Saturday 28 March 2015

ಚೆಂದವಳ್ಳಿ ತೋಟದಲ್ಲಿ
ಅರಳಿನಿಂತ ಗುಲಾಬಿ ಹೂವೆ
ಚಂದದೂರ ಚೆಲುವೆ ನೀನು
ನಿನ್ನಂದಕೆ ಸಾಟಿಯಾರೇ ..

ಮಧುವರಸಿ ದುಂಬಿಯೊಂದು
ಸುಳಿಯುತಿಹುದು ಸುತ್ತಮುತ್ತ
ಒಲವ ಸುಧೆಯ ಹೀರೊ ಬಯಕೆ
ಜಾಣ ಕುರುಡು ಹೂ ಮನಕೆ ...

ಮನಸು ಒಂದು ಮಲ್ಲಿಗೆ ದಂಡು
ನೆನಪು ಸೆಳೆವ ದಾಸವಾಳ
ರೇಷ್ಮೆ ಕೂಡ ನಾಚುತಿಹುದು
ನಿನ್ನ ಕೆನ್ನೆ ನುಣುಪು ಕಂಡು ...

ಚಂದ್ರತಾನು ಚಿಂತಿಸುತಿಹನು
ಭುವಿಯ ಮೇಲೆ ನಿನ್ನ ನೋಡಿ
ಹಾಲಿನಂತಹ ಬೆಳಕ ಮುಂದೆ
ತನ್ನ ಬಿಂಬ ಸಪ್ಪೆ ಎಂದು ...

ನನ್ನ ಸ್ನೇಹ ಸಾಗರದಲ್ಲಿ
ಈಜಿ ಬಂದ ನಕ್ಷತ್ರ ಮೀನೆ
ಸಾಗುತಿರಲಿ ಸಾಗರಯಾನ
ಉಸಿರು ತಾನೇ ಸೋಲೊವರೆಗೆ ...

ಚೆಂದವಳ್ಳಿ ತೋಟದಲ್ಲಿ
ಅರಳಿನಿಂತ ಗುಲಾಬಿ ಹೂವೆ
ನನ್ನದೊಂದು ನೆನಪಿರಲಿ
ನಿನ್ನ ಮಧುರ ಮನಸಿನಲಿ ..!!

1 comment:

  1. ಹಾಡಿಕೊಂಡು ಒಮ್ಮೆ ನೋಡುತ್ತೇನೆ. ಚಂದವಳ್ಳಿ ತೋಟದ ಆ ಗತ ಪ್ರೇಯಸಿಯರು ಹಿಂದಿರುಗುವರೇ ನೋಡಬೇಕು. ವಾಪಸಾದರೆ ನಿಮಗೊಂದು ನಿಂನೆ ಹುಳಿ!

    ReplyDelete