Friday 11 July 2014

ಮತ್ತೆ ಬಂದಿದೆ ಮಳೆ
ಮತ್ತೊಂದು ಮುಂಗಾರು
ಜೋತೆಯಾಗು ಬಾ ಗೆಳತಿ
ಮಳೆಯಲಿ ಜೊತೆಯಲಿ...

ಕೈ ಬಿಸಿ ಕರೆಯುತಿದೆ
ಆ ಮರವು ನಮ್ಮನ್ನು
ನೆರಳಿನಡಿ ಜೊತಯಾಗಿ
ಪ್ರೇಮದ ಕಚಗುಳಿಯಾಡಲು...

ತುಂತುರು ನೀರ ಹನಿ
ತಂಗಾಳಿ ತಂಪಾಗಿ
ನೀನಿರಲು ಸನಿಹದಲಿ
ಹಿತವಾಗಿ ಮೈ ಸೋಕಿದೆ...

ನೂರಾಸೆ ಮನದಲ್ಲಿ
ಜನಿಸಿದವು ಅರೆಘಳಿಗೆ
ಬೆಳೆಸಿ ಪೊಷಿಸುವ
ಜೊತೆಯಾಗು ಬಾ ಗೆಳತಿ...!!!

3 comments:

  1. ನೆನೆಸಿಕೊಂಡರೇನೇ ದೃಶ್ಯ ರೋಮಾಂಚಕವಾಗಿದೆ.

    ReplyDelete
  2. ಮುಂಗಾರಿನ ತುಂತರು ಮನದಂಗಳದಲ್ಲಿ ಮೇಳೈಸಿರಲು ನಿನ್ನ ಸನಿಹದ ಮತ್ತು ಮೈ ಮನದಿ ಬಿಸಿ ಏರಿಸಿತು. ಎಂಥಹ ಸುಂದರ ದೃಷ್ಯ ಕಾವ್ಯ.

    ReplyDelete