Saturday, 28 September 2013

ಬಾನ ಚಂದಿರನು
ಅವನೊಬ್ಬ ಸುಂದರನು
ನನ್ನಾ ಸುಂದರಿ ಕನಸಲ್ಲಿ
ದಿನನಿತ್ಯ ಬರುತಿಹನು.......

ಬೆಳ್ಳಿ ರಥವನು ಏರಿ
ಸಪ್ತ ಸಾಗರ ದಾಟಿ
ಕಾಮನಬಿಲ್ಲನ್ನೇ
ಉಡುಗೊರೆಯ ತಂದಿಹನು....

ಏಳು ಮಲ್ಲಿಗೆ ತೂಕದ
ರಾಜಕುಮಾರಿ ನನ್ನವಳು
ಬಾನ ಚಂದಿರನೆ
ಮೋಹಗೊಂಡಿಹನು....

ಬಾನಲ್ಲಿ ನೀನಿರಲು
ಅಪ್ಸರೆಯರು ತುಂಬಿರಲು
ಬೇಡುವೆನು ಚಂದಿರನೆ
ಕಾಡದಿರು ಸುಂದರಿಯ.....

ಕಠಿಣ ಪರಿಶ್ರಮದಿ
ಒಲಿಸಿಕೊಂಡಿಹೆನವಳ
ಮಾಡದಿರು ನೀ ದೂರ
ನಮ್ಮಿಬ್ಬರ ಪ್ರೀತಿಯ....!!!

No comments:

Post a Comment