Saturday, 28 September 2013

"ಮಾಯಗಾತಿಯ ಮಾಯೆ"



ಯಾವ ಊರಿನಾ ಮಾಯಗಾತಿಯೊ
ಎಂಥ ಮೋಡಿಯ ಮಾಡಿಬಿಟ್ಟೆಯೊ
ಪರವಶನಾದೆನು ನಾ ಕಳದೆಹೋದೆನು
ನನ್ನ ಹೃದಯವ ಕಳೆದುಕೊಂಡೆನು

ಮುಂಗಾರಿನ ಮಿಂಚಂತೆ
ಮಿಂಚಿ ಮರೆಯಾದೆ
ಆ ಮಿಂಚಲಿ ಕಣ್ಸಂಚಲಿ
ಸೋತು ಸೆರೆಯಾದೆ

ಊಟವ ಸೇರದೆ ನಿದಿರೆಯು ಬಾರದೆ
ಕನಸದೆ ಬರುತಿದೆ
ಕನಸಲಿ ನಿನ್ನಯ
ಮಾಯೆಯೆ ತುಂಬಿದೆ

ತಣ್ಣನೆ ಗಾಳಿ ಮೈಯನು ಸೋಕಿದೆ
ಮನವಿದು ಮೆಲ್ಲನೆ ಚಿಂತೆಗೆ ನೂಕಿದೆ
ನನ್ನಿ ನಯನಕೆ ಕುತೂಹಲ ಹೆಚ್ಚಿದೆ
ಮಾಯಗಾತಿಯ ಹುಡುಕುತ ಹೊರಟಿದೆ

ಯಾವ ಊರಿನಾ ಮಾಯಗಾತಿಯೊ
ಎಂಥ ಮೋಡಿಯ ಮಾಡಿಬಿಟ್ಟೆಯೊ
ಪರವಶನಾದೆನು ನಾ ಕಳೆದು ಹೋದೆನು
ನನ್ನನೆ ನಾ ಮರೆತು ಬಿಟ್ಟೆನು..!!

$~ರಾಜ್ ಪಾಟೀಲ್~$

No comments:

Post a Comment