Saturday, 28 September 2013

" ಮೂಕ ಹಕ್ಕಿಯ ಮೌನ ರಾಗ"

ಮನದ ಹಕ್ಕಿ ಮೌನವಾಗಿ
ಮಾತು ಮರೆತು ಮೂಕವಾಗಿ
ಮನದಿ ನೋವು ಮರೆಯದಾಗಿ
ಮೌನರಾಗ ಹಾಡಿದೆ...

ಬಂಧು-ಬಳಗ ದೂರವಾಗಿ
ಸ್ನೇಹ ಪ್ರೀತಿ ಸಿಗದೆ ಹೋಗಿ
ತನ್ನದೆಲ್ಲ ಕಳೆದುಕೊಂಡು
ಹಕ್ಕಿ ಇಂದು ಒಂಟಿಯಾಗಿ...

ಕಳೆದ ಮಧುರ ಘಳಿಗೆ ನೆನಪು
ಮತ್ತೆ ಮತ್ತೆ ಮರುಕಳಿಸಿ
ಜಾರಿದಂಥ ಕಣ್ಣ ನೀರು
ಕಥೆಯನೊಂದ ಹೇಳಿದೆ...

ರೆಕ್ಕೆ ಬಿಚ್ಚಿ ಹಾರಲ್ಹೋಗಿ
ಕೆಳಗೆ ಜಾರಿ ಬಿದ್ದಿದೆ
ಎದ್ದು ಬಿದ್ದು ಮತ್ತೆ ಎದ್ದು
ಹಕ್ಕಿ ಹಾರಿ ಹೋಗಿದೆ...

ಮನದ ಹಕ್ಕಿ ಮೌನವಾಗಿ
ಕ್ರೂರ ಜಗಕೆ ರೋಸಿಹೊಗಿ
ಮೂಕ ಮನಸು ಶಾಂತಿ ಬಯಸಿ
ತುಂಬ ದೂರ ಸಾಗಿದೆ...!!!

$~ರಾಜ್ ಪಾಟೀಲ್~$

No comments:

Post a Comment