Saturday, 26 October 2013

ಕೂಗುತಿಹಳವಳಲ್ಲಿ
ಕೇಳಿಸದೆ ಮನವೆ
ಕಾಯುತಿಹಳೆನಗಾಗಿ
ಕಾಣಿಸದೆ ನಿನಗೆ...

ಮರೆತಿಲ್ಲ ನೀನಿನ್ನು
ಅವಳಹಂಕಾರವ
ವಿರಹದಲಿ ಕೊರಗಿದ
ಆ ದಿನಗಳ ನೋವ....

ಕ್ಷಮಿಸಿಬಿಡು ನೀನೊಮ್ಮೆ
ಅವಳಪರಾಧವ
ಕರಣಿಸು ನನಗಾಗಿ
ಚಲುವೆಯ ಒಲವ....

ಕೊರಗಿಹಳು ಮರುಗಿಹಳು
ನನ್ನವಳು ನನಗಾಗಿ
ಕೂಗಿಹಳು ಕಾದಿಹಳು
ನನ್ನಯ ಪ್ರೀತಿಗಾಗಿ........

ನೀಡಿಬಿಡು ಅಪ್ಪಣೆಯ
ಓ ನನ್ನ ಮನವೆ
ನನ್ನೊಲವ ಬಳಿಯಲ್ಲಿ
ನಾ ಹೋಗಿ ಬಿಡುವೆ...!!!

$~ರಾಜ್ ಪಾಟೀಲ್~$

Friday, 25 October 2013

ಬದುಕು ಬಯಲಾಟ
ಆ ವಿಧಿಯ ಆಟ
ಪ್ರತಿದಿನವು ಪ್ರತಿಕ್ಷಣವು
ಸಮಯದ ಜೊತೆ ಓಟ...

ಹತ್ತಾರು ಕಾರ್ಯಗಳು
ಹಲವಾರು ವೇಷಗಳು
ಎಲ್ಲವೂ ಹೊಟ್ಟೆಗಾಗಿ
ತುಂಡು ಬಟ್ಟೆಗಾಗಿ...

ಕುಳಿತು ಉಂಡರಿಲ್ಲಿ
ಕುಡಿಕೆ ಹೊನ್ನು ಸಾಲದು
ಕಷ್ಟಪಟ್ಟು ದುಡಿದರಷ್ಟೆ
ಹೊಟ್ಟೆಗೂನೂ ಬಟ್ಟೆಗೂನೂ...

ಜೀವನವೆ ಹೀಗೆ
ತಂತಿಯ ಮೇಲಿನ ನಡಿಗೆ
ಹಲವು ಬಗೆಯ ಹಗಲುವೇಷ
ಬಿಳೋವರೆಗೂ ಯಮನಪಾಶ...!!

$~ರಾಜ್ ಪಾಟೀಲ್ ~$

Thursday, 17 October 2013

ಕನಸುಗಾರ

ಕನಸಿನ ಲೋಕದಿಂದ
ಕನಸುಗಾರ ಬಂದಿರುವೆ
ನನ್ನೊಲವೆ ನಿನಗಾಗಿ
ಕನಸುಗಳ ತಂದಿರುವೆ..

ಕಪ್ಪು-ಬಿಳುಪಿನ ಕಣ್ಣಿನಲಿ
ಬಣ್ಣ ಬಣ್ಣದ ಕನಸುಗಳು
ಅಂಗೈಯಷ್ಟು ಹೃದಯದಲಿ
ಬರಿ ನಿನ್ನದೆ  ನೆನಪುಗಳು..

ಒಂದೊಳ್ಳೆ ಕನಸಿನಲಿ
ತುಸು ಇಣುಕಿ ನೋಡು
ಹಳೆ ನೆನಪುಗಳ ಜೊತೆ
ಜೂಟಾಟವಾಡು..

ನಾ ಕಂಡ ಕನಸುಗಳ
ನೀ ನನಸ ಮಾಡು
ನನಗಾಗಿ ಕನಸೊಂದ
ಉಡುಗೊರೆಯ ನೀಡು..

ಕನಸಿನ ಲೋಕದಿಂದ
ಕನಸುಗಾರ ಬಂದಿರುವೆ
ಕನಸಿನ ಮೂಟೆ ಹೊತ್ತು
ಕನಸುಗಳ ತಂದಿರುವೆ..!!

$~ ರಾಜ್ ಪಾಟೀಲ್~$


Monday, 14 October 2013

ನನಸಾಗದ ಕ್ಷಣಗಳ
ನಾ ಕನಸ ಕಾಣುವೆನು
ಮರೆಯದ ನೆನಪುಗಳ
ಕನಸಲ್ಲೂ ನಾ ಬಯಸೇನು.....

ನೀ ಕೂಡಾ ಹಾಗೆ 
ಮರೆಯದ ನೆನಪಂತೆ
ಕನಸಲ್ಲಿ ಕಾಣದಿರು
ನೀ ಬಂದು ಕಾಡದಿರು......

ನಿನ್ನ ನೆನಪುಗಳ
ಈ ಹೃದಯ ಮರೆತಿಲ್ಲ
ಹೃದಯದ ಗಡಿಯಾರ
ಇಂದೇಕೊ ಸರಿಯಿಲ್ಲ ......

ನಿನ್ನ ಹೆಸರಿನ ಮೇಲೆ
ಮನಸಿಗೂ ಏಕೊ ಮುನಿಸು
ನಿನ್ನ ಮರೆಯದ ನನಗೂ
ನನ್ನ ಮೇಲೆಯೆ ಮುನಿಸು.......

ನನಸಾಗದ ಕ್ಷಣಗಳ
ನಾ ಕನಸ ಕಾಣುವೆನು
ಕನಸಲ್ಲಿ ಕಾಣದಿರು
ನೀ ಬಂದು ಕಾಡದಿರು....!!!!

$~ ರಾಜ್ ಪಾಟೀಲ್~$
ಸರಸರನೆ ಬಂದಿತು
ಮತ್ತೊಮ್ಮೆ ದಸರಾ
ಎಲ್ಲರ ಮನೆ-ಮನದಲಿ
ಹೊಸತನದ ಸಡಗರ...

ರಾಮನ ಗೆಲುವಿನಲಿ
ರಾವಣನ ಅಂತ್ಯವು
ಸತ್ಯದ ಸಂಭ್ರಮಾಚರಣೆ
ವಿಜಯ ದಶಮಿಯು...

ಸನರಾತ್ರಿ ನವದಿನವು
ವಿಧವಿಧದ ಅಲಂಕಾರ
ದುರ್ಗೆಯ ಕೈಯಲ್ಲಿ
ದುಷ್ಟತನದ ಸಂಹಾರ...

ಅಶಾಂತಿ ಕರಗುತ್ತ
ಅಧರ್ಮ ಅಳಿಯಲಿ
ಹಿಂಸೆಯು ನಶಿಸುತ್ತ
ಸುಖ-ಶಾಂತಿ ಬೆಳೆಯಲಿ

ಪ್ರತಿವರ್ಷ ಹರುಷದಲಿ
ಬರುತಿರಲಿ ದಸರಾ
ನೆಮ್ಮದಿಯ ಜೊತೆಜೊತೆಗೆ
ಹೆಚ್ಚಿಸಲಿ ಸಡಗರ...!!!

Thursday, 10 October 2013

ಬಾ ಮಳೆಯೆ ಬಾ ಮಳೆಯೆ
ಇಳಿದು ಬಾ ನೀ ಇಳೆಗೆ

ಭೂತಾಯಿ ಕಾದಿಹಳು
ಅಪ್ಪುಗೆಯ ಬಯಸಿಹಳು

ಮರಗಿಡಗಳು ಮೊರೆಯಿಡುತಿವೆ
ಹಸಿರಿಗಾಗಿ ಹೊಸ ಉಸಿರಿಗಾಗಿ

ಸಕಲ ಜಲಚರಗಳಿಗೆ
ತಾ ಹೊಸ ಜೀವಕಳೆಯ 

ಕಾಮನ ಬಿಲ್ಲಿನ ಬಣ್ಣದಲಿ
ಬಿಡಿಸು ಚಿತ್ತಾರದ ರಂಗೋಲಿ

ಬಾ ಮಳೆಯೆ ಬಾ ಮಳೆಯೆ
ಮಳೆಗಾಲದ ಹೂಮಳೆಯೆ

ಇಳಿದು ಬಾ ನೀ ಇಳೆಗೆ 
ಭೂತಾಯಿ ಮಡಿಲೊಳಗೆ...!!!

Wednesday, 9 October 2013

ಪಯಣ

ಬಹುದೂರಾ ಹೊರಟಿಹೆನು
ನಾ ಹೋಗಿ ಬರಲೆ
ನೀನಿರದ ಬಾಳಲ್ಲಿ
ನಂಗೇನು ಕೆಲಸ.....

ನಿನ್ನೊಲವ ಬಯಸಿ
ಕಾದಿದ್ದೆ ಬಂತು
ಒಲವಿನ ಮೋಡ ಕರಗಲೆಇಲ್ಲ
ಪ್ರೀತಿಯ ಮಳೆ ಹನಿ ಅದು ಸುರಿಸಲಿಲ್ಲ....

ಈ ಹೃದಯ ಬತ್ತಿ
ಮರಭೂಮಿಯಾಗಿಹುದು
ಭೀಕರ ಬರಗಾಲಕ್ಕೆ
ತುತ್ತಾಗಿ ಹೋಗಿಹುದು...

ತುಸು ಪ್ರೀತಿ ತೋರಿ ಕೂಗಿದರೆ ಒಮ್ಮೆ
ಹಿಂತಿರುಗಿ ನಾ ಬರುವೆ
ಕಾದಿಹೆನು ನಾನಿಲ್ಲಿ
ಕೂಗುವೆಯಾ ನೀನೊಮ್ಮೆ....

ಕೊನೆಗೊಂದು ಸಾರಿ
ನೀ ಬಂದು ನೋಡು
ಬಹುದೂರಾ ಹೊರಟಿಹೆನು
ಇನ್ನೆಂದು ಬರದಿರೆನು...!!!

$~ ರಾಜ್ ಪಾಟೀಲ್ ~$

Monday, 7 October 2013

ನನ್ನ ಕನಸಿನ ಜಾತ್ರೆಯಲಿ
ನಿನ್ನ ನೆನಪಿನ ಮಳಿಗೆಯ ಹಾಕಿರುವೆ
ಸಿಹಿ-ಕಹಿ ನೆನಪುಗಳ ನಡುವೆ
ನಾನಿರುವೆ ನಿನ್ನ ದಾರಿಯ ಕಾಯುತ್ತ...

ಬರುವೆಯಾ ಒಂದು ಸಾರಿ
ಕನಸಿನ ಜಾತ್ರೆಯ ನೆನಪಿನ ಮಳಿಗೆಗೆ
ಬೆಲೆಕೊಟ್ಟು ಖರಿದಿಸು ಒಂದೊಳ್ಳೆ ನೆನಪನ್ನು
ಬೆಲೆ ಕಟ್ಟಲಾಗದ ನನ್ನಿ ಕನಸನ್ನು...

ನಾನಿಂದು ಸಂಚಾರಿ ನೆನಪುಗಳ ವ್ಯಾಪಾರಿ
ಕನಸಿಂದ ಕನಸಿಗೆ ನೆನಪಿನ ಸರಕು ಬೇರೆ
ಬಂದು ನೀ ಒಮ್ಮೆ ವ್ಯಾಪಾರವ ಮಾಡು
ಕನಸು ಕರಗುವ ಮುನ್ನ ನೆನಪು ಮಾಸುವ ಮುನ್ನ...!!!


Saturday, 5 October 2013

ಕಾಣದ ಕಡಲೊಂದು
ಕೈಬೀಸಿ ಕರೆಯುತಿದೆ
ನನ್ನಿ ಮನಸು 
ನಿನ್ನೊಡಲ ಬಯಸಿದೆ...

ಕಡಲ ತಡಿಗೆ ದೂಡದಿರು
ಮಡಿಲ ಕಡೆಗೆ ವಾಲುತಿದೆ
ಒಡಲಾಳದಲಿ ಇಲ್ಲದಿರೆ 
ಕಡಲಾಳಕೆ ತಳ್ಳದಿರು.....


ಕಡಲ ಕೊರೆತಕ್ಹೆದರಿ ಹೃದಯ 
ಒಡಲ ಬಯಸಿ ಬಂದಿದೆ
ಮಡಿಯುವುದಾದರು ನಿನ್ನೊಡಲಲ್ಲಿ
ಮಡಿಲಿನೊಳಗೆ ಜಾಗ ಕೊಡು...!!!

Thursday, 3 October 2013

ಪಾಪ-ಪುಣ್ಯ

ಪಾಪ ಪುಣ್ಯದ ಲೆಕ್ಕ
ಇಡುತಿಹನು ಪಕ್ಕಾ
ಅವನೊಬ್ಬ ಪುಣ್ಯಾತ್ಮ
ಮೇಲಿನ ಪರಮಾತ್ಮ...

ಸ್ವರ್ಗ-ನರಕಗಳೆರಡು
ಬರಿ ನಮ್ಮ ಕಲ್ಪನೆ
ಪಾಪದ ಕೆಲಸಕ್ಕೆ
ಇಲ್ಲಿಯೆ ದಂಡನೆ....

ಸತ್ಯವಂತರಿಗಿಲ್ಲಿಲ್ಲ ಮನ್ನಣೆ
ಭಗವಂತ ಕೂಡ ತೋರಲ್ಲ ಕರುಣೆ
ಆ ದೇವ ಮಾಡಿದ ಮಲತಾಯಿ ಧೋರಣೆ
ಪಾಪಿಗಳಿಗಿಲ್ಲಿ ಆಯಸ್ಸು ಜಾಸ್ತಿನೆ...

ಸತ್ಯ-ಮಿಥ್ಯಗಳೆರಡು
ದೇವ-ದಾನವರಂತೆ
ಸತ್ಯಕ್ಕೆ ಸಾವಿಲ್ಲ
ಸುಳ್ಳೆಂದು ಗೆಲ್ಲಲ್ಲ...

ಪಾಪ ಪುಣ್ಯದ ಲೆಕ್ಕ
ಇಡುತಿಹನು ಪುಣ್ಯಾತ್ಮ
ಮಾಡಿದ ತಪ್ಪಿಗೆ ಶಿಕ್ಷೆ
ನೀಡುವನು ಪರಮಾತ್ಮ...!!!

$~ರಾಜ್ ಪಾಟೀಲ್~$

Wednesday, 2 October 2013

ಬಾನಾಡಿ ಹಾಗೆ ಹಾರಾಡೊ ಆಸೆ
ಬಾ ಗೆಳತಿ ನನ್ನ ರೆಕ್ಕೆ ನೀನಾಗು
ಆ ಮೀನಿನಂತೆ ಈಜಾಡೊ ಆಸೆ
ನೀರಲ್ಲಿ ನನ್ನ ಉಸಿರು ನೀನಾಗು...

ನಕ್ಷತ್ರದಂತೆ ನಾ ಮಿನುಗೊ ಆಸೆ
ಬಾನಲ್ಲಿ ನನ್ನ ಬೆಳಕು ನೀನಾಗು
ಆ ಮೋಡ ಕರಗಿ ಮಳೆಯಾಗೊ ಆಸೆ
ಭೂತಾಯಿ ಮಡಿಲು ನೀನಾಗು ಗೆಳತಿ...

ಸಾಗರದ ನೀರಲ್ಲಿ ಅಲೆಯಾಗೊ ಆಸೆ
ಜೋರಾಗಿ ಬೀಸುವ ತಂಗಾಳಿಯಾಗು
ಅಪ್ಪಿ ಮುದ್ದಾಡೊಗೊಂಬೆ ನಾ ನಾಗಿ
ನಕ್ಕು ನಲಿದಾಡೊ ಮಗುವಾಗು ಗೆಳತಿ..!!.