Saturday, 28 September 2013

ಮನಸಲ್ಲಿ ಬರಿ ನೀ ಆವರಿಸಿದೆ
ನಿದಿರೆಯಲ್ಲು ಕೂಡಾ ನಾ ಕನವರಿಸಿದೆ
ಕನಸಲ್ಲು ನಿನ್ನ ಪ್ರತಿಬಿಂಬವೆ
ಇಂದೆಕೊ ನೀ ತುಂಬಾ ನೆನಪಾಗಿಹೆ...

ಕಣ್ಣ ರೆಪ್ಪೆ ಕೂಡಾ ನಿನ್ನ ದಾರಿ ಕಾದಿವೆ
ಕಿವಿಗಳೆರಡು ನಿನ್ನ ಧ್ವನಿಯ ಮರೆಯದಂತಿವೆ
ಹೃದಯ ಬಡಿತ ಒಂದೆ ಸಮನೆ ಅತಿಯಾಗಿದೆ
ಇಂದೆಕೊ ನೀ ತುಂಬಾ ನೆನಪಾಗಿಹೆ...

ಕಲ್ಲು ಮನಸು ಕರಗದಂತೆ
ನನ್ನ ಸ್ನೇಹ ಅರಿಯದಂತೆ
ಮಾತಿಲ್ಲದೆ ಮೌನಿ ನೀನಾಗಿಹೆ
ಇಂದೆಕೊ ನೀ ತುಂಬಾ ನೆನಪಾಗಿಹೆ...

ನಿನ್ನ ನೆನಪಲ್ಲೆ ನಾ ಕಳೆದು ಹೋಗಿರುವೆ
ನಿನ್ನ ನೆನಪೊಂದೆ ನನ್ನ ಬದುಕಾಗಿದೆ
ನನ್ನ ನೆನಪು ನೀನಿಂದು ಮರೆತಾಗಿದೆ
ಗೆಳೆಯ ಇಂದೆಕೊ ನೀ ತುಂಬಾ ನೆನಪಾಗಿಹೆ...!!!

No comments:

Post a Comment