Saturday, 28 September 2013

ಚಂದಿರ ಲೋಕಕೆ ಹೋಗುವ ಬಾರೆ
ಚುಕ್ಕಿಗಳ ಜೋತೆ ಆಡುವ ಬಾರೆ
ಅಂದದ ಹುಡುಗಿ ಜೋತೆ ನೀನಿರಲು
ಚಂದಿರನಿಂದ ಕರೆ ಬಂದಿರಲು

ಸುಂದರ ಬಾನಲಿ ಹುಣ್ಣಿಮೆ ಬೆಳಕಲಿ
ಸವಿ ಮಾತುಗಳನ್ನಾಡುವ ಬಾರೆ
ಬೆಳಗಿನ ರವಿ ತಾ ಮೂಡುವವರೆಗೂ
ಚಂದ್ರನ ಮಡಿಲಲಿ ಮಲಗುವ ಬಾರೆ

ನೇಸರನರಮನೆಗೆ ಹೋಗುವ ಬಾರೆ
ಕಾಮನ ಬಿಲ್ಲನು ನೋಡುವ ಬಾರೆ
ಕಾಮನ ಬಿಲ್ಲಿನ ಬಣ್ಣಗಳ ಜೋತೆ
ಓಕುಳಿಯಾಟವ ಆಡುವ ಬಾರೆ

ಆಗಸಕೇಣಿ ಹಾಕುವೆ ನಾನು
ನಿನ್ನಯ ದಾರಿ ಕಾಯುವೆನು
ಚಂದಿರ ಲೋಕಕೆ ಹೋಗುವ ಬಾರೆ
ಚಂದದ ಹುಡುಗಿ ನೀ ಜೋತೆ ಬಾರೆ…!!!

No comments:

Post a Comment