Monday 15 December 2014


ಕಾಣದ ದೇವರು ಕರುಣೆಯ ತೋರದೆ
ಕಾಣುವ ದೇವರ ತಾ ಕರೆದೊಯ್ದ
ಲೋಕದ ಕಾಯಕ ಮುಗಿಸಿದ ತಾಯಿ
ತಬ್ಬಲಿ ಮಾಡಿ ಹೋದಳು ದೂರ…

ಏನಂತ ಬರೆಯಲಿ ನಾನು
ಪದಗಳು ಮರಣಿಸಿವೆ
ಹೃದಯದ ತುಂಬೆಲ್ಲ ಅಮ್ಮನ ನೆನಪುಗಳೆ
ಈ ಬದುಕು ಮಾತ್ರ ಖಾಲಿ -ಖಾಲಿ…

ಹೆತ್ತಬ್ಬೆಯ ಮರಣ
ದಿಕ್ಕು ತಪ್ಪಿದೆ ಪಯಣ
ದುಃಖದ ಕರಿಮೋಡ
ಆ ವಿಧಿಯ ಅಟ್ಟಹಾಸ…

ನನ್ನುಸಿರು ಇರೊವರೆಗು
ನಿನ್ನಾಸೆಗಳ ಪೊರೈಸುವೆ
ಹರಸು ನೀ ನಮ್ಮನ್ನು
ನಿನ್ನಾತ್ಮಕೆ ಶಾಂತಿಯ ಕೋರುವೆ…!!

(ಅಗಲಿದ ಅಮ್ಮನಿಗೆ ಅಕ್ಷರಗಳ ಅಪ೯ಣೆ)

1 comment:

  1. ಮನಸು ಮ್ಲಾನವಾಯಿತು.
    ತಾಯಿಯ ಹೃದಯಕ್ಕೆ ಶಾಂತಿ ಸಿಗಲಿ. :(

    ReplyDelete