Saturday 28 September 2013

"ಸ್ಹೇಹದ ಮಡಿಲು..ಪ್ರೀತಿಯ ಒಡಲು"



ಎಂದೋ ಬಿತ್ತಿದ ಸ್ಹೇಹದ ಬೀಜ
ಮೊಳಕೆಯೊಡೆದು ಹೆಮ್ಮರವಾಗಿದೆ
ನಂಬಿಕೆಯನ್ನೊ ಬೇರುಗಳಿಂದ
ಬಾನೇತ್ತರಕೆ ಬೆಳೆದು ನಿಂತಿದೆ

ಮಮತೆಯನ್ನೊ ಜಲಧಾರೆ ಹರಿಸಿ
ಪ್ರೀತಿಯನ್ನುವ ಗೊಬ್ಬರ ಹಾಕಿ
ಸಂಶಯವೆನ್ನೊ ಕೀಟದ ಬಾಧೆ
ಸುತ್ತಲು ಸುಳಿಯದಂತೆ ಮಾಡಿದೆ

ಸವಿಮಾತಿನ ಸುಮಧುರ ಫಲಗಳ
ಸಂತಸವೆನ್ನೊ ಹಸಿರೆಲೆಗಳ ನಡುವೆ
ಸ್ಹೇಹದ ಆಶ್ರಯ ಬಯಸಿ ಬಂದವರ
ನಗುಮೊಗದಿಂದ ಸ್ವಾಗತ ನೀಡಿದೆ

ಮಳೆಯೆ ಇರಲಿ ಬಿಸಿಲೆ ಬರಲಿ
ಕಾಲಚಕ್ರದ ಜೊತೆ ಸಾಗುತಲಿ
ನಮ್ಮಿ ಸ್ಹೇಹದ ಆಲದ ಮರವು
ಶಾಶ್ವತವಾಗಿ ಹಸಿರಾಗಿರಲಿ

$~ರಾಜ್ ಪಾಟೀಲ್~$

No comments:

Post a Comment