Saturday 28 September 2013

ಕಲ್ಲು ಹೃದಯ ಕರಗದಾಯಿತೆ
ಕರುಳ ಕೂಗು ಕೇಳದಾಯಿತೆ
ತಾಯಿ ಮಡಿಲು ಬೇಡವಾಯಿತೆ
ಕಂದ ಇನ್ನು ಕರುಣೆ ಬಾರದಾಯಿತೆ....

ಹೊತ್ತು ಹೆತ್ತು ಸಾಕಿ ಸಲುಹಿ
ವಿದ್ಯೆ ಕೊಟ್ಟು ಬದುಕ ಕಲಿಸಿ
ಪ್ರೀತಿ ಮಮತೆ ಬಂಧದೊಳಗೆ
ಕಂದ ನೀನೆ ಉಸಿರು ಎನಗೆ.....

ಮರೆತೆ ನೀನು ಮಧುರ ಘಳಿಗೆ
ತೊರೆದೆ ತಾಯಿ-ಮಗಳ ಬೆಸುಗೆ
ದೂರವ ಮಾಡಿ ಶಿಕ್ಷೆಯ ನೀಡಿದೆ
ಮಾತನು ಮರೆತ ಮೌನವೆ ಗೆದ್ದಿದೆ.....

ಕೇಳಲೊಮ್ಮೆ ನಿನ್ನ ಧ್ವನಿಯ
ಕಾದಿಹವೆನ್ನ ಕಿವಿಗಳು
ನೋಡಲೊಮ್ಮೆ ನಿನ್ನ ಮುಖವ
ಕಾತರಿಸಿವೆ ಕಂಗಳು...

ಕ್ಷಮಿಸುತ ಒಮ್ಮೆ ತೋರುತ ಕರುಣೆ
ಉಸಿರಿದು ನಿಂತು ಹೋಗುವ ಮುನ್ನ
ಮುರಿಯುತ ಮೌನ ಮರೆಯುತ ಕದನ
ಸೇರಿಕೊ ಬಂದು ತಾಯಿಯ ಮಡಿಲನ್ನ...!!!


@ನೊಂದ ತಾಯಿಯ ನೋವಿನ ನುಡಿಗಳು @
[ ಮಕ್ಕಳು ಎಷ್ಟೆ ದೊಡ್ಡವರಾದ್ರು ತಾಯಿಗೆ ಅವರು ಇನ್ನು ಪುಟ್ಟ ಕಂದಮ್ಮಗಳೆ....ಯಾವುದೇ ಕಾರಣಕ್ಕು ತಾಯಿ ಜೊತೆ ಜಗಳಾ ಮಾಡ್ಕೊಂಡು ದೂರಾ ಮಾಡಬೇಡಿ ಏನೇ ಇದ್ರು ಕೂತು ಮಾತಾಡಿ ಪರಿಹಾರ ಸಿಗುತ್ತೆ... ತಾಯಿನಾ ದೂರಾ ಮಾಡ್ಕೊಂಡ್ರೆ ಆ ಜೀವಕ್ಕೆ ತುಂಬಾ ನೋವಾಗುತ್ತೆ, ಆ ತಾಯಿ ಕಣ್ಣಲ್ಲಿ ನೀರು ತರಿಸಬೇಡಿ
~~ ತಾಯಂದಿರ ದಿನಾಚರಣೆ ನಿಮಿತ್ಯ ಪುಟ್ಟ ಕೋರಿಕೆ ]

No comments:

Post a Comment