಂಜ ಸಿಗುತಿಲ್ಲ
ಬಣ್ಣಿಸಲು ನಿನ್ನ ಈ ಜನುಮ ಸಾಲಲ್ಲ....

ನವಮಾಸ ನಗುನಗುತ ನೋವನ್ನು ಸಹಿಸಿ
ಹೊಸದೊಂದು ಉಸಿರನ್ನು ಈ ಧರೆಗೆ ಕಳಿಸಿ
ಪಾಲನೆ-ಪೊಷಣೆಯಲ್ಲಿ ಇಡಿ ಜೀವ ಕಳೆದು
ದೇವರ ಪ್ರತಿರೂಪ ತಾಯಿ ನಿನಾದೆ....

ಹಗಲಿರುಳು ದುಡಿಯುತ್ತ ಹಸಿವನ್ನು ಮರೆಯುತ್ತ
ಮಕ್ಕಳ ಬದುಕಿಗೆ ಸರಿದಾರಿ ತೋರುತ್ತ
ಕಷ್ಟಗಳ ಅನುಭವಿಸಿ ಸುಖವನ್ನೆ ನೀಡಿ
ವಿದ್ಯೆಯನು ಕಲಿಸುತ್ತ ಮೊದಲ ಗುರುವಾದೆ....

ಕಾಣದ ದೇವರ ನೆನೆಯುವ ನೀವು
ಕಾಣುವ ದೇವರ ಮರೆಯದಿರಿ
ಜನ್ಮವ ನೀಡಿ ಬದುಕನು ಕೊಟ್ಟ
ತಾಯಿ ದೇವರ ತೊರೆಯದಿರಿ....

ಏನೆಂದು ಬರೆಯಲಿ ತಾಯೆ
ಏನಂತ ಹೊಗಳಲಿ ನಿನ್ನ
ಜನುಮ-ಜನುಮಗಳೆ ಜನಿಸಿ ಬಂದರು
ತಾಯಿ ಋಣವದು ತೀರಲ್ಲ....!!!!

$~ ರಾಜ್ ಪಾಟೀಲ್ ~$
ಕಲ್ಲು ಹೃದಯ ಕರಗದಾಯಿತೆ
ಕರುಳ ಕೂಗು ಕೇಳದಾಯಿತೆ
ತಾಯಿ ಮಡಿಲು ಬೇಡವಾಯಿತೆ
ಕಂದ ಇನ್ನು ಕರುಣೆ ಬಾರದಾಯಿತೆ....

ಹೊತ್ತು ಹೆತ್ತು ಸಾಕಿ ಸಲುಹಿ
ವಿದ್ಯೆ ಕೊಟ್ಟು ಬದುಕ ಕಲಿಸಿ
ಪ್ರೀತಿ ಮಮತೆ ಬಂಧದೊಳಗೆ
ಕಂದ ನೀನೆ ಉಸಿರು ಎನಗೆ.....

ಮರೆತೆ ನೀನು ಮಧುರ ಘಳಿಗೆ
ತೊರೆದೆ ತಾಯಿ-ಮಗಳ ಬೆಸುಗೆ
ದೂರವ ಮಾಡಿ ಶಿಕ್ಷೆಯ ನೀಡಿದೆ
ಮಾತನು ಮರೆತ ಮೌನವೆ ಗೆದ್ದಿದೆ.....

ಕೇಳಲೊಮ್ಮೆ ನಿನ್ನ ಧ್ವನಿಯ
ಕಾದಿಹವೆನ್ನ ಕಿವಿಗಳು
ನೋಡಲೊಮ್ಮೆ ನಿನ್ನ ಮುಖವ
ಕಾತರಿಸಿವೆ ಕಂಗಳು...

ಕ್ಷಮಿಸುತ ಒಮ್ಮೆ ತೋರುತ ಕರುಣೆ
ಉಸಿರಿದು ನಿಂತು ಹೋಗುವ ಮುನ್ನ
ಮುರಿಯುತ ಮೌನ ಮರೆಯುತ ಕದನ
ಸೇರಿಕೊ ಬಂದು ತಾಯಿಯ ಮಡಿಲನ್ನ...!!!


@ನೊಂದ ತಾಯಿಯ ನೋವಿನ ನುಡಿಗಳು @
[ ಮಕ್ಕಳು ಎಷ್ಟೆ ದೊಡ್ಡವರಾದ್ರು ತಾಯಿಗೆ ಅವರು ಇನ್ನು ಪುಟ್ಟ ಕಂದಮ್ಮಗಳೆ....ಯಾವುದೇ ಕಾರಣಕ್ಕು ತಾಯಿ ಜೊತೆ ಜಗಳಾ ಮಾಡ್ಕೊಂಡು ದೂರಾ ಮಾಡಬೇಡಿ ಏನೇ ಇದ್ರು ಕೂತು ಮಾತಾಡಿ ಪರಿಹಾರ ಸಿಗುತ್ತೆ... ತಾಯಿನಾ ದೂರಾ ಮಾಡ್ಕೊಂಡ್ರೆ ಆ ಜೀವಕ್ಕೆ ತುಂಬಾ ನೋವಾಗುತ್ತೆ, ಆ ತಾಯಿ ಕಣ್ಣಲ್ಲಿ ನೀರು ತರಿಸಬೇಡಿ
~~ ತಾಯಂದಿರ ದಿನಾಚರಣೆ ನಿಮಿತ್ಯ ಪುಟ್ಟ ಕೋರಿಕೆ ]

" ಮನಸಿದೊ ಮೋಹದ ಕುದುರೆ"


ಮನಸೆಂಬ ಮೋಹದ ಕುದುರೆ
ಪ್ರೀತಿ ಪ್ರೇಮದ ಮದಿರೆಯ ನಶೆಯಲಿ
ಹಗಲಿರುಳೆನ್ನದೆ ಲಗಾಮು ಇಲ್ಲದೆ
ಓಡುತಿದೆ ಮನ ಓಡುತಿದೆ ....

ಕನಸಿನ ಅರಮನೆ ಹುಡುಕುತ ಹೊರಟಿದೆ
ನೆನಪಿನಂಗಳ ದಾಟಿ ಬಂದಿದೆ
ಸಂತಸವಿನ್ನು ಮರಿಚಿಕೆಯಾಗಿದೆ
ಬೇವಿನ ಕಹಿಯೆ ಬೇರು ಬಿಟ್ಟಿದೆ ....

ನಲ್ಮೆಯ ಸಂಚಿನ ಆಳವನರಿಯದೆ
ನಲಿವಿನ ನೆಲೆಯು ಕಾಣದೆ ಹೋಗಿದೆ
ನೋವಿನ ಅಲೆಗಳ ಹೊಡೆತಕೆ ಸಿಲುಕಿ
ಚಂಚಲ ಮನಸಿದು ಕಳವಳಗೊಂಡಿದೆ ....

ಅಶ್ವಮೇಧದ ಕುದುರೆಯಂತೆ
ಶರ ವೇಗದಲಿ ಬಲು ದೂರದಲಿ
ಅಂಕೆಗೆ ಸಿಗದೆ ಓಡುತಿದೆ
ದಾರಿಯ ಕಾಣದೆ ಅಲೆಯುತಿದೆ ....

ಮನಸಿದೊ ಮೋಹದ ಕುದುರೆ
ಮಾನಿನಿ ಬೀಸಿದ ಒಲವಿನ ಬಲೆಯಲಿ
ಸಿಲುಕಿ ಬಿದ್ದಿದೆ ಲಗಾಮು ತಪ್ಪಿದೆ
ಓಡುತಿದೆ ಮನ ಓಡುತಿದೆ ...!!!

$~ ರಾಜ್ ಪಾಟೀಲ್ ~$
ಓಡದಿರಿ ಮೋಡಗಳೆ
ಬಹುದೂರಾ ನೀವು
ಮುಂಗಾರು ಮಳೆಗಾಗಿ
ಕಾದಿಹೆವು ನಾವು

ಹನಿ ನೀರು ಸುರಿಯದೆ
ಇಳೆ ಕೂಡಾ ಕಾದಿದೆ
ರೈತನ ಮುಖದಲ್ಲಿ
ಬರದ ಚಿಂತೆ ಕಾಡಿದೆ

ಮಳೆ ಬರದೆ ಹೋದರೆ
ಬೆಳೆ ಬೆಳೆಯಲಾಗದು
ಬೆಳೆ ಬೆಳೆಯದಿದ್ದರೆ
ಈ ಬದುಕು ಸಾಗದು

ಓ ವಾಯು ದೇವಾ
ನೀ ತೋರು ಕೃಪೆಯಾ
ಒಯ್ಯದಿರು ಮುಂದಕ್ಕೆ
ಮೋಡಗಳೆ ಜೋತೆಯಾ

ಮೋಡಗಳೆ ಕರಗಿ
ತುಸು ನೀರು ಸುರಿಸಿ
ಎಲ್ಲರ ಮೊಗದಲ್ಲಿ
ಸಂತಸವ ಹರಿಸಿ....!!!

$~ರಾಜ್ ಪಾಟೀಲ್ ~$ 

"ಮಳೆ-ಮಹಾ ಮಳೆ"


ಮೊದಲ ಮಳೆಯ ಜೇನ ಹನಿಗೆ
ಕಾದು ಕುಳಿತ ಭೂರಮೆಗೆ
ಕಂಡ ಒಡನೆ ವರ್ಷಧಾರೆ
ಸಂಭ್ರಮವೊ ಸಂಭ್ರಮ...

ಇಳೆಗೆ ಮಳೆಯ ಸಮ್ಮಿಲನ
ಹೊಸದೊಂದು ಸಂಚಲನ
ಚಳಿಚಳಿಯ ಕಂಪನ
ಮಳೆರಾಯನ ಆಗಮನ...

ಬತ್ತಿಹೊದ ಹಳ್ಳ ಕೊಳ್ಳ
ಎಲ್ಲೆ ಮೀರಿ ಹರಿಯುತಿವೆ
ಒಣಗಿ ನಿಂತ ಗಿಡಮರಕೆ
ಹಸಿರೆಲೆಗಳು ಚಿಗುರಿವೆ...

ಕಳೆಯ ಕೊಳೆಯ ತೆಗೆದು ಕೂತ
ಬಿತ್ತಲು ಬೆಳೆಯ ಅನ್ನದಾತ
ಸಂಕಟವೊ ಸಂಭ್ರಮವೊ ತಪ್ಪಿದಲ್ಲ ತೊಂದರೆ
ಅಲ್ಪ ವೃಷ್ಠಿ ಜೊತೆ ಜೊತೆಗೆ ಅತೀ ಮಳೆ ಬಂದರೆ...

ಓ ಮಳೆಯೆ ಓ ಮಳೆಯೆ
ಮಳೆಗಾಲದ ಮಳೆಯೆ
ಸೃಷ್ಠಿಕರ್ತನ ಮಧುರ ಮಾಯೆ
ಎಲ್ಲೆಲ್ಲೂ ನಿನ್ನದೆ ಛಾಯೆ...!!!

$~ ರಾಜ್ ಪಾಟೀಲ್~$
 —
ಮನಸಲ್ಲಿ ಬರಿ ನೀ ಆವರಿಸಿದೆ
ನಿದಿರೆಯಲ್ಲು ಕೂಡಾ ನಾ ಕನವರಿಸಿದೆ
ಕನಸಲ್ಲು ನಿನ್ನ ಪ್ರತಿಬಿಂಬವೆ
ಇಂದೆಕೊ ನೀ ತುಂಬಾ ನೆನಪಾಗಿಹೆ...

ಕಣ್ಣ ರೆಪ್ಪೆ ಕೂಡಾ ನಿನ್ನ ದಾರಿ ಕಾದಿವೆ
ಕಿವಿಗಳೆರಡು ನಿನ್ನ ಧ್ವನಿಯ ಮರೆಯದಂತಿವೆ
ಹೃದಯ ಬಡಿತ ಒಂದೆ ಸಮನೆ ಅತಿಯಾಗಿದೆ
ಇಂದೆಕೊ ನೀ ತುಂಬಾ ನೆನಪಾಗಿಹೆ...

ಕಲ್ಲು ಮನಸು ಕರಗದಂತೆ
ನನ್ನ ಸ್ನೇಹ ಅರಿಯದಂತೆ
ಮಾತಿಲ್ಲದೆ ಮೌನಿ ನೀನಾಗಿಹೆ
ಇಂದೆಕೊ ನೀ ತುಂಬಾ ನೆನಪಾಗಿಹೆ...

ನಿನ್ನ ನೆನಪಲ್ಲೆ ನಾ ಕಳೆದು ಹೋಗಿರುವೆ
ನಿನ್ನ ನೆನಪೊಂದೆ ನನ್ನ ಬದುಕಾಗಿದೆ
ನನ್ನ ನೆನಪು ನೀನಿಂದು ಮರೆತಾಗಿದೆ
ಗೆಳೆಯ ಇಂದೆಕೊ ನೀ ತುಂಬಾ ನೆನಪಾಗಿಹೆ...!!!
ಬೇಡುವ ಜನಗಳ ಕೋರಿಕೆ ಆಲಿಸಿ
ಭಕ್ತಿ ಭಾವವ ತುಲನೆಯ ಮಾಡಿ
ಬೇಡಿದ ವರಗಳ ನೀಡುವ ದೇವರು
ತಾರತಮ್ಯವ ಮಾಡುವನು...

ಸಿರಿವಂತರಿಗೆ ಹಣವನು ನೀಡಿ
ಬಡವರ ಬಡತನ ಜಾಸ್ತಿ ಮಾಡಿ
ಗುಡಿಸಿಲಿನೊಳಗಡೆ ಬೆಳಕಾಗದೆ
ಅರಮನೆಯೊಳಗೆ ಸೆರೆಯಾಗಿಹನು...

ದರುಶನ ಪಡೆಯಲು ಬಗೆಬಗೆ ಪಾಳಿಯು
ವಿಧವಿಧ ಸೇವೆಗೆ ಥರ ಥರ ಬೆಲೆಯು
ಕಾಣಿಕೆ ಹೆಚ್ಚಿರೆ ದೇವರ ಹತ್ತಿರ
ಬರಿಯ ಪ್ರಾರ್ಥನೆ ದೇವರು ಎತ್ತರ...

ಹಿಂದಿನ ಕಾಲದಿ ತಪಸ್ಸಿಗೆ ಮೆಚ್ಚಿ
ದರುಶನ ಭಾಗ್ಯ ಕರುಣಿಸುತ್ತಿದ್ದ
ಕಲಿಯುಗದೊಳಗೆ ಮಂದಿರದಲ್ಲಿ
ಮಾರುಕಟ್ಟೆಯ ಸರಕಾಗಿಹನು...

ಜಗದ ತುಂಬೆಲ್ಲ ಅನ್ಯಾಯ ಹೆಚ್ಚಿದೆ
ದುಡ್ಡಿನ ಮದದಿ ನ್ಯಾಯವು ಸತ್ತಿದೆ
ಎಲ್ಲ ಬಲ್ಲಹ ಆ ಸೃಷ್ಠಿಕರ್ತನು
ಮೌನದಿ ಕುಳಿತು ಮರೆತಂತಿಹನು...!!!
" ಮೂಕ ಹಕ್ಕಿಯ ಮೌನ ರಾಗ"

ಮನದ ಹಕ್ಕಿ ಮೌನವಾಗಿ
ಮಾತು ಮರೆತು ಮೂಕವಾಗಿ
ಮನದಿ ನೋವು ಮರೆಯದಾಗಿ
ಮೌನರಾಗ ಹಾಡಿದೆ...

ಬಂಧು-ಬಳಗ ದೂರವಾಗಿ
ಸ್ನೇಹ ಪ್ರೀತಿ ಸಿಗದೆ ಹೋಗಿ
ತನ್ನದೆಲ್ಲ ಕಳೆದುಕೊಂಡು
ಹಕ್ಕಿ ಇಂದು ಒಂಟಿಯಾಗಿ...

ಕಳೆದ ಮಧುರ ಘಳಿಗೆ ನೆನಪು
ಮತ್ತೆ ಮತ್ತೆ ಮರುಕಳಿಸಿ
ಜಾರಿದಂಥ ಕಣ್ಣ ನೀರು
ಕಥೆಯನೊಂದ ಹೇಳಿದೆ...

ರೆಕ್ಕೆ ಬಿಚ್ಚಿ ಹಾರಲ್ಹೋಗಿ
ಕೆಳಗೆ ಜಾರಿ ಬಿದ್ದಿದೆ
ಎದ್ದು ಬಿದ್ದು ಮತ್ತೆ ಎದ್ದು
ಹಕ್ಕಿ ಹಾರಿ ಹೋಗಿದೆ...

ಮನದ ಹಕ್ಕಿ ಮೌನವಾಗಿ
ಕ್ರೂರ ಜಗಕೆ ರೋಸಿಹೊಗಿ
ಮೂಕ ಮನಸು ಶಾಂತಿ ಬಯಸಿ
ತುಂಬ ದೂರ ಸಾಗಿದೆ...!!!

$~ರಾಜ್ ಪಾಟೀಲ್~$
ಜನನ ಮರಣದ ನಡುವೆ
ನಾಲ್ಕು ದಿನಗಳ ಬದುಕು
ಬದುಕಿನ ಪಯಣದ ಮಧ್ಯೆ
ನೂರೆಂಟು ತೊಡಕು....

ನಾನು ನನ್ನದು ನನಗೆ ಎನ್ನುವ
ಸ್ವಾಥ೯ದ ಪರಿಧಿಯೊಳಗೆ
ನಾವ ನಮ್ಮವರೆನ್ದುವುದು ಬರಿ
ಇತಿಹಾಸದ ಪುಟದೊಳಗೆ...

ಮದ-ಮತ್ಸರ,ಮೋಹ ಲೋಭಗಳ
ಬಾಹು ಬಂಧನದೊಳಗೆ
ಚಂಚಲ ಮನಸಿದು
ಸಂಚಿನ ಸುಳಿಯೊಳಗೆ...

ಅನಿಶ್ಚಿತತೆಯ ಬದುಕಿನಲಿ
ಬಣ್ಣದ ಕನಸುಗಳು
ನೆನಪಿನ ಬುತ್ತಿಯಲಿ
ಸಿಹಿ ಕಹಿ ಘಟನೆಗಳು...

ಜನನ ಮರಣದ ನಡುವೆ
ನಾಲ್ಕು ದಿನಗಳ ಬದುಕು
ಈ ಬದುಕ ನಡೆಸಲು ಬೇಕು
ಭರವಸೆಯ ಬೆಳಕು...!!!