Saturday 19 July 2014

ಕಾಣದ ಕಡಲೊಂದು
ಕೈ ಬೀಸಿ ಕರೆಯುತಿದೆ
ನಿನ್ನನಗಲಿ ಹೋಗಲಾರೆ
ಉಳಿಸಿಕೊ ಬಂದೆನ್ನನು…

ಆ ಬಾನ ಅಂಗಳದಿ
ಅಲೆಯುವ ಅಲೆಮಾರಿ
ನಾನಾಗಬೇಕಿಲ್ಲ ನೀನಿಲ್ಲೆ
ಇರುವಾಗ ನನ್ನದೇನಿದೆ ಅಲ್ಲಿ …

ನಿನ್ನ ಮಡಿಲೊಳಗೆ ಮಲಗಿ
ಕನಸುಗಳ ಹೆಣೆವಾಸೆ
ಈ ಭೂಮಿ ಒಡಲೊಳಗೆ
ಸೆಳೆಯಲು ಹವಣಿಸಿದೆ…

ಕಾಣದ ಕಡಲೊಂದು
ಕೈ ಬೀಸಿ ಕರೆಯುತಿದೆ
ನಿನ್ನನಗಲಿ ಹೋದರೆ
ಮತ್ತೊಂದು ಬದುಕೆಲ್ಲಿ…?

2 comments:

  1. ದಿಕ್ಕು ದೆಸೆಯಾಗಬಲ್ಲವಳು ಹಿಂದಿರುಗುವಳು ಬಲು ಬೇಗ.

    ReplyDelete