Tuesday, 28 October 2014


ನೀ ಬಂದೆ ಬಾಳಲ್ಲಿ
ಬೇಸಿಗೆಯ ಮಳೆಯಂತೆ
ಮೋಡಗಳ ಸುಳಿವಿಲ್ಲ
ಕಾಮನಬಿಲ್ಲೊಂದು ಮೂಡಿದೆ…

ಬಳಿಯಲ್ಲಿ ನೀನಿರಲು
ನನ್ನ ಬಳಸಿರಲು
ತಂಗಾಳಿ ತಂಪಾಗಿ
ಮೈ ಸೋಕಿದ ಅನುಭವ…

ಚಂದ್ರಂಗೂ ಅಸೂಯೆ
ನೀ ನನ್ನ ವರಿಸಿರಲು
ಚುಕ್ಕೆಗಳು ಚದುರಿವೆ
ನಿನ್ನಂದವ ನೋಡಲು…

ಭೂತಾಯಿ ಮಡಿಲಲ್ಲಿ
ಪುಟ್ಟದೊಂದು ಗುಡಿಸಲು
ನನ್ನವಳೇ ನಿನಗೆಂದೆ
ಈ ಬಾಳು ಮೀಸಲು…!!

ರಾಜ್…!!

1 comment:

  1. ಪುಟ್ಟದೊಂದು ಗುಡಿಸಲು ಒಳಗೆ ಅರಮನೆಯ ಒಲುಮೆ...

    ReplyDelete