Friday, 19 December 2014

ಇಡಿಯಾಗಿ ಬದುಕಿನಲಿ
ಹಿಡಿಯಷ್ಟು ಪ್ರೀತಿಯನು
ಕೊಡದೆ ಕಾಡಿದಳು
ಕೊನೆವರೆಗೂ ಕೋಮಲೆಯು...

ತನ್ನ ಕನಸುಗಳೆಲ್ಲ
ಹೃದಯದಲಿ ಬಚ್ಚಿಟ್ಟು
ತನಗವಳೆ ಸರ್ವಸ್ವ
ಎಂಬ ಭ್ರಮೆಯೊಳಗೆ ಬದುಕಿದನು...

ಎದೆಯೊಳಗೆ ನೋವಿಟ್ಟು
ಹುಸಿನಗೆಯ ಲೇಪನದಿ
ಕೊನೆವರೆಗೂ ಅವಳ
ಖುಷಿಗಾಗಿ ಮಿಡಿದಿಹನು...

ಸಿಗದು ಮುರಳಿ ಪ್ರೀತಿಯೆಂದು
ಅರಿತ ರಾಧೆ ಕೂಡ ಒಮ್ಮೆ
ದೂರಲಿಲ್ಲ ಕೃಷ್ಣನನ್ನು
ದೂರದಿಂದ ಸುಖವ ಬಯಸಿ...

ನನ್ನ ರಾಧೆಗೇಕೊ ಕಾಣೆ
ಕರುಣೆ ಮಾತ್ರ ಬಾರಲಿಲ್ಲ
ನೆನಪು ಕೊಂದು ಬಿಟ್ಟರೂನು
ಮನಸು ಮಾತ್ರ ಮರೆಯುತಿಲ್ಲ...

ಇಡಿಯಾಗಿ ಬದುಕಿನಲಿ
ಹಿಡಿಯಷ್ಟು ಪ್ರೀತಿಯನು
ಕೊಡದೆ ಕಾಡಿದಳು
ಕೊನೆವರೆಗೂ ಕೋಮಲೆಯು...!!!

ರಾಜ್..!!

No comments:

Post a Comment