Tuesday 28 October 2014

ಕಣ್ಣ ಬಿಟ್ಟು ಜಾರಿದ
ನೀನೆಂಬ ಕನಸು
ಅಡಗಿ ಕುಳಿತಿದೆ
ಮನದಲ್ಲಿ ನೆನಪಾಗಿ…

ಕನಸಾಗಿ ಮಧುರವಿತ್ತು
ಮಧುವಿರದ ನೆನಪೀಗ
ಕನಸ ಕಚಗುಳಿಗಿಂತ
ವಿರಹದುರಿ ಈ ನೆನಪು…

ಕೈ ಮುಗಿದು ಬೇಡುವೆನು
ಕನಸಲ್ಲಿ ನೆನಪಾಗಬೇಡ
ನೆನಪಲ್ಲೇ ಕನಸು ಸಾಕು
ಮತ್ತೆ ಮತ್ತೆ ಕಾಡಬೇಡ…

ಕಣ್ಣ ಬಿಟ್ಟು ಜಾರಿದ ಕನಸು ನೀನು
ನೆನಪಾಗಿ ಕಾಡುವ ಹಂಬಲವೇಕೆ
ನಿನ್ನ ಕನಸಿನಾಸರೆಯಲ್ಲಿ ಬದುಕುವ ಆಸೆಯಿಲ್ನ
ಮರೆಗುಳಿ ಮನಸಿಗೆ ನೆನಪಿನ ಹಂಗೇತಕೆ…!!

1 comment:

  1. §ಕನಸಲ್ಲಿ ನೆನಪಾಗಬೇಡ
    ನೆನಪಲ್ಲೇ ಕನಸು ಸಾಕು §
    ಅರೆರೆ...

    ReplyDelete