Friday 11 July 2014

ಅಲೆಯುತ್ತಿದೆ ಅನಾಥವಾಗಿ
ಅಲ್ಲೊಂದು ಕವನ
ಯಾವ ಕವಿಯ ಹೃದಯದಿಂದ
ಜನಿಸಿತೊ ಕಾಣೆ…

ಚದುರಿ ಹೊಗಿವೆ ದೂರ
ಅಲ್ಲಲ್ಲಿ ಅಕ್ಷರಗಳು
ಅಕ್ಷರಗಳಲ್ಲ ಅವು
ಆ ಕವಿಯ ಭಾವನೆಗಳು…

ಯಾರು ಕಾರಣರೊ ಕಾಣೆ
ಆ ಕವಿತೆಯ ಜನನಕ್ಕೆ
ಪ್ರೀತಿಯ ಮರಣದಲಿ
ಹುಟ್ಟಿತೊಂದು ಕವನ…

ಭಾವನೆಗಳ ಮೌನಕ್ಕೆ
ಹೃದಯದ ನೋವದು
ಅಕ್ಷರಗಳ ರೂಪದಲಿ
ಕವಿತೆಯಾಗಿ ಸಾಂತ್ವನ…

ಬತ್ತಿಹೊಗಿವೆ ಕನಸುಗಳು
ಪ್ರೀತಿಯ ನಿರೀಕ್ಷೆಯಲ್ಲಿ
ಕಾದಿರುವ ಕಣ್ಣೊಟಗಳು
ಅನಾಥವಾಗಿದೆ ಕವನ…!!

1 comment:

  1. ಅನಾಥ ಕವನದ ಅಳಲು, ಇನ್ನೊಬ್ಬ ಕವಿಗೆ ಮಾತ್ರ ಅರಿವಾಗಬಲ್ಲದಲ್ಲವೇ ಮಿತ್ರ.

    ReplyDelete