Saturday, 28 September 2013

"ತಾಯಿ ದೇವರು"


ಏನೆಂದು ಬರೆಯಲಿ ತಾಯೆ
ಏನಂತ ಹೊಗಳಲಿ ಹೇಳು
ಅಕ್ಷರಗಳ ಅಂಗಳದಿ ಪದಪುಂಜ ಸಿಗುತಿಲ್ಲ
ಬಣ್ಣಿಸಲು ನಿನ್ನ ಈ ಜನುಮ ಸಾಲಲ್ಲ....

ನವಮಾಸ ನಗುನಗುತ ನೋವನ್ನು ಸಹಿಸಿ
ಹೊಸದೊಂದು ಉಸಿರನ್ನು ಈ ಧರೆಗೆ ಕಳಿಸಿ
ಪಾಲನೆ-ಪೊಷಣೆಯಲ್ಲಿ ಇಡಿ ಜೀವ ಕಳೆದು
ದೇವರ ಪ್ರತಿರೂಪ ತಾಯಿ ನಿನಾದೆ....

ಹಗಲಿರುಳು ದುಡಿಯುತ್ತ ಹಸಿವನ್ನು ಮರೆಯುತ್ತ
ಮಕ್ಕಳ ಬದುಕಿಗೆ ಸರಿದಾರಿ ತೋರುತ್ತ
ಕಷ್ಟಗಳ ಅನುಭವಿಸಿ ಸುಖವನ್ನೆ ನೀಡಿ
ವಿದ್ಯೆಯನು ಕಲಿಸುತ್ತ ಮೊದಲ ಗುರುವಾದೆ....

ಕಾಣದ ದೇವರ ನೆನೆಯುವ ನೀವು
ಕಾಣುವ ದೇವರ ಮರೆಯದಿರಿ
ಜನ್ಮವ ನೀಡಿ ಬದುಕನು ಕೊಟ್ಟ
ತಾಯಿ ದೇವರ ತೊರೆಯದಿರಿ....

ಏನೆಂದು ಬರೆಯಲಿ ತಾಯೆ
ಏನಂತ ಹೊಗಳಲಿ ನಿನ್ನ
ಜನುಮ-ಜನುಮಗಳೆ ಜನಿಸಿ ಬಂದರು
ತಾಯಿ ಋಣವದು ತೀರಲ್ಲ....!!!!

$~ ರಾಜ್ ಪಾಟೀಲ್ ~$

No comments:

Post a Comment