ನಿನ್ನ ನಗುವೊಂದು
ಕನಸ ಕದ್ದಿಹುದು
ಅಲೆಮಾರಿ ಹೃದಯಕ್ಕೆ
ಅಪಫಾತವಾಗಿದೆ ...
ನಿನಗೂ ಕನಸುಂಟೆ
ಕನಸಲಿ ನಾನುಂಟೆ
ಕಾಣದ ಕಡಲಿಗಾಗಿ
ಹಂಬಲಿಸುವ ಹುಂಬತನ ...
ಮನದ ಆಸೆಯು
ಕಣ್ಣಲಿ ಹೇಳಿದೆ
ಮೂಡಿದ ಬಯಕೆಗೆ
ತಡೆಯನು ನೀಡಿದೆ ...
ಅರಿವಿನ ಮೂಟೆಯ
ಪಕ್ಕಕೆ ಇಟ್ಟು
ಮನಸಿಗೆ ರೆಕ್ಕೆ ಪುಕ್ಕವ ಕಟ್ಟಿ
ತಪ್ಪೊಂದ ಮಾಡುವ...
ನಿನ್ನ ನಗುವೊಂದು
ಕನಸ ಕದ್ದಿಹುದು
ಕಳೆದ ಕನಸಿನಲಿ
ನನ್ನ ಮನಸಿಹುದು ..!!
ತಪ್ಪೊಂದ ಮಾಡುವ ಎನ್ನುವ ನಿಮ್ಮ ಕರೆಗೆ ಸಕಾರಾತ್ಮಕ ಪ್ರತಿಕ್ರಿಯೆಯು ಬರಲಿ.
ReplyDelete