Saturday, 28 September 2013

" ಈ ಸಾವು ನ್ಯಾಯವೆ?"


ಅಮ್ಮ ಏಕೆ ಜನ್ಮ ನೀಡದೆ
ನನ್ನ ನೀನು ದೂರ ಮಾಡಿದೆ
ಅಪ್ಪ ನೀನು ಕರುಣೆ ತೋರದೆ
ಕರುಳ ಬಳ್ಳಿ ಕಡಿದು ಹಾಕಿದೆ...

ಆರುತಿಗೊಬ್ಬಳು ಕಿರ್ತಿಗೊಬ್ಬ
ಅನ್ನೊ ಮಾತು ಸುಳ್ಳು ಮಾಡಿ
ಕಿರ್ತಿ ತರಲು ಮಗನ ಹೆತ್ತು
ಹಿಸುಕಿದಿರಿ ನನ್ನ ಕತ್ತು...

ಅಮ್ಮನ ಅಸಹಾಯಕತೆಗೆ
ಅಪ್ಪನ ಬಲವಂತಕೆ
ಕೌರ್ಯಕ್ಕೆ ಬಲಿಯಾದೆ
ನಾನಿಂದು ಮರೆಯಾದೆ...

ತಾಯಿಯಾಗಿ ಹೆಣ್ಣು ಬೇಕು
ಪತ್ನಿಯಾಗಿ ಹೆಣ್ನು ಬೇಕು
ಅಕ್ಕ-ತಂಗಿಯರು ಹೆಣ್ನು
ಹೆಣ್ಣು ಮಗಳು ಮಾತ್ರ ಬೇಡ.?

ಹೆಣ್ಣು-ಗಂಡು ಎಂಬ ಭೇದ
ಏಕೆ ಎಂದು ಪುಟ್ಟ ಕಂದ
ಪ್ರಶ್ನೆಯೊಂದ ಕೇಳಿದೆ
ಉತ್ತರಕ್ಕೆ ಕಾದಿದೆ...!!

$~ರಾಜ್ ಪಾಟೀಲ್`$

No comments:

Post a Comment