Tuesday 28 October 2014


ಕಡಲ ದಡದಲ್ಲಿ
ನಿನಗಾಗಿ ಅಲೆದು
ಅಲೆಗಳೊಲಿದವು
ನೀನೊಲಿಯಲಿಲ್ಲ…

ಇನ್ನೂ ಕಾಯುತಿದೆ
ನನ್ನೊಲವಿನ ಭಾವ
ಸುರಿಯಬಹುದೆ ಎಂದು
ಒಲವಿನ ಮಳೆಗಾಗಿ…

ಅಲೆಗಳು ಬಿಕ್ಕಳಿಸಿವೆ
ನನ್ನಲೆದಾಟವ ಕಂಡು
ಪ್ರತಿ ಬಾರಿ ಮುನ್ನುಗ್ಗಿ ಬರುತಿವೆ
ಈ ಗೆಳೆಯನ ಸಂತೈಸಲು…

ಅಲೆಗಳ ಹೊಡೆತಕ್ಕೆ
ಕಲ್ಲು ಕರಗುವುದು
ನಿನ್ನ ಹೃದಯವ ಕರಗಲು
ಸಪ್ತ ಸಾಗರವೇ ಒಂದಾಗಿ ಬರಬೇಕೆ…!

2 comments:

  1. ಸಪ್ತ ಸಾಗರಗಳೂ ಕರಗಿಸಲಾರವೇನೋ! ಹತ ವಿಧಿ!

    ReplyDelete
  2. ಅಯ್ಯೋ, ಸಪ್ತ ಸಾಗರ ಎಲ್ಲಾ ಯಾಕೆ ಸರ್,,,, ಒಂದು ಡೈರಿ ಮಿಲ್ಕ್ ಚಾಕೊಲೆಟ್ ಕೊಡ್ಸಿ, ಒಂದು ಅಣ್ಣಾವ್ರ ಸಿನಿಮಾ ತೋರ್ಸಿ,,, (ತಮಾಷೆಗೆ)

    ಸುಂದರ ಭಾವನಾತ್ಮಕ ಸಾಲುಗಳು

    ReplyDelete