Saturday, 28 September 2013

"ಚುನಾವಣೆ-ಚಲಾವಣೆ"


ಏಳೀರಿ ಜನಗಳೆ ಎಚ್ಚೆತ್ತುಕೊಳ್ಳಿ
ವೋಟಿನ ಹಕ್ಕನು ನಿವ್ ತಿಳಿದುಕೊಳ್ಳಿ
ಬಂತದೊ ಚುನಾವಣೆ ಬರುತಿದೆ ಚುನಾವಣೆ
ಮತ್ತೈದು ವರುಷದ ರಾಜ್ಯದ ಚಲಾವಣೆ

ಕೈಯನು ಮುಗಿದು ಕಾಲನು ಹಿಡಿದು
ಚುನಾವಣೆ ಸಮಯದಿ ಪ್ರಜೆಗಳೆ ಪ್ರಭುಗಳು
ಎನ್ನುತ ಹಾಡುತ ಹೊಗಳುತ ಬರುತಿದೆ
ರಾಜಕಾರಣಿಗಳ ಮೆರವಣಿಗೆ

ತಮ್ಮಯ ಲಾಭಕೆ ಜನಗಳ ನಡುವೆ
ಜಾತಿಮತಗಳ ವಿಷ ಬೀಜ ಬಿತ್ತಿ
ಶಾಂತ ನಾಡಲಿ ಅಶಾಂತಿ ಮೂಡಿಸಿ
ಮುಗ್ದ ಜನಗಳ ನಿದ್ರೆಯ ಕೆಡಿಸಿ

ನೋಟನು ನೀಡುತ ವೋಟನು ಕೇಳುತ
ಲೂಟಿಯ ಮಾಡಲು ಸಂಚನು ಮಾಡುತ
ಶ್ವೇತ ವಸ್ತ್ರದಿ ಕೊಳಕು ಮನಸಿನ
ಕಳ್ಳ ಖದೀಮ ನಾಯಕರು

ಏಳಿರಿ ಜನಗಳೆ ಎಚ್ಚೆತ್ತುಕೊಳ್ಳಿ
ವೋಟಿನ ಹಕ್ಕನು ನಿವ್ ತಿಳಿದುಕೊಳ್ಳಿ
ಒಳ್ಳೆಯ ಜನರ ಆರಿಸಿ ಕಳಿಸಿ
ಕಳ್ಳರ ಕೈಯಿಂದ ನಾಡನು ಉಳಿಸಿ….!!
 
$~ರಾಜ್ ಪಾಟೀಲ್~$

No comments:

Post a Comment