Thursday, 10 October 2013

ಬಾ ಮಳೆಯೆ ಬಾ ಮಳೆಯೆ
ಇಳಿದು ಬಾ ನೀ ಇಳೆಗೆ

ಭೂತಾಯಿ ಕಾದಿಹಳು
ಅಪ್ಪುಗೆಯ ಬಯಸಿಹಳು

ಮರಗಿಡಗಳು ಮೊರೆಯಿಡುತಿವೆ
ಹಸಿರಿಗಾಗಿ ಹೊಸ ಉಸಿರಿಗಾಗಿ

ಸಕಲ ಜಲಚರಗಳಿಗೆ
ತಾ ಹೊಸ ಜೀವಕಳೆಯ 

ಕಾಮನ ಬಿಲ್ಲಿನ ಬಣ್ಣದಲಿ
ಬಿಡಿಸು ಚಿತ್ತಾರದ ರಂಗೋಲಿ

ಬಾ ಮಳೆಯೆ ಬಾ ಮಳೆಯೆ
ಮಳೆಗಾಲದ ಹೂಮಳೆಯೆ

ಇಳಿದು ಬಾ ನೀ ಇಳೆಗೆ 
ಭೂತಾಯಿ ಮಡಿಲೊಳಗೆ...!!!

1 comment:

  1. ರಾಗವಾಗಿ ಹಾಡಿಕೊಂಡೇ, ಇದೀಗ ಮೋಡ ಕವಿಯುತ್ತಿದೆ!

    ReplyDelete