Monday 15 December 2014

ನಿನ್ನ ಮನದೊಳಗೆ
ಮುಸುಕಿನ ಗುದ್ದಾಟ ಸ್ನೇಹದ ಸಲುಗೆಯೊ ಪ್ರೀತಿಯ ಸೆಳೆತವೊ
ಅರಿಯದೆ ನಾ ಸೋತೆ…

ಕಣ್ಣ ಭಾಷೆಯು ಕಥೆಯನು ಹೇಳಿದೆ
ತುಟಿಯ ಅಂಚಲಿ ಮೌನದ ವಾಸ
ಮನದೊಳು ಮೊಳಗಿದೆ ಯುದ್ಧದ
ಘೋಷಣೆ ಸ್ನೇಹ -ಪ್ರೀತಿಯ ಭಾವಗಳ…

ಅರಿತುಕೊ ಹೆಣ್ಣೆ ಕಳೆಯುವ ಮುನ್ನ
ಪ್ರೀತಿಯ ಬಂಧಕೆ ಸ್ನೇಹವೇ ಸೇತುವೆ
ಕಾದ ಪ್ರೀತಿಗೆ ಕೊಲ್ಲುವುದು ತರವೇ…

ನನ್ನ ಹೃದಯದ ಬಡಿತವ
ಕಿವಿಗೊಟ್ಟು ಕೇಳು ಮನಸಾರೆ ಒಮ್ಮೆ
ಪ್ರತಿ ಉಸಿರುಸಿರಲು ನಿನ್ನ ಹೆಸರೇನೆ
ನಿನೊಪ್ಪದೆ ತೋರಿದ ಜಾಣ್ಮೆಯ ಮರೆವು…

ನಿನ್ನ ಮನದೊಳಗೆ
ಅವಿತಿರುವ ಭಾವನೆಗಳ
ಅರಿಯದ ಧ್ಯಾನಿ ನಾನು
ಅರಿತಿರುವ ಮೌನಿ ನೀನು…!!

rAಜ್…!!

1 comment:

  1. 'ಅರಿಯದ ಧ್ಯಾನಿ ನಾನು
    ಅರಿತಿರುವ ಮೌನಿ ನೀನು'
    ಒಳ್ಳೆಯ ಪೋಣಿಕೆ...

    ReplyDelete