Tuesday 7 October 2014


ಒಲವೆಂಬ ಹಣತೆ
ನೀನಾಗಲಿಲ್ಲ
ಬದುಕಲ್ಲಿ ಕತ್ತಲೆಯು
ದೂರಾಗಲಿಲ್ಲ…

ಕೋಲ್ಮಿಂಚು ಬೆಳಕಂತೆ
ಮಿಂಚಿ ಮರೆಯಾದೆ
ಜಗಬೆಳಗೊ ಸೂಯ೯ನಿಗೂ
ವಿರಹದ ಕಾಟ…

ಮನೆ ಬೆಳಗೊ ಬದಲಾಗಿ
ಮನವನ್ನೇ ನೀ ದಹಿಸಿ
ನನ್ನೆದೆಯ ಬಾಂದಳದಿ
ಶಾಶ್ವತದ ಗ್ರಹಣ…

ಮೇಣದ ಬತ್ತಿಯಂತೆ
ಒಳಗೊಳಗೇ ನಾ ಕರಗಿ
ಜೊತೆಯಾದ ನೆರಳಿಗೆ
ಬೆಳಕಾಗಿ ಬದುಕಿರುವೆ…

ಒಲವೆಂಬ ಹಣತೆ
ನೀನಾಗಲಿಲ್ಲ
ನೀನಿರದೆ ಬದುಕಲ್ಲಿ
ರವಿ ಮೂಡಲಿಲ್ಲ…!!

1 comment:

  1. ತೀವ್ರ ವ್ಯಥೆಯ ಕವಿತೆ.
    ಒಂದು ಶೀರ್ಷಿಕೆ ಇರಲಿ.

    ReplyDelete