Friday, 11 July 2014

ಬಾರದಿರು ಕಣ್ಣೆದುರು
ಮರೆತ ಹೃದಯವಿದು
ಬಂದರೆ ಮತ್ತೊಮ್ಮೆ
ಮತ್ತದೆ ರೋಮಾಂಚನ...

ಮಾತಿಲ್ಲದಿದ್ದರೂ
ಮೌನವು ಪ್ರೀತಿಯೆ
ನೀ ಒಲಿಯದಿದ್ದರು
ಅತೀ ಒಲವು ಎನಗೆ...

ಅಂದೆಂದೊ ಮರೆತಿದ್ದೆ
ಮತ್ತೇ ನೀ ಎದುರಾದೆ
ನಿನ್ನಿರುವಿಕೆ ಅರಿತೊಡನೆ
ಹೃದಯದೊಳು ಕಂಪನ...

ಮನಸಿನಾಳದೊಳಗೆಲ್ಲೊ
ಅವಿತ ನೆನಪುಗಳು
ಮೈಕೊಡವಿ ಏಳುತ್ತಿವೆ
ಹೊಸತೊಂದು ತಲ್ಲಣ...

ಬಾರದಿರು ಗೆಳತಿ
ಮರೆತ ಹೃದಯವಿದು
ಮಾಗಿದ ಗಾಯಕ್ಕೆ
ಕೆರೆದು ಹುಣ್ಣಾಗದಿರು...!!!

1 comment:

  1. ಕೆಲವೊಮ್ಮೆ ಪುನರಾಗಮನಾಘಾತವೂ ಪ್ರಳಯ ಕಾರಣವೇ ನಿಜ.

    ReplyDelete