Tuesday 7 October 2014


ನೋಡು ಚಂದಿರನ
ಅಪಹರಣವಂತೆ
ಅಪರಾಧಿ ನಾನಲ್ಲ
ಅಪವಾದವೆನಗೇಕೆ…

ಯಾವ ಪ್ರೇಮಿಯ
ಪ್ರಿಯತಮೆಯ ಕಾಡಿದನೊ
ಯಾರ ಚಲುವೆಯ ಚಿತ್ತ
ಚಂಚಲಗೊಳಿಸಿದನೊ…

ನನ್ನ ಚುಕ್ಕಿಗು ಅವ
ಬಹುವಾಗಿ ಕಾಡಿದನು
ಕಾಡಿ -ಬೇಡಿ ನಾ
ನನ್ನವಳ ಬಳಿ ಸೆಳೆದೆ…

ನೋಡು ಚಂದಿರನ
ಅಪಹರಣವಂತೆ
ಯಾರವರು ಕದ್ದವರು
ಚೋರನ ಚೋರಿಯಾಗಿದೆ…

ಆಗಸದಿ ಚಂದಿರನಿಲ್ಲ
ಯಾರು ಕದ್ದರೊ ಕಾಣೆ
ಅಪರಾಧಿ ನಾನಲ್ಲ
ಅಪವಾದವೆನಗೇಕೆ…?

ರಾಜ್…!!

1 comment:

  1. ಅಪವಾದ ಬರಲಾರದು ಕವಿಯೇ ಚಂದಿರನ ಕದ್ದವನು ಅವನೇ ಭಾನು!
    ಒಲವಲಿ ಅದೇಕಿನಿತು ನೋವ ಪ್ರಪಾತ?

    ReplyDelete