Thursday 17 July 2014

ಮತ್ತೆ ಹುಟ್ಟಿ ಬನ್ನಿ
ಸತ್ತ ಭಾವನೆಗಳೇ
ಮರೆತ ಗೆಳತಿಯ
ನೆನಪಾಗಿ ಬನ್ನಿ…

ನೆನೆಗುದಿಗೆ ಬಿದ್ದಿಹವು
ನೂರೆಂಟು ಕನಸುಗಳು
ಮನದ ಉಗ್ರಾಣದಲ್ಲಿ
ಕನಸುಗಳ ರಾಶಿ…

ಬತ್ತಿ ಹೋಗಿದೆ ಚೈತನ್ಯ
ಬದುಕುವ ಆಸೆ ಬಿಟ್ಟು
ಈ ದೇಹವೀಗ
ಬರಿ ಬೆದರುಬೊಂಬೆ…

ಮತ್ತೆ ಹುಟ್ಟಿ ಬನ್ನಿ
ಸತ್ತ ಭಾವನೆಗಳೆ
ಮರೆತ ಗೆಳತಿಯ ಮುಂದೆ
ಮತ್ತೆ ಬದುಕುವ ಬನ್ನಿ…!!

2 comments:

  1. ಭಾವನೆಗಳ ಮರುಶ್ಚೇತನಕೆ ಬಯಸಿದ್ದು ಖುಷಿ ಸಂಗತಿ.

    ReplyDelete
  2. ಧನ್ಯವಾದಗಳು ಸರ್ :)

    ReplyDelete