Saturday, 28 September 2013

ಮೋಹ

ಯಾವ ಮಾಯೆಯು ಬೀಸಿದ ಬಲೆಯೊ
ಬಿಡದೆ ಕಾಡುವ ಮೋಹದ ಸೆಲೆಯೊ
ಸಿಲುಕದೆ ಉಳಿದ ಮನಸಾವುದಿದೆ
ನರಳದೆ ಉಳಿದ ದಿನ ಯಾವುದಿದೆ..

ಹೆಣ್ಣಿಗೆ ಕಾಡುವ ಚಿನ್ನದ ಮೋಹ
ಗಂಡಿಗೆ ಹೆಣ್ಣು ಹೊನ್ನಿನ ಮೋಹ
ಮಣ್ಣಿನ ಮೇಲೂ ಹೆಚ್ಚಿದ ಮೋಹ
ಉಸಿರಿರೊವರೆಗೂ ಬಡಿದಾಡುವ ಜೀವ..

ಮೋಹದ ಪರಿಧಿಯ ಮಾಂತ್ರಿಕ ಪಾಶ
ಮೋಹದ ಸೆಳೆತಕೆ ಮನಸದೊ ಪರವಶ
ವಿಧಿಯಾಟದಲಿ ವಿಧ ವಿಧ ವೇಶ
ಸಿಲುಕಿದ ಮನಸಿನ ನೆಮ್ಮದಿ ನಾಶ..

ಬಿಟ್ಟೆನೆಂದರು ಬಿಡದಿ ಮೋಹ
ಬಿಟ್ಟು ಬಿಡದೆ ಕಾಡುವ ಮೋಹ
ಚಿಂತೆಯೊಳಗಡೆ ಸುಡುವ ದೇಹ
ಕೊನೆಯವರೆಗೂ ತೀರದ ದಾಹ..!!

~ * ರಾಜ್ ಪಾಟೀಲ್ ~ *

No comments:

Post a Comment