Thursday 23 April 2015


ಜೀವನದ ಇಳಿಸಂಜೆಯಲಿ
ಒಮ್ಮೆಯಾದರು ಸಿಗುವ
ಹರೆಯದ ನೆನಪುಗಳ
ಮೆಲುಕಿಸುವ ಜೊತೆಗೂಡಿ...

ನವಿರಾದ ಪ್ರೀತಿಯಲಿ
ಕನವರಿಕೆಯ ಕನಸುಗಳು
ಒಲವಿನ ಜೊತೆಜೊತೆಗೆ
ಹುಸಿ ಮುನಿಸು ಬೆರೆತು...

ಹಸನಾಗೊ ಬಾಳಿನಲಿ
ಹದವಾಗಿ ತಾ ಬೆಳೆದು
ಮನಸುಗಳ ನಡುವಲ್ಲಿ
ವೈಮನಸ್ಸಿನ ಆಕ್ರಮಣ...

ಬಾಳ ಪಯಣದಲಿ
ಕವಲೊಡೆದವು ದಾರಿಗಳು
ಗುರಿಮುಟ್ಟಿವೆ ಮನಸುಗಳು
ಬೇರೆಯದೆ ರೀತಿಯಲಿ...

ಕಾಲಚಕ್ರವು ತಿರುಗಿ
ಸಂಂಧಿಸಿದರೆ ಒಂದೊಮ್ಮೆ
ಹರೆಯದ ತಪ್ಪುಗಳ
ಒಪ್ಪಿ ಮುನ್ನಡೆಯುವ...

ಮತ್ತದೇ ಕವಲುದಾರಿ
ಏಕಾಂತದೆಡೆಗೆ ಪಯಣ
ಮರೆತಂಧ ಮನಸಿನಲಿ
ಮರೆಯದ ನೆನಪುಗಳ ಹೊತ್ತು..!!

ರಾಜ್..!!

1 comment:

  1. ಬದುಕೆಲ್ಲ ಕವಲು ದಾರಿಗಳದೇ ಮೇಲುಗೈ!
    ಹರೆಯದ ಎಡವುಗಾಯಗಳಿಗೆ ಮತ್ತೆ ಮುಲಾಮಿಲ್ಲ ರಿಂಗಣದಿ...

    ReplyDelete